ಸಂಜೆ ವೇಳೆ ಟೀ, ಕಾಫಿ ಜೊತೆಗೆ ನಾಲಿಗೆ ಏನನ್ನಾದರು ತಿನ್ನಲು ಬಯಸುತ್ತದೆ. ನಾಲಿಗೆಗೆ ರುಚಿಕೊಡಬೇಕು ಹಾಗೂ ಆರೋಗ್ಯಕರವಾದ ತಿಂಡಿಯನ್ನು ತಿನ್ನಲು ನಾವು ಬಯಸುತ್ತೇವೆ. ಕಡಲೆಕಾಯಿ ಚಾಟ್ ಕೇವಲ ರುಚಿಕರ ಮಾತ್ರವಲ್ಲ, ಆರೋಗ್ಯಕರ ಆಹಾರವಾಗಿದೆ. ಈ ಚಾಟ್ ಇನ್ನೊಂದು ಹೆಗ್ಗಳಿಕೆ ಎಂದರೆ ಇದನ್ನು ದಿನದ ಯಾವುದೇ ಹೊತ್ತಿನಲ್ಲಿ ಸೇವಿಸಬಹುದು.
Advertisement
ಬೇಕಾಗುವ ಸಾಮಗ್ರಿಗಳು:
* ಕಡಲೆಕಾಯಿ- 1 ಕಪ್
* ಅರಿಶಿಣ- 1 ಚಮಚ
* ರುಚಿಗೆ ತಕ್ಕಷ್ಟು ಉಪ್ಪು
* ಮೆಣಸಿನ ಪುಡಿ- 2ಚಮಚ
* ಚಾಟ್ ಮಸಾಲ- ಸ್ವಲ್ಪ
* ಈರುಳ್ಳಿ- 1
* ಟೊಮೆಟೋ- 1
* ಬೇಯಿಸಿದ ಜೋಳ- ಅರ್ಧ ಕಪ್
* ಮಾವಿನಕಾಯಿ- ಅರ್ಧ ಕಪ್
* ದಾಳಿಂಬೆ- ಅರ್ಧ ಕಪ್
* ಆಲೂಗಡ್ಡೆ (ಬೇಯಿಸಿದ್ದು)- ಅರ್ಧ ಕಪ್
* ಕೊತ್ತಂಬರಿ ಸೊಪ್ಪು- ಸ್ವಲ್ಪ
* ನಿಂಬೆ ರಸ- 1ಚಮಚ
Advertisement
Advertisement
ಮಾಡುವ ವಿಧಾನ:
* ಮೊದಲನೆಯದಾಗಿ, ಪ್ರೆಶರ್ ಕುಕ್ಕರ್ನಲ್ಲಿ ಕಡಲೆಕಾಯಿ, ಅರಿಶಿಣ, ಉಪ್ಪು, ನೀರು ಸೇರಿಸಿ ಬೇಯಿಸಿಕೊಳ್ಳಬೇಕು.
* ಒಂದು ಬೌಲ್ಗೆ ಮೆಣಸಿನ ಪುಡಿ, ಚಾಟ್ ಮಸಾಲ, ಕತ್ತರಿಸಿದ ಈರುಳ್ಳಿ, ಟೊಮೆಟೋ, ಜೋಳ, ಮಾವಿನಕಾಯಿ, ದಾಳಿಂಬೆ, ಮೆಣಸಿನ ಪುಡಿ, ಆಲಗಡ್ಡೆ, ಕೊತ್ತಂಬರಿ, ನಿಂಬೆರಸ ಮತ್ತು ಉಪ್ಪು ಸೇರಿಸಿ. ಇದನ್ನೂ ಓದಿ: ನಾಲಿಗೆ ರುಚಿ ಹೆಚ್ಚಿಸುವ ಸ್ವೀಟ್ ಕಾರ್ನ್ ಫ್ರೈಡ್ ರೈಸ್
Advertisement
* ನಂತರ ಬೇಯಿಸಿದ ಕಡಲೆಕಾಯಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದರೆ ಕಡಲೆಕಾಯಿ ಚಾಟ್ ಸಂಜೆ ತಿಂಡಿ ಆಗಿ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಥಟ್ಟನೆ ಮಾಡಿ ಹೆಸರು ಬೇಳೆ ಚಾಟ್