ಶುಕ್ರವಾರ ಸಾಮಾನ್ಯವಾಗಿ ಜನರು ದೇವರ ಪೂಜೆ ಎಂದು ಫುಲ್ ಬ್ಯುಸಿಯಲ್ಲಿರುತ್ತಾರೆ. ಈ ದಿನ ದೇವರ ನೈವೇದ್ಯಕ್ಕೆ ಮತ್ತು ಮನೆಯಲ್ಲಿರುವವರಿಗೆ ಬೇಗ ಏನಾದರೂ ಮಾಡಬೇಕು ಎಂದು ಯೋಚನೆ ಮಾಡ್ತಿರುತ್ತಾರೆ. ಹಾಗಾದರೆ ಇಂದು ಮನೆಯಲ್ಲಿ ಸಿಹಿ ಪೇಪರ್ ಅವಲಕ್ಕಿ ಅಥವಾ ಅವಲಕ್ಕಿ ಪಂಚಕಜ್ಜಾಯ ಮಾಡಿ ಸವಿಯಿರಿ.
Advertisement
ಬೇಕಾಗಿರುವ ಸಾಮಾಗ್ರಿಗಳು:
* ಪೇಪರ್ ಅವಲಕ್ಕಿ – 2 ಕಪ್
* ತುರಿದ ತೆಂಗಿನಕಾಯಿ – 1 ಕಪ್
* ಪುಡಿ ಮಾಡಿದ ಬೆಲ್ಲ – 1/2 ಕಪ್
* ಏಲಕ್ಕಿ ಪುಡಿ – 1/2 ಟೀಸ್ಪೂನ್
* ತುಪ್ಪ – 1 ಟೀಸ್ಪೂನ್
* ಹುರಿದ ಕಪ್ಪು ಎಳ್ಳು – 1-2 ಟೀಸ್ಪೂನ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ, ಮಿಕ್ಸಿಂಗ್ ಬೌಲ್ನಲ್ಲಿ ಒಂದು ಕಪ್ ತಾಜಾ ತುರಿದ ತೆಂಗಿನಕಾಯಿ, 1/2 ಕಪ್ ಬೆಲ್ಲ ಮತ್ತು ಮತ್ತು 1/2 ಟೀಸ್ಪೂನ್ ಏಲಕ್ಕಿ ಪುಡಿಯನ್ನು ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ.
Advertisement
* ಮಿಶ್ರಣಕ್ಕೆ ಒಂದು ಚಮಚ ತುಪ್ಪ, 1-2 ಚಮಚ ಹುರಿದ ಕಪ್ಪು ಎಳ್ಳು ಸೇರಿಸಿ. ಬೆಲ್ಲದ ತೆಂಗಿನಕಾಯಿ ಮಿಶ್ರಣಕ್ಕೆ ಪೇಪರ್ ಅವಲಕ್ಕಿ ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ.
* 5 ನಿಮಿಷ ಹಾಗೇ ಬಿಡಿ. ಅವಲಕ್ಕಿ ಪಂಚಕಜ್ಜಾಯ ಈಗ ರೆಡಿ.