ಪರೋಟ ಎಂದರೆ ಕೆಲವರು ಇಷ್ಟ ಪಟ್ಟು ಸವಿಯುತ್ತಾರೆ. ನಾವು ಇಂದು ಪರೋಟ ಪ್ರಿಯರಿಗಾಗಿ ಮೂಲಂಗಿ ಪರೋಟವನ್ನು ಮಾಡುವ ವಿಧಾನವನ್ನು ನಾವು ಹೇಳಲಿದ್ದೇವೆ. ಮೂಲಂಗಿಯೊಂದಿಗೆ ಮಿಶ್ರ ಮಾಡುವ ಮಸಾಲೆ ಪದಾರ್ಥಗಳು ಈ ಪರೋಟದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಸತ್ವಪೂರ್ಣ ತಿಂಡಿಯನ್ನು ನಿಮಗೆ ಒದಗಿಸುತ್ತದೆ. ಹಾಗಿದ್ದರೆ ಅತಿ ಸುಲಭವಾಗಿ ತಯಾರಿಸಬಹುದಾದ ಈ ಪರೋಟ ರೆಸಿಪಿಯ ತಯಾರಿ ವಿಧಾನವನ್ನು ಕೆಳಗೆ ನಾವು ನೀಡಿದ್ದೇವೆ. ಇಂದೆ ಮಾಡಿ ಸವಿಯಿರಿ.
Advertisement
ಬೇಕಾಗುವ ಸಾಮಗ್ರಿಗಳು:
* ಮೂಲಂಗಿ – 2 ಕಪ್
* ಈರುಳ್ಳಿ – 1
* ಬೆಳ್ಳುಳ್ಳಿ ಪೇಸ್ಟ್ – 3 ಚಮಚ
* ಜೀರಿಗೆ ಪುಡಿ – 1 ಚಮಚ
* ಗರಮ್ ಮಸಾಲಾ -1 ಚಮಚ
* ಕಾಳುಮೆಣಸು ಪುಡಿ- 1 ಚಮಚ
* ದನಿಯಾ ಪುಡಿ – 3 ಚಮಚ
* ರುಚಿಗೆ ತಕ್ಕಷ್ಟು ಉಪ್ಪು
* ಗೋಧಿ ಹಿಟ್ಟು- 1 ಕಪ್
* ಅಡುಗೆ ಎಣ್ಣೆ ಅಥವಾ ತುಪ್ಪ – ಸ್ವಲ್ಪ
Advertisement
ಮಾಡುವ ವಿಧಾನ:
* ಮೊದಲಿಗೆ ತುರಿದ ಮೂಲಂಗಿಯನ್ನು ನೀರಿನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ.
* ಈರುಳ್ಳಿ, ಬೆಳ್ಳುಳ್ಳಿ ಪೇಸ್ಟ್, ಜೀರಿಗೆ ಪುಡಿ, ಗರಮ್ ಮಸಾಲಾ, ಕಾಳುಮೆಣಸು ಪುಡಿ, ದಿನಿಯಾ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಅನ್ನು ಸೇರಿಸಿ ಬೇಯಿಸಿದ ಮೂಲಂಗಿಗೆ ಒಗ್ಗರಣೆ ಮಾಡಿ ಬೇಯಿಸಿಕೊಳ್ಳಿ. ಇದನ್ನೂ ಓದಿ: ಕೆಲವೇ ಸಾಮಗ್ರಿಗಳಲ್ಲಿ ಮಾಡಿ ರುಚಿಯಾದ ಮೊಟ್ಟೆ ಪಲ್ಯ
Advertisement
Advertisement
* ಗೋಧಿ ಹಿಟ್ಟನ್ನು ಸಾಕಷ್ಟು ನೀರು, ರುಚಿಗೆ ಬೇಕಾದಷ್ಟು ಉಪ್ಪು ಹಾಕಿ ಕಲಸಿ. ಅಗಲವಾಗಿ ಇದನ್ನು ಲಟ್ಟಿಸಿಕೊಳ್ಳಿ.
* ಮಧ್ಯಕ್ಕೆ ಬೇಯಿಸಿದ ಮೂಲಂಗಿಯ ಮಿಶ್ರಣವನ್ನು ಇಡಿ.
* ತದನಂತರ ಇದನ್ನು ಅರ್ಧಕ್ಕೆ ಮಡಚಿ. ಇದನ್ನು ತ್ರಿಭುಜಾಕಾರದಲ್ಲಿ ಮಡಚಿ ಚಪಾತಿಯನ್ನು ಪುನಃ ಲಟ್ಟಿಸಿಕೊಳ್ಳಿ.
* ಬಾಣಲೆಗೆ ಒಂದು ಚಮಚದಷ್ಟು ಎಣ್ಣೆ ಅಥವಾ ತುಪ್ಪವನ್ನು ಹಾಕಿ. 10. ಪರೋಟಾವನ್ನು ಬಿಸಿಯಾಗಿರುವ ಪ್ಯಾನ್‍ಗೆ ಹಾಕಿ ಬೇಯಿಸಿ. ಬೇಕಾದಲ್ಲಿ ಪರೋಟಾದ ಸುತ್ತಲೂ ಎಣ್ಣೆಯನ್ನು ಹಾಕಿ ಚೆನ್ನಾಗಿ ಬೇಯುವವರೆಗೆ ಎರಡೂ ಬದಿ ಬಿಸಿ ಮಾಡಿಕೊಳ್ಳಿ.