ತೊಗರಿ ಬೇಳೆ ಬಳಸಿ ಮಾಡಲಾಗುವ ದಾಲ್ ತೋವೆ (Dal Tovve) ಸಾಂಪ್ರದಾಯಿಕ ಅಡುಗೆಗಳಲ್ಲಿ ಒಂದು. ಮುಖ್ಯವಾಗಿ ದಕ್ಷಿಣ ಭಾರತ ಹಾಗೂ ಉತ್ತರ ಕೆನರಾ ಪ್ರದೇಶದಲ್ಲಿ ಇದು ಅತ್ಯಂತ ಫೇಮಸ್. ದಾಲ್ ಫ್ರೈ ಅಥವಾ ದಾಲ್ ತಡ್ಕಾಗೆ ಹೋಲಿಸಿದರೆ ದಾಲ್ ತೋವೆ ತುಂಬಾ ವಿಭಿನ್ನವಾದ ಸ್ವಾದ ನೀಡುತ್ತದೆ. ಅನ್ನ ಮಾತ್ರವಲ್ಲದೇ ಇಡ್ಲಿಯೊಂದಿಗೂ ಇದರ ಟೇಸ್ಟ್ ಸೂಪರ್ ಎನಿಸಿಕೊಳ್ಳುತ್ತದೆ. ಸುಲಭವಾಗಿ ಮಾಡಬಹುದಾದ ದಾಲ್ ತೋವೆಯನ್ನು ಒಮ್ಮೆ ನೀವು ಕೂಡಾ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಬೇಯಿಸಲು:
ತೊಗರಿಬೇಳೆ – ಅರ್ಧ ಕಪ್
ಸೀಳಿದ ಮೆಣಸಿನಕಾಯಿ – 2
ಎಣ್ಣೆ – 1 ಟೀಸ್ಪೂನ್
ನೀರು – ಒಂದೂವರೆ ಕಪ್
ಇತರ ಪದಾರ್ಥಗಳು:
ಉಪ್ಪು – ಅರ್ಧ ಟೀಸ್ಪೂನ್
ಹಿಂಗ್ – ಕಾಲು ಟೀಸ್ಪೂನ್
ನೀರು – ಅರ್ಧ ಕಪ್ ಇದನ್ನೂ ಓದಿ: ರುಚಿಕರವಾದ ಗೋಡಂಬಿ ತೊಂಡೆಕಾಯಿ ಪಲ್ಯ ಮಾಡಿ
Advertisement
Advertisement
ಒಗ್ಗರಣೆಗೆ:
ತೆಂಗಿನ ಎಣ್ಣೆ – 3 ಟೀಸ್ಪೂನ್
ಸಾಸಿವೆ – 1 ಟೀಸ್ಪೂನ್
ಕರಿಬೇವಿನ ಎಲೆ – ಕೆಲವು
ಒಣ ಕೆಂಪು ಮೆಣಸಿನಕಾಯಿ – 2
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
Advertisement
ಮಾಡುವ ವಿಧಾನ:
* ಮೊದಲಿಗೆ ಪ್ರೆಶರ್ ಕುಕ್ಕರ್‌ನಲ್ಲಿ ತೊಗರಿ ಬೇಳೆ, ಸೀಳಿದ ಮೆಣಸಿನಕಾಯಿ ಮತ್ತು 1 ಟೀಸ್ಪೂನ್ ಎಣ್ಣೆಯನ್ನು ಹಾಕಿ, ಒಂದೂವರೆ ಕಪ್ ನೀರನ್ನು ಸೇರಿಸಿ, 5 ಸೀಟಿ ಬರುವವರೆಗೆ ಬೇಯಿಸಿ.
* ಬೆಂದ ಬೇಳೆಯನ್ನು ಸ್ವಲ್ಪ ಹಿಸುಕಿ ಮೃದು ಮಾಡಿ.
* ಈಗ ಅದಕ್ಕೆ ಉಪ್ಪು, ಹಿಂಗ್ ಮತ್ತು ಅರ್ಧ ಕಪ್ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಕುದಿಸಿ.
* ಈಗ ಒಗ್ಗರಣೆ ತಯಾರಿಸಲು ಸಣ್ಣ ಕಡಾಯಿಯಲ್ಲಿ 3 ಟೀಸ್ಪೂನ್ ತೆಂಗಿನ ಎಣ್ಣೆ ಬಿಸಿ ಮಾಡಿ, ಅದಕ್ಕೆ ಸಾಸಿವೆ, ಕೆಲವು ಕರಿಬೇವಿನ ಎಲೆಗಳು ಹಾಗೂ ಒಣ ಕೆಂಪು ಮೆಣಸಿನಕಾಯಿಯನ್ನು ಸೇರಿಸಿ, ಸಾಸಿವೆ ಒಡೆಯುವವರೆಗೆ ಬಿಸಿ ಮಾಡಿ.
* ಈಗ ಒಗ್ಗರಣೆಯನ್ನು ದಾಲ್ ಮಿಶ್ರಣದ ಮೇಲೆ ಸುರಿಯಿರಿ.
* ಕೊತ್ತಂಬರಿ ಸೊಪ್ಪನ್ನು ಸೇರಿಸಿ.
* ಇದೀಗ ದಾಲ್ ತೋವೆ ತಯಾರಾಗಿದ್ದು, ಇಡ್ಲಿ ಅಥವಾ ಅನ್ನದೊಂದಿಗೆ ಬಡಿಸಿ. ಇದನ್ನೂ ಓದಿ: ರುಚಿಕರವಾದ ಆಲೂಗಡ್ಡೆ ಮಂಚೂರಿಯನ್ ಮಾಡಿ ನೋಡಿದ್ದೀರಾ?