ಬೆಳಗ್ಗಿನ ಉಪಹಾರಕ್ಕೆ ಏನು ಮಾಡುವುದು ಎಂದು ನೀವು ಯೋಚಿಸುತ್ತಿದ್ದಿರಾ? ಚಳಿ ಇರುವುದರಿಂದ ಬಿಸಿಯಾ ಟೀ, ಕಾಫಿ ಜೊತೆಗೆ ಹಲಸಿನಕಾಯಿ ಬಿರಿಯಾನಿ ಮಾಡಿದರೆ ಸಖತ್ ರುಚಿಯಾಗಿರುತ್ತದೆ. ಹಲಸಿನಕಾಯಿ ಬಿರಿಯಾನಿ ಮಾಡುವುದು ಎಷ್ಟು ಸುಲಭವೋ ಅಷ್ಟೇ ರುಚಿಯಾಗಿರುತ್ತದೆ.
Advertisement
ಬೇಕಾಗುವ ಸಾಮಗ್ರಿಗಳು:
* ಹಲಸಿನ ಕಾಯಿ- 2 ಕಪ್
* ಈರುಳ್ಳಿ- 2
* ತುಪ್ಪ- ಅರ್ಧ ಕಪ್
* ಹಸಿಮೆಣಸಿನಕಾಯಿ- 4
* ಅರಿಶಿಣ ಪುಡಿ- ಅರ್ಧ ಚಮಚ
* ಕೊತ್ತಂಬರಿ ಸೊಪ್ಪು- ಸ್ವಲ್ಪ
* ಬಿರಿಯಾನಿ ಪೌಡರ್- 4 ಚಮಚ
* ಬಿರಿಯಾನಿ ಎಲೆ, ಚಕ್ಕೆ, ಲವಂಗ, ಏಲಕ್ಕಿ
* ಮೊಸರು- 1 ಕಪ್
* ಜೀರಿಗೆ- 1 ಚಮಚ
* ಶುಂಠಿ, ಬೆಳ್ಳುಳ್ಳು ಪೇಸ್ಟ್
* ಅಕ್ಕಿ- 2 ಕಪ್
* ಪುದೀನಾ- ಸ್ವಲ್ಪ
* ರುಚಿಗೆ ತಕ್ಕಷ್ಟು ಉಪ್ಪು
Advertisement
Advertisement
ಮಾಡುವ ವಿಧಾನ:
* ಕುಕ್ಕರ್ಗೆ ತುಪ್ಪ, ಚಕ್ಕೆ, ಪಲಾವ್ ಎಲೆ, ಲವಂಗ, ಏಲಕ್ಕಿ, ಜೀರಿಗೆ ಹಾಕಿ ಚೆನ್ನಾಗಿ ಫ್ರೈ ಮಾಡಬೇಕು.
* ನಂತರ ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಪುದೀನಾ, ಹಲಸಿನಕಾಯಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡುತ್ತಾ ಬೇಯಿಸಬೇಕು. ಇದನ್ನೂ ಓದಿ: ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ
Advertisement
* ನಂತರ ಹಲಸಿನಕಾಯಿ ಸ್ವಲ್ಪ ಬೆಂದ ಮೇಲೆ ಅರಿಶಿಣ, ಬಿರಿಯಾನಿ ಪೌಡರ್, ಮೊಸರು, ಉಪ್ಪು ಸೇರಿಸಿ ಬೇಯಿಸಬೇಕು. ಇದನ್ನೂ ಓದಿ: ಫಟ್ ಅಂತ ಮಾಡಬಹುದು ಮೈದಾ ದೋಸೆ
* ನಂತರ ಕುಕ್ಕರ್ಗೆ ಅಕ್ಕಿಯನ್ನು ಸೇರಿಸಿ ಅಳತೆಗೆ ಹೊಂದುವಷ್ಟು ನೀರು ಸೇರಿಸಿ ಕುಕ್ಕರ್ ಮುಚ್ಚಳ ಹಾಕಿ 2 ವಿಶಲ್ ಕೂಗಿಸಿದರೆ ರುಚಿಯಾದ ಹಲಸಿನಕಾಯಿ ಬಿರಿಯಾನಿ ಸವಿಯಲು ಸಿದ್ಧವಾಗುತ್ತದೆ.