ಹೊರಗೆ ಜಿಟಿ ಜಿಟಿ ಮಳೆಯ ಸುರಿಯುತ್ತಿರೋ ವೇಳೆ ಚಳಿ ಚಳಿ ವಾತಾವರಣದಲ್ಲಿ ಬಿಸಿ ಬಿಸಿಯಾಗಿ ಏನಾದರೂ ತಿನ್ನಬೇಕು ಅನ್ನಿಸುತ್ತದೆ. ಆದರೆ ಮಳೆಯಲ್ಲಿ ಹೊರಹೋಗಲು ಸಾಧ್ಯವಾಗುದಿಲ್ಲ. ಹೀಗಾಗಿ ನಿಮಗಾಗಿ ಮನೆಯಲ್ಲೇ ಬಿಸಿ ಬಿಸಿಯಾದ ಚೀಸ್ ಬಾಲ್ ಮಾಡುವ ವಿಧಾನ ಇಲ್ಲಿದೆ.
Advertisement
ಬೇಕಾದ ಸಾಮಾಗ್ರಿಗಳು
* ತುರಿದುಕೊಂಡಿರುವ ಚೀಸ್ – 2 ಕಪ್
* ಬ್ರೆಡ್ ಕ್ರಮ್ಸ್ – ಒಂದೂವರೆ ಕಪ್
* ಮೈದಾ – 2 ಚಮಚ
* ಕೊತ್ತಂಬರಿ – ಅರ್ಧ ಕಪ್
* ಹಾಲು – 2 ಚಮಚ
* ಕಾರ್ನ್ ಪ್ಲೋರ್ – 1 ಚಮಚ
* ಕಪ್ಪು ಮೆಣಸಿನ ಪುಡಿ – ಅರ್ಧ ಚಮಚ
* ಚಿಲ್ಲಿ ಪದರ – 1 ಚಮಚ
* ಉಪ್ಪು – ರುಚಿಗೆ ತಕ್ಕಷ್ಟು
* ಎಣ್ಣೆ – ಕರಿಯಲು
Advertisement
Advertisement
ಮಾಡುವ ವಿಧಾನ
* ಮೊದಲಿಗೆ ತುರಿದುಕೊಂಡಿರುವ ಚೀಸ್ ಅನ್ನು ಒಂದು ಬಟ್ಟಲಿಗೆ ಹಾಕಿಕೊಳ್ಳಿ.
* ಅದಕ್ಕೆ ಬ್ರೆಡ್ ಕ್ರಮ್ಸ್, ಮೈದಾಹಿಟ್ಟು, ಕಾರ್ನ್ ಪ್ಲೋರ್, ಕರಿಮೆಣಸಿನ ಪುಡಿ, ಚಿಲ್ಲಿ ಪದರ, ಉಪ್ಪು ಮತ್ತು ಹಾಲನ್ನು ಹಾಕಿ ಕಲಸಿ.
* ನಂತರ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಂಡು ಒಂದೊಂದು ಉಂಡೆ ಮಾಡಿ ಇಟ್ಟುಕೊಳ್ಳಿ.
* ಉಂಡೆ ಮಾಡಿ ಇಟ್ಟುಕೊಂಡ ಬಾಲ್‍ಗಳನ್ನು ಮೈದಾ ಹಿಟ್ಟಿನೊಳಗೆ ರೋಲ್ ಮಾಡಿ, 20 ನಿಮಿಷ ಫ್ರಿಜ್ ನಲ್ಲಿಡಿ.
* ಇತ್ತ ಸ್ಟವ್ ಮೇಲೆ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಕಾಯಲು ಬಿಡಿ, ನಂತ್ರ ಕಾದ ಎಣ್ಣೆಗೆ ಬೋಂಡದ ರೀತಿಯ ಉಂಡೆಗಳನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
* ಆ ಬಳಿಕ ಬಾಣಲೆಯಿಂದ ತೆಗೆದು ಒಂದು ಪ್ಲೇಟ್ ಗೆ ಹಾಕಿ, ಚಳಿಯಲ್ಲಿ ಬಿಸಿ ಬಿಸಿ ಚೀಸ್ ಬಾಲ್ ಸವಿಯಿರಿ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews