ಊಟಕ್ಕೆ ಯಾವ ಸಾಂಬರ್ ಮಾಡಬೇಕು ಎನ್ನುವ ಯೋಚನೆ ಇದ್ದೆ ಇರುತ್ತದೆ. ಅನ್ನ ಮಾಡಿ ಸಾರು ಮಾಡುವ ಯೋಚನೆ ಇದ್ದರೆ ಇಂದು ಸೊಪ್ಪಿನ ಸಾರು ಮಾಡಿ ಸಖತ್ ರುಚಿ ಮತ್ತು ಆರೋಗ್ಯಕ್ಕೂ ಒಳ್ಳೆಯದಾಗಿದೆ. ಸಾರು ಮಾಡುವುದು ಸುಲಭ ಮತ್ತು ಸರಳವಾಗಿದೆ.
ಬೇಕಾಗುವ ಸಾಮಗ್ರಿಗಳು:
* ಮೂಲಂಗಿ ಸೊಪ್ಪು(ನಿಮಗೆ ಬೇಕಾದ ಸೋಪ್ಪು ಆಯ್ಕೆ ಮಾಡಿಕೊಳ್ಳಿ)
* ಟೊಮೆಟೋ-2
* ಈರುಳ್ಳಿ-1
* ಅರಿಶಿಣ- 1ಚಮಚ
* ರುಚಿಗೆ ತಕ್ಕಷಟು ಉಪ್ಪು
* ಬೆಲ್ಲ- 1 ಚಮಚ
* ತೊಗರಿ ಬೇಳೆ – ಅರ್ಧ ಕಪ್
* ಅಡುಗೆ ಎಣ್ಣೆ- ಅರ್ಧ ಕಪ್
* ದನಿಯಾ – ಸ್ವಲ್ಪ
* ಜೀರಿಗೆ – 1 ಚಮಚ
* ಉದ್ದಿನ ಬೇಳೆ- 4 ಚಮಚ
* ಮೆಂತ್ಯ ಬೀಜಗಳು- ಸ್ವಲ್ಪ
* ಒಣಗಿದ ಕೆಂಪು ಮೆಣಸಿನಕಾಯಿ- 4 ರಿಂದ 5
* ಕರಿಬೇವಿನ ಎಲೆಗಳು- ಸ್ವಲ್ಪ
* ತೆಂಗಿನಕಾಯಿ ತುರಿ- ಅರ್ಧ ಕಪ್
* ಹುಣಸೆ ಹುಳಿ- ಸ್ವಲ್ಪ
* ಲವಂಗ, ಬೆಳ್ಳುಳ್ಳಿ-2
* ಸಾಸಿವೆ- 1 ಚಮಚ
Advertisement
ಮಾಡುವ ವಿಧಾನ:
* ಮೂಲಂಗಿ ಸೊಪ್ಪು, ಟೊಮೆಟೊ, ಈರುಳ್ಳಿ, ಅರಿಶಿಣ, ನೀರು ಮತ್ತು ಟೀಸ್ಪೂನ್ ಉಪ್ಪು ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಬೇಕು.
Advertisement
* ಬಾಣಲೆಯಲ್ಲಿ ಅಡುಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ ಜೀರಿಗೆ, ಉದ್ದಿನ ಬೇಳೆ, ಮೆಂತೆ, ಒಣಗಿದ ಕೆಂಪು ಮೆಣಸಿನಕಾಯಿ ಮತ್ತು ಕೆಲವು ಕರಿಬೇವಿನ ಎಲೆಗಳನ್ನು ಹುರಿಯಬೇಕು. ಇದನ್ನೂ ಓದಿ: ಪನೀರ್ ಭುರ್ಜಿ ಮಾಡುವುದು ಹೇಗೆ ಗೊತ್ತಾ?
Advertisement
Advertisement
* ಹುರಿದ ಮಸಾಲೆಗಳು, ತೆಂಗಿನಕಾಯಿ, ಹುಣಸೆಹಣ್ಣು ಮತ್ತು 1 ಲವಂಗ ಬೆಳ್ಳುಳ್ಳಿ ಸೇರಿಸಿ ಮಸಾಲೆ ರುಬ್ಬಿಕೊಳ್ಳಬೇಕು.
* ಮಸಾಲಾ ಪೇಸ್ಟ್ ಹಾಗೂ ಬೇಯಿಸಿದ ಮೂಲಂಗಿ ಸೊಪ್ಪು, ಬೆಲ್ಲ, ಉಪ್ಪು, ಬೇಯಿಸಿದ ತೊಗರಿ ಬೇಳೆ ಸೇರಿಸಿ ಮಿಶ್ರಣ ಮಾಡಬೇಕು.
* ಬೇಯಿಸಿದ ತೊಗರಿ ಬೇಳೆ ಸೇರಿಸಿ ಕುದಿಸಬೇಕು. ಇದನ್ನೂ ಓದಿ: ಕ್ಯಾಪ್ಸಿಕಂ ಚಟ್ನಿ ಮಾಡಿ ಅಕ್ಕಿ ರೊಟ್ಟಿ ಜೊತೆಗೆ ಸೂಪರ್
* ಈಗ ಅಡುಗೆ ಎಣ್ಣೆ, ಸಾಸಿವೆ, ಕೆಂಪು ಮೆಣಸಿನಕಾಯಿ, ಕರಿಬೇವಿನ ಎಲೆಗಳನ್ನು ಬಿಸಿ ಮಾಡಿ.
* ಕುದಿಯುತ್ತಿರುವ ಸಾರಿನ ಮೇಲೆ ಒಗ್ಗರಣೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ಸಾರು ಸಿದ್ಧವಾಗುತ್ತದೆ.