ನಾವು ಹೋಟೆಲ್ನಲ್ಲಿ ಮಾಡುವ ಅಡುಗೆಗಳನ್ನು ಮನೆಯಲ್ಲಿ ಮಾಡಿ ಸವಿಯಬೇಕು ಎಂದು ಟ್ರೈ ಮಾಡುತ್ತಿರುತ್ತೇವೆ. ಇಡ್ಲಿ ಜೊತೆಗೆ ಕೊಡುವ ಸಾಂಬಾರ್ ಎಂದರೆ ಹಲವರಿಗೆ ಇಷ್ಟ. ಸಾಂಬಾರ್ ಜೊತೆ ಇಡ್ಲಿ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಕೇವಲ 15 ನಿಮಿಷಗಳಲ್ಲಿ ಈ ಇಡ್ಲಿ, ಸಾಂಬಾರ್ ಮಾಡಲು ಟ್ರೈ ಮಾಡಬಹುದಾಗಿದೆ.
Advertisement
ಬೇಕಾಗುವ ಸಾಮಗ್ರಿಗಳು:
* ಹಸಿರು ಮೆಣಸಿನಕಾಯಿ – 4
* ಟೊಮ್ಯಾಟೋ – 3
* ಸಾಸಿವೆ – 1ಚಮಚ
* ಕೊತ್ತಂಬರಿ- ಸ್ವಲ್ಪ
* ಒಣ ಮೆಣಸಿನಕಾಯಿ- 2
* ಕರಿಬೇವು- ಸ್ವಲ್ಪ
* ಜೀರಿಗೆ – 1 ಚಮಚ
* ಮೆಂತ್ಯ – ಅರ್ಧ ಚಮಚ
* ಈರುಳ್ಳಿ – 2
* ಹುಣಸೆ ಹಣ್ಣು- ಸ್ವಲ್ಪ
* ತರಕಾರಿಗಳು -ನಿಮ್ಮ ಆಯ್ಕೆ
* ಅರಿಶಿಣ ಪುಡಿ – ಸ್ವಲ್ಪ
* ಮೆಣಸಿನ ಪುಡಿ – 1 ಚಮಚ
* ಅಡುಗೆ ಎಣ್ಣೆ – 1 ಚಮಚ
* ಸಾಂಬಾರ್ ಪುಡಿ – 2 ಚಮಚ
* ತೊಗರಿ ಬೇಳೆ – 1 ಚಮಚ
Advertisement
ಮಾಡುವ ವಿಧಾನ:
* ಮೊದಲು ಕುಕ್ಕರ್ಗೆ ಅಡುಗೆ ಎಣ್ಣೆ, ಸಾಸಿವೆ, ಜೀರಿಗೆ, ಮೆಂತ್ಯ, . ಈರುಳ್ಳಿ, ಹಸಿರು ಮೆಣಸಿನಕಾಯಿ, ಕತ್ತರಿಸಿದ ಟೊಮ್ಯಾಟೋ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ ಬೇಯಿಸಲು ಬಿಡಿ.
Advertisement
* ಟೊಮ್ಯಾಟೋ ಮೃದುವಾದ ನಂತರ, ನಿಮ್ಮ ಆಯ್ಕೆಯ ತರಕಾರಿಗಳನ್ನು ಸೇರಿಸಿ. ತರಕಾರಿಗಳು ಅರ್ಧ ಬೆಂದ ನಂತರದಲ್ಲಿ ಮೆಣಸಿನ ಪುಡಿ, ಅರಿಶಿಣ ಪುಡಿ, ಸಾಂಬಾರ್ ಪುಡಿ ಸೇರಿಸಿ ಮಿಶ್ರಣ ಮಾಡಿ ಬೇಯಿಸಿ ಸ್ವಲ್ಪ ಸಮಯ ಬೇಯಲು ಬಿಟ್ಟಿರಬೇಕು. ಇದನ್ನೂ ಓದಿ: ಹುಣಸೆ ಹಣ್ಣಿನ ರಸಂ ಮಾಡುವ ವಿಧಾನ ನಿಮಗಾಗಿ
Advertisement
* ತೊಗರಿ ಬೇಳೆ ಸೇರಿಸಿ. ನೀರು, ಹುಣಸೆ ಹಣ್ಣಿನ ಹುಳಿ ಸೇರಿಸಿ 4 ಸೀಟಿ ಬರುವವರೆಗೆ ಬೇಯಿಸಿ.
* ತಣ್ಣಗಾದ ನಂತರ ಬೆಳೆಯನ್ನು ತರಕಾರಿಗಳಿಗೆ ಹಾಕಿ ಸ್ವಲ್ಪ ಸ್ಮಾಷ್ ಮಾಡಿ ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್
* ಕೊತ್ತಂಬರಿ ಸೊಪ್ಪು, ಅಡುಗೆ ಎಣ್ಣೆ, ಸಾಸಿವೆ, ಕರಿಬೇವು, ಒಣ ಮೆಣಸಿನ ಕಾಯಿಯ ಒಗ್ಗರಣೆ ಹಾಕಿದರೆ ಸಾಂಬಾರ್ ಸಿದ್ಧವಾಗುತ್ತದೆ. ಇದನ್ನೂ ಓದಿ: ಕುಚ್ಚಲಕ್ಕಿ ದೋಸೆ ಸಖತ್ ಟೇಸ್ಟ್ – ನೀವೂ ಒಮ್ಮೆ ಟ್ರೈ ಮಾ