ರವಿವಾರ ಬಂತು ಎಂದರೆ ನಾನ್‍ವೆಜ್ ಪ್ರಿಯರಿಗೆ ಹಬ್ಬ. ಈ ಚಳಿ ಸಮಯದಲ್ಲಿ ಎಲ್ಲರಿಗೂ ಬೋಂಡ, ಬಜ್ಜಿ ತಿನ್ನಬೇಕು ಅನ್ನಿಸುತ್ತೆ. ಅದೇ ರೀತಿ ಇಂದು ನಾನ್‍ವೆಜ್ ಪ್ರಿಯರಿಗಾಗಿ ಎಗ್ 65 ಮಾಡುವ ವಿಧಾನವನ್ನು ಇಲ್ಲಿ ತಿಳಿಸಲಾಗುತ್ತಿದೆ. ಈ ರೆಸಿಪಿ ತುಂಬಾ ಸುಲಭ ಮತ್ತು ತಿನ್ನಲು ಸಖತ್ ಆಗಿರುತ್ತೆ.
Advertisement
ಬೇಕಾಗಿರುವ ವಿಧಾನ:
* ಮೊಟ್ಟೆಯ ಬಿಳಿಭಾಗ(ಬೇಯಿಸಿ ಕತ್ತರಿಸಬೇಕು) – 1 ಕಪ್
* ಬೆಳ್ಳುಳ್ಳಿ, ಶುಂಠಿ ಪೇಸ್ಟ್ – 1 ಚಮಚ
* ಕೆಂಪು ಮೆಣಸಿನ ಪುಡಿ – 1/4 ಚಮಚ
* ಗರಂ ಮಸಾಲಾ ಪುಡಿ – 1/4 ಚಮಚ
* ಬ್ರೆಡ್ ತುಂಡುಗಳು – 1/2 ಕಪ್
* ಮೈದಾ ಹಿಟ್ಟು – 1 ಕಪ್
Advertisement
* ಮೊಟ್ಟೆಯ ಬಿಳಿ – 1 ಚಮಚ
* ಹಸಿರು ಮೆಣಸಿನಕಾಯಿಗಳು – 1 ಚಮಚ
* ಕರಿಬೇವಿನ ಎಲೆಗಳು – 1 ಚಮಚ
* ಮೊಸರು – 1/4 ಕಪ್
* ರೆಡ್ ಚಿಲ್ಲಿ ಸಾಸ್ – 1 ಚಮಚ
* ಸಕ್ಕರೆ – 1 ಚಿಟಿಕೆ
* ಕೊತ್ತಂಬರಿ ಸೊಪ್ಪು – 1 ಚಮಚ
* ರುಚಿಗೆ ತಕ್ಕಷ್ಟು ಉಪ್ಪು
Advertisement
Advertisement
ಮಾಡುವ ವಿಧಾನ:
* ಒಂದು ಬಟ್ಟಲಿನಲ್ಲಿ ಬೇಯಿಸಿ ಕಟ್ ಮಾಡಿದ ಮೊಟ್ಟೆಯ ಬಿಳಿ ತುಂಡುಗಳನ್ನು ಹಾಕಿ. ಅದಕ್ಕೆ ಬೆಳ್ಳುಳ್ಳಿ – ಶುಂಠಿ ಪೇಸ್ಟ್, ಗರಂ ಮಸಾಲಾ ಪುಡಿ, ಕೆಂಪು ಮೆಣಸಿನ ಪುಡಿ, ಬ್ರೆಡ್ ತುಂಡುಗಳು, ಮೈದಾ ಹಿಟ್ಟು, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಬಾಣಲಿಯನ್ನು ಬಿಸಿ ಮಾಡಿ ಎಗ್ ಮಿಶ್ರಣವನ್ನು ಬೊಂಡದ ರೀತಿ ಎಣ್ಣೆಗೆ ಹಾಕಿ ಡೀಪ್ ಫ್ರೈ ಮಾಡಿ.
* ನಂತರ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ಬೆಳ್ಳುಳ್ಳಿ-ಶುಂಠಿ ಪೇಸ್ಟ್, ಹಸಿರು ಮೆಣಸಿನಕಾಯಿ, ಕರಿಬೇವಿನ ಎಲೆಗಳು, ಮೊಸರು, ಕೆಂಪು ಮೆಣಸಿನಕಾಯಿ ಸಾಸ್, ಕೆಂಪು ಮೆಣಸಿನ ಪುಡಿ, ಗರಂ ಮಸಾಲಾ ಪುಡಿ, ಒಂದು ಚಿಟಿಕೆ ಸಕ್ಕರೆ, ಕಟ್ ಮಾಡಿದ ಕೊತ್ತಂಬರಿ ಸೊಪ್ಪು ಸೇರಿಸಿ, ಚೆನ್ನಾಗಿ ಹುರಿಯಿರಿ.
* ಈ ಫ್ರೈಗೆ ಹುರಿದ ಮೊಟ್ಟೆಯ ಸೇರಿಸಿ. ಚಿಟಿಕೆ ಉಪ್ಪು ಸೇರಿಸಿ ಫ್ರೈ ಮಾಡಿ ಗ್ಯಾಸ್ ಆಫ್ ಮಾಡಿ. ಈಗ ಎಗ್ 65 ರೆಡಿ.