ಬೆಂಗಳೂರು: ಜುಲೈ 1 ರಿಂದ ಪಾನ್ ಕಾರ್ಡ್ ಗೆ ಆಧಾರ್ ಜೋಡಣೆ ಕಡ್ಡಾಯವಾಗಿದೆ. ಕಡ್ಡಾಯಗೊಂಡ ಕಾರಣ ಹೀಗಾಗಿ ಬಹಳಷ್ಟು ಜನ ಹೇಗಪ್ಪಾ ಆಧಾರ್ ಜೋಡಿಸುವುದು ಎನ್ನುವ ಗೊಂದಲದಲ್ಲಿದ್ದಾರೆ. ಆದರೆ ಈ ವಿಚಾರಕ್ಕೆ ನೀವು ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವೇ ಇಲ್ಲ. ಕೇವಲ ಒಂದೇ ನಿಮಿಷದ ಒಳಗಡೆ ಆನ್‍ಲೈನ್ ಮೂಲಕ ಆಧಾರ್ ಸಂಖ್ಯೆಯನ್ನು ಪಾನ್ ಕಾರ್ಡಿಗೆ ಜೋಡಿಸಬಹುದು. ಹೇಗೆ ಜೋಡಣೆ ಮಾಡಬಹುದು ಎನ್ನುವ ಸರಳ ವಿವರಣೆಯನ್ನು ಇಲ್ಲಿ ನೀಡಲಾಗಿದೆ.
ಸ್ಟೆಪ್ 1: ಮೊದಲು ನೀವು ಆದಾಯ ತೆರಿಗೆ ಇಲಾಖೆಯ ಅಧಿಕೃತ https://www.incometaxindiaefiling.gov.in/ ಪೋರ್ಟಲ್ ಹೋಗಿ.
Advertisement
ಸ್ಟೆಪ್ 2: ವೆಬ್‍ಸೈಟ್ ಓಪನ್ ಆಗುತ್ತಿದ್ದಂತೆ ಅದರ ಹೋಮ್ ಪೇಜ್‍ನ ಎಡಗಡೆ ಸರ್ವಿಸಸ್ ಎನ್ನುವ ವಿಭಾಗ ಇದೆ. ಇದರಲ್ಲಿ ಮೇಲುಗಡೆ ಲಿಂಕ್ ಆಧಾರ್ ಬ್ಲಿಂಕ್ ಆಗುತ್ತಿರುತ್ತದೆ. ಈ ಲಿಂಕ್ ಕ್ಲಿಕ್ ಮಾಡಿ.
Advertisement
Advertisement
ಸ್ಟೆಪ್ 3: ಲಿಂಕ್ ಆಧಾರ್ ಕ್ಲಿಕ್ ಮಾಡಿದ ಕೂಡಲೇ ಒಂದು ಪ್ರತ್ಯೇಕ ಪೇಜ್ ಓಪನ್ ಆಗುತ್ತದೆ. ಇದರಲ್ಲಿ ನೀವು ಪಾನ್ ನಂಬರ್, ಆಧಾರ್ ನಂಬರ್, ಹೆಸರು ಟೈಪಿಸಬೇಕು. ಇದಾದ ಬಳಿಕ ಅಲ್ಲೇ ನೀಡಲಾಗಿರುವ ಕ್ಯಾಪ್ಚಾ ಕೋಡ್ ಟೈಪ್ ಮಾಡಬೇಕು. ಒಂದು ವೇಳೆ ಇಮೇಜ್ ಕ್ಯಾಪ್ಚಾ ಕೋಡ್ ನೋಡಲು ಸಾಧ್ಯವಿಲ್ಲದಿದ್ದರೆ ಒಟಿಪಿ(ಒನ್ ಟೈಮ್ ಪಾಸ್‍ವರ್ಡ್) ಆಯ್ಕೆಯೂ ಇದೆ. ಸೇರಿಸಬೇಕಾದ ಎಲ್ಲ ಮಾಹಿತಿಗಳನ್ನು ಟೈಪಿಸಿದ ಬಳಿಕ ಕೆಳಗಡೆ ಹಸಿರು ಬಾಕ್ಸ್ ನಲ್ಲಿರುವ ಲಿಂಕ್ ಆಧಾರ್ ಕ್ಲಿಕ್ ಮಾಡಬೇಕು. ನೀವು ಟೈಪಿಸಿದ ಆಧಾರ್ ಮಾಹಿತಿ ಮತ್ತು ಪಾನ್ ನಂಬರ್‍ಗಳು ಸರಿಯಾಗಿ ಇದ್ದರೆ ನಿಮ್ಮ ಈ ಜೋಡಣಾ ಪ್ರಕ್ರಿಯೆ ಯಶಸ್ವಿಯಾಗಿದೆ ಎನ್ನುವ ಸಂದೇಶ ಸ್ಕ್ರೀನ್‍ನಲ್ಲಿ ಮರುಕ್ಷಣವೇ ಬರುತ್ತದೆ. ಒಂದು ವೇಳೆ ಈ ಸಂದೇಶ ಬಾರದೇ ಇದ್ದಲ್ಲಿ ನೀವು ತಪ್ಪು ಮಾಹಿತಿ ನಮೂದಿಸಿದ್ದೀರಿ ಎಂದು ತಿಳಿದುಕೊಳ್ಳಬಹುದು.
Advertisement
ಮೊಬೈಲ್ ಎಸ್‍ಎಂಎಸ್ ಮೂಲಕ ಜೋಡಣೆ ಹೇಗೆ?
ಆಧಾರ್ ಜೋಡಣೆಯನ್ನು ಮೊಬೈಲ್ ಮೂಲಕ ಮಾಡಲು ಸಾಧ್ಯವಿದೆ. ನಿಮ್ಮ ಮೊಬೈಲ್ ನಿಂದ 56768 ಅಥವಾ 56161 ಎಸ್‍ಎಂಎಸ್ ಕಳುಹಿಸಿ ಜೋಡಣೆ ಮಾಡಬಹುದು. ನಿಮ್ಮ ಸಂದೇಶ ಈ ಮಾದರಿಯಲ್ಲಿ ಇರಬೇಕು.
UIDPAN<SPACE><12 digit Aadhaar><Space><10 digit PAN>
ಉದಾಹರಣೆ: UIDPAN 234567890123 ABCDE1234F
ಜೋಡಣೆ ಯಾಕೆ ಆಗಲ್ಲ?
ಪಾನ್ ಕಾರ್ಡ್ ಗೆ ನೀಡಿದ ಮಾಹಿತಿ ಮತ್ತು ಆಧಾರ್ ಕಾರ್ಡ್ ಪಡೆಯುವ ವೇಳೆ ನೀಡಿದ ಮಾಹಿತಿ ಸರಿಯಾಗಿ ಇಲ್ಲದೇ ಇದ್ದರೆ ಈ ಜೋಡಣೆ ಪ್ರಕ್ರಿಯೆ ಯಶಸ್ವಿಯಾಗುವುದಿಲ್ಲ. ವಿಶೇಷವಾಗಿ ಹೆಸರು ತಪ್ಪಾಗಿ ಮುದ್ರಣವಾಗಿದ್ದರೆ, ಇನ್ಶಿಯಲ್ ಸರಿಯಾಗಿ ಹೊಂದಾಣಿಕೆ ಆಗದೇ ಇದ್ದರೆ ಪಾನ್ ಕಾರ್ಡಿಗೆ ಆಧಾರ್ ಜೋಡಣೆಯಾಗುವುದಿಲ್ಲ.
ಆಧಾರ್ ಕಡ್ಡಾಯ ಮಾಡಿದ್ದು ಯಾಕೆ?
ಬಹಳಷ್ಟು ಜನ ತೆರಿಗೆಯನ್ನು ವಂಚಿಸಲು ಬೇರೆ ಬೇರೆ ಪಾನ್ ಕಾರ್ಡ್ ಬಳಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ ತೆರಿಗೆಯನ್ನು ವಂಚನೆ ಮಾಡುವ ಕುಳಗಳನ್ನು ನಿಯಂತ್ರಿಸಲು ಪಾನ್ ಕಾರ್ಡಿಗೆ ಆಧಾರ್ ಜೋಡಣೆ ಸಂಬಂಧ ಆದಾಯ ತೆರಿಗೆ ಕಾಯ್ದೆಯ ನಿಯಮಗಳಿಗೆ ತಿದ್ದುಪಡಿ ತಂದಿದ್ದು, ಜುಲೈ 1 ರಿಂದ ಜಾರಿಗೆ ಬರುವಂತೆ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಇದನ್ನೂ ಓದಿ: ಓದ್ಲೇಬೇಕು, ಜುಲೈ 1ರಿಂದ ನಿಮ್ಮ ಜೀವನದ ಮೇಲೆ ಪರಿಣಾಮ ಬೀಳುವ ಈ 11 ಕ್ಷೇತ್ರಗಳಲ್ಲಿ ಏನೇನು ಆಗುತ್ತೆ?