ಯಾವಾಗಲೂ ಒಂದೇ ರೀತಿಯ ಸಾರು ತಿಂದು ನಿಮ್ಮ ನಾಲಿಗೆಗೆ ಬೋರ್ ಆಗಿರುತ್ತೆ. ಅದಕ್ಕೆ ಇಂದು ನಿಮ್ಮ ನಾಲಿಗೆಗೆ ಹಳ್ಳಿ ರುಚಿಯನ್ನು ತೋರಿಸಿ. ಇದನ್ನು ಮಾಡುವುದು ತುಂಬಾ ಸರಳ. ಹೆಚ್ಚು ಮಸಾಲೆ ಏನು ಬೇಡ. ಸಿಂಪಲ್ ಆಗಿ ಮಾಡುವ ಈ ರೆಸಿಪಿಯನ್ನು 20 ನಿಮಿಷದಲ್ಲಿಯೇ ಮಾಡಬಹುದು. ಹಾಗಾದರೆ ಯಾವುದು ಆ ರೆಸಿಪಿ ಎಂದು ಯೋಚನೆ ಮಾಡುತ್ತಿದ್ದೀರಾ ಅದೇ ‘ಕಾಯಿ ಹಾಲು ಕಾಳುಮೆಣಸಿನ ಸಾರು’. ಈ ಸಾರನ್ನು ನೀವು ಮನೆಯಲ್ಲಿಯೇ ಟ್ರೈ ಮಾಡಿ.
Advertisement
ಬೇಕಾಗುವ ಸಾಮಾಗ್ರಿಗಳು:
* ಕಾಳು ಮೆಣಸು – 1 ಟೀಸ್ಪೂನ್
* ಜೀರಿಗೆ – 1/2 ಟೀಸ್ಪೂನ್
* ಬೆಳ್ಳುಳ್ಳಿ – 7 ಎಸಳು
* ಹಸಿ ಶುಂಠಿ – 1/2 ಇಂಚು
* ಅರಿಶಿನ ಪುಡಿ – 1/4 ಟೀಸ್ಪೂನ್
* ಉಪ್ಪು – 1 ಟೀಸ್ಪೂನ್
* ಬೆಲ್ಲ – 1/2 ಟೀಸ್ಪೂನ್
Advertisement
* ತೆಂಗಿನಕಾಯಿ ಹಾಲು – 1 ಕಪ್
* ಕೊತ್ತಂಬರಿ ಸೊಪ್ಪು – ಅರ್ಧ ಕಪ್
* ನಿಂಬೆ ರಸ – 2 ಟೀಸ್ಪೂನ್
* ಎಣ್ಣೆ – 2 ಟೀಸ್ಪೂನ್
* ಸಾಸಿವೆ – 1/2 ಟೀಸ್ಪೂನ್
* ಒಣ ಮೆಣಸಿನಕಾಯಿ – 2
* ಕರಿಬೇವು – 10
Advertisement
Advertisement
ಮಾಡುವ ವಿಧಾನ:
* ಒಂದು ಕುಟ್ಟಾಣಿಗೆ ಕಾಳು ಮೆಣಸು, ಜೀರಿಗೆ ಹಾಕಿ, ಕುಟ್ಟಿ ಪುಡಿಮಾಡಿ. ಇದಕ್ಕೆ 6 ರಿಂದ 7 ಬೆಳ್ಳುಳ್ಳಿ ಎಸಳು, ಅರ್ಧ ಇಂಚು ಹಸಿ ಶುಂಠಿ ಹಾಕಿ ತರಿ ತರಿಯಾಗಿ ಕುಟ್ಟಿ.
* ಒಂದು ಪಾತ್ರೆಗೆ 2 ಕಪ್ ನೀರು ಹಾಕಿ, ಅದಕ್ಕೆ ಕುಟ್ಟಿದ ಪೇಸ್ಟ್ ಹಾಕಿ ಕಲಕಿ, 6 ರಿಂದ 7 ನಿಮಿಷ ಮಧ್ಯಮ ಉರಿಯಲ್ಲಿ ಕುದಿಸಿ.
* ನಂತರ ಕಾಲು ಅರಿಶಿಣ ಪುಡಿ, ಉಪ್ಪು ಹಾಕಿ ಕಲಕಿ. ಇದಕ್ಕೆ ಅರ್ಧ ಚಮಚ ಬೆಲ್ಲ, ಕಾಯಿ ಹಾಲು ಹಾಕಿ, ಚೆನ್ನಾಗಿ ಕಲಕಿ 3 ನಿಮಿಷ ಮಧ್ಯಮ ಉರಿಯಲ್ಲಿ ಕುದಿಸಿ.
* ಕೊನೆಯಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪು, ನಿಂಬೆ ರಸ ಹಾಕಿ ಕಲಕಿ.
* ಒಗ್ಗರಣೆಗೆ ಒಂದು ಚಿಕ್ಕ ಬಾಣಲೆಗೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಬಳಿಕ ಸಾಸಿವೆ ಹಾಕಿ. ಸಾಸಿವೆ ಸಿಡಿದ ನಂತರ ಒಣ ಮೆಣಸಿನಕಾಯಿ ಮುರಿದು ಹಾಕಿ. ಇದಕ್ಕೆ ಕರಿಬೇವು ಹಾಕಿ ಹುರಿಯಿರಿ. ನಂತರ ಈ ಒಗ್ಗರಣೆಯನ್ನು ಸಾರಿಗೆ ಹಾಕಿ, ಚೆನ್ನಾಗಿ ಕಲಸಿದರೆ ರುಚಿಯಾದ ತಿಳಿ ಸಾರು ಸಿದ್ಧ.