ಸ್ಟ್ರೀಟ್ ಫುಡ್ ಇಲ್ಲವೇ ಚಾಟ್‌ಗಳಿಗೆ ಈ ಗ್ರೀನ್ ಚಟ್ನಿ ಸೇರಿಸದೇ ಹೋದರೆ ಅದರ ಅದ್ಭುತ ಸ್ವಾದ ಸಂಪೂರ್ಣವಾಗುವುದೇ ಇಲ್ಲ. ಪುದೀನಾ, ಕೊತ್ತಂಬರಿ ಸೊಪ್ಪು ಸೇರಿದಂತೆ ಇತರ ಪದಾರ್ಥಗಳನ್ನು ಬಳಸಿ ಮಾಡುವ ಗ್ರೀನ್ ಚಟ್ನಿಯನ್ನು ಮುಖ್ಯವಾಗಿ ಪಾನಿಪೂರಿಗಳಲ್ಲಿ ಬಳಸಲಾಗುತ್ತದೆ. ಮನೆಯಲ್ಲಿಯೇ ಪಾನಿಪೂರಿ ತಯಾರಿಸುವ ಸಂದರ್ಭ ಹೆಚ್ಚು ಕೆಲಸ ಎಂದು ಕೊಂದು ಹಲವರು ಗ್ರೀನ್ ಚಟ್ನಿ ಮಾಡೋದೇ ಕೈಬಿಡುತ್ತಾರೆ. ಆದರೆ ಇದನ್ನು ಮಾಡೋದು ಅಷ್ಟೇ ಸಿಂಪಲ್ ಆಗಿದೆ. ಚಾಟ್‌ಗಳಿಗೆ ಮಾತ್ರವೇ ಯಾಕೆ, ಇದನ್ನು ಸಲಾಡ್ ಹಾಗೂ ಸ್ಯಾಂಡ್‌ವಿಚ್ ಸ್ಪ್ರೆಡ್‌ನಂತೆಯೂ ಉಪಯೋಗಿಸಬಹುದು. ಹಾಗಿದ್ರೆ ಗ್ರೀನ್ ಚಟ್ನಿ ಮಾಡೋದು ಹೇಗೆಂದು ನೋಡೋಣ.
Advertisement
ಬೇಕಾಗುವ ಪದಾರ್ಥಗಳು:
ಕೊತ್ತಂಬರಿ ಸೊಪ್ಪು – ಒಂದೂವರೆ ಕಪ್
ಪುದೀನಾ ಸೊಪ್ಪು – ಅರ್ಧ ಕಪ್
ಶುಂಠಿ – 1 ಇಂಚು
ಹಸಿರು ಮೆಣಸಿನಕಾಯಿ – 2
ಹುರಿದ ಜೀರಿಗೆ ಪುಡಿ – ಅರ್ಧ ಟೀಸ್ಪೂನ್
ಕಪ್ಪು ಉಪ್ಪು- ಅರ್ಧ ಟೀಸ್ಪೂನ್
ನಿಂಬೆ ರಸ – 1 ಟೀಸ್ಪೂನ್
ಚಾಟ್ ಮಸಾಲಾ – ಅರ್ಧ ಟೀಸ್ಪೂನ್
ನೀರು – 4 ಟೀಸ್ಪೂನ್ ಇದನ್ನೂ ಓದಿ: ಸಂಜೆಯ ಸ್ನ್ಯಾಕ್ಸ್‌ಗೆ ತಯಾರಿಸಿ ಚೀಸೀ ಬ್ರೊಕಲಿ ಪಕೋಡಾ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ನಿಂಬೆ ರಸ ಮತ್ತು ನೀರನ್ನು ಹೊರತುಪಡಿಸಿ ಎಲ್ಲಾ ಪದಾರ್ಥಗಳನ್ನು ಮಿಕ್ಸರ್ ಜಾರ್‌ಗೆ ಹಾಕಿ ರುಬ್ಬಿಕೊಳ್ಳಿ.
* ಸ್ಪೂನ್ ಸಹಾಯದಿಂದ ಅದನ್ನು ಒಂದು ಬಾರಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
* ಈಗ ನಿಂಬೆ ರಸ ಮತ್ತು 2 ಟೀಸ್ಪೂನ್ ನೀರು ಸೇರಿಸಿ ನಂತರ ಅದನ್ನು ಮತ್ತೆ ನಯವಾಗಿ ರುಬ್ಬಿಕೊಳ್ಳಿ.
* ಅಗತ್ಯವಿದ್ದರೆ ಇನ್ನೆರಡು ಟೀಸ್ಪೂನ್ ನೀರು ಸೇರಿಸಿ.
* ಇದೀಗ ಗ್ರೀನ್ ಚಟ್ನಿ ಸಿದ್ಧವಾಗಿದೆ. ಗಾಳಿಯಾಡದ ಡಬ್ಬಿಯಲ್ಲಿ ಇದನ್ನು ಸಂಗ್ರಹಿಸಿ, ಫ್ರಿಜ್‌ನಲ್ಲಿಟ್ಟರೆ ಬೇಕೆಂದಾಗ ಬಳಸಿಕೊಳ್ಳಬಹುದು. ಇದನ್ನೂ ಓದಿ: ಹೈಡ್ರೇಟ್ ಆಗಿರಲು ಸವಿಯಿರಿ ಕಲ್ಲಂಗಡಿ, ದಾಳಿಂಬೆಯ ಪಂಚ್
Advertisement
Web Stories