ಬೆಂಗಳೂರು: ಈಗಂತು ಬೇಸಿಗೆ ಪ್ರಾರಂಭವಾಗಿದೆ. ಮನೆ ಒಳಗೆ ಇರೋಕೆ ಆಗಲ್ಲ. ಏನಾದರೂ ತಣ್ಣಗೆ ಕುಡಿಬೇಕು ಅನ್ನಿಸುತ್ತಿರುತ್ತದೆ. ದೊಡ್ಡವರಾದ್ರೆ ಅದು ಬೇಕು. ಇದು ಬೇಕು ಅಂತ ಕೇಳಿ ಕುಡೀತಿವೆ. ಆದ್ರೆ ಮನೆಯಲ್ಲಿ ಸಣ್ಣಮಗು ಇದ್ದರೆ ಆ ಮಗುವನ್ನು ಬೇಸಿಗೆಯಲ್ಲಿ ಹೇಗೆ ನೋಡಿಕೊಳ್ಳಬೇಕು ಎಂಬ ಬಗ್ಗೆ ಇಲ್ಲಿವೆ ಕೆಲವೊಂದು ಟಿಪ್ಸ್.
ಬೇಸಿಗೆಯಲ್ಲಿ ಕಾಡೋ ಸಮಸ್ಯೆಗಳು
* ಬೇಸಿಗೆಯಲ್ಲಿ ಮಕ್ಕಳಲ್ಲಿ ಹೆಚ್ಚಾಗಿ ಚಿಕನ್ ಪಾಕ್ಸ್, ಮೈಯಲ್ಲಿ ಕೆಂಪು ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಎಚ್ಚರವಹಿಸಿ.
* ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ, ಸಾಮರ್ಥ್ಯ ಕಡಿಮೆ ಆದ್ರೆ ಕಾಯಿಲೆ ಬೀಳೋದು ಹೆಚ್ಚು.
* ಸೋಂಕು, ರೋಗಾಣು, ಬ್ಯಾಕ್ಟೀರಿಯಾದಿಂದ ಮಕ್ಕಳು ಅಸ್ವಸ್ಥರಾಗೋದು ಹೆಚ್ಚು.
* ಮಗುವಿಗೆ ತುಂಬಾ ಸೆಕೆ, ಬೆವರು ಬರದಂತೆ ನೋಡಿಕೊಳ್ಳಬೇಕು.
* ಧೂಳಿನಿಂದ ಮಗುವನ್ನು ಆದಷ್ಟು ದೂರವಿರಿಸಿ.
Advertisement
ಸಮಸ್ಯೆಗೆ ಪರಿಹಾರಗಳು
* ಬೇಸಿಗೆಯಲ್ಲಿ ಮಕ್ಕಳಿಗೆ ಸಡಿಲವಾದ ಹತ್ತಿ ಬಟ್ಟೆಯನ್ನು ಹಾಕಿ.
* ಮಗು ಎಲ್ಲಿಂದರಲ್ಲಿ ಮೂತ್ರ ಮಾಡುತ್ತದೆ ಎಂದು ಡೈಪರ್ಸ್ ಜಾಸ್ತಿ ಹೊತ್ತು ಹಾಕಬೇಡಿ.
* ಮಗು ಮೂತ್ರ, ಮಲ ಮಾಡಿದ್ರೆ ಆ ತಕ್ಷಣವೇ ಡೈಪರ್ಸ್ನ್ನು ಚೇಂಜ್ ಮಾಡಿ. ಇಲ್ಲದಿದ್ದರೆ ರ್ಯಾಶಸ್ ಆಗುವುದು ಖಂಡಿತ.
* ಮಗುವನ್ನು ಬಿರುಬಿಸಿಲಿನಲ್ಲಿ ಹೊರಗೆ ಕರೆದುಕೊಂಡು ಹೋಗಬೇಡಿ.
* ಬಿಸಿಲಿನಲ್ಲಿ ಹೆಚ್ಚು ಹೊತ್ತಿದ್ದರೆ ಮಗುವಿಗೆ ಬೆವರು ಹರಿದು ನಿರ್ಜಲೀಕರಣ ಆಗಬಹುದು.
* ಜನಸಂದಣಿ ಇರುವ ಜಾಗದಲ್ಲಿ ಹೋದ್ರೆ ಗಾಳಿಯಾಡುವ ಕಡೆ ಕುಳಿತುಕೊಳ್ಳಿ.
* ಮಗುವಿಗೆ ಸೆಕೆ ಆಗುವಂತೆ ಅತಿ ಬಿಗಿಯಾದ ಬಟ್ಟೆ ಹಾಕಬೇಡಿ.
* ಬೇಸಿಗೆ ಆದ್ದರಿಂದ ಮಗುವಿಗೆ ಬಾಯಾರುವುದು ಸಹಜ. ಹೀಗಾಗಿ ಆಗಾಗ ಮಗುವಿಗೆ ನೀರು ಕುಡಿಸಿ.
* ಮಗುವಿನ ಫ್ರೀಡ್ಜ್ ವಾಟರ್ ಕೊಡಬೇಡಿ.