ಕನಸಲ್ಲೂ ಬೆಚ್ಚಿ ಬೀಳಿಸುತ್ತಿದೆ ಟೊಮ್ಯಾಟೋ ದರ. ಬೆಲೆ ಗಗನಕ್ಕೇರಿ ಹಲವು ದಿನಗಳೇ ಕಳೆದರೂ, ಈ ಹೊತ್ತಿಗೂ ದರ ಇಳಿಯುತ್ತಿಲ್ಲ. ಟೊಮ್ಯಾಟೋ ಕುರಿತಾಗಿ ಸಾಕಷ್ಟು ಜೋಕ್ ಗಳು ಹುಟ್ಟಿಕೊಂಡಿವೆ. ಟೊಮ್ಯಾಟೋ ಕಾಯಲು ಸಿಸಿಟಿವಿ ಕ್ಯಾಮೆರಾ ಅಳವಡಿಸುವುದರಿಂದ ಹಿಡಿದು ಬೌನ್ಸರ್ ಹಾಕಿ ಕಾಯುವಲ್ಲಿಗೆ ವಿಡಿಯೋಗಳು ಹರಿದಾಡುತ್ತಿದೆ. ಆದರೆ ಬಾಲಿವುಡ್ (Bollywood) ನಟಿ ರಾಖಿ ಸಾವಂತ್ , ಈ ಕುರಿತು ತಲೆ ಕೆಡಿಸಿಕೊಂಡಿಲ್ಲ.
ಹೌದು, ರಾಖಿ ಸಾವಂತ್ ((Rakhi Sawant)) ಟೊಮ್ಯಾಟೋ ಬೆಲೆ ಗಗನಕ್ಕೇರಿದ ಕುರಿತಾಗಿ ತಲೆಬಿಸಿ ಮಾಡಿಕೊಂಡಿಲ್ಲ. ಬದಲಾಗಿ ಕೇವಲ ಹದಿನೈದೇ ದಿನದಲ್ಲಿ ಟೊಮ್ಯಾಟೋ ಬೆಳೆಯುವುದು ಹೇಗೆ ಎನ್ನುವುದನ್ನು ಕಲಿತಿದ್ದಾರೆ. ಅದನ್ನು ವಿಡಿಯೋ ಮಾಡಿ, ಇತರರಿಗೂ ಟೊಮ್ಯಾಟೋ ಬೆಳೆಯುವಂತೆ ವಿನಂತಿಸಿದ್ದಾರೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ನಟಿ, ಡೆಲಿವರಿ ಆಗ್ತಿದ್ದಂತೆ ಶೂಟಿಂಗ್ ಹಾಜರಾದ ಮಮತಾ
ಮೊದಲು ಪುಟ್ಟದೊಂದು ಪಾಟ್ ತಗೆದುಕೊಂಡು ಅದರಲ್ಲಿ ಕಾಲು ಭಾಗ ಮಣ್ಣು ತುಂಬಿದ್ದಾರೆ. ಆ ಮಣ್ಣಿನಲ್ಲಿ ನಾಲ್ಕೈದು ಟೊಮ್ಯಾಟೋ ಹಾಕುತ್ತಾರೆ. ಅದರ ಮೇಲೆ ಟೊಮ್ಯಾಟೋ ಗಿಡಿ ನೆಡುತ್ತಾರೆ. ಅದು ಕೇವಲ 15 ದಿನದಲ್ಲಿ ಟೊಮ್ಯಾಟೋ (Tomato) ಕೊಡುತ್ತದೆ ಎಂದು ಅವರು ಹೇಳುತ್ತಾರೆ. ಈ ಗಿಡವನ್ನು ಆರೈಕೆ ಮಾಡಲೆಂದು ಒಬ್ಬ ಹುಡುಗನನ್ನು ರಾಖಿ ನೇಮಿಸಿಕೊಂಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.
ಹದಿನೈದು ದಿನಕ್ಕೆ ಟೊಮ್ಯಾಟೋ ಬೆಳೆ (Crop) ಬರತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ರಾಖಿ ರಂಪಾಟ ಮಾಡದೇ ಮೊದಲ ಬಾರಿಗೆ ವಿಡಿಯೋ ಮಾಡಿದ್ದು ಅಭಿಮಾನಿಗಳಿಗೆ ಖುಷಿ ತಂದಿದೆ. ಜೊತೆಗೆ ಟೊಮ್ಯಾಟೋ ಬೆಳೆಯನ್ನು ಆರೈಕೆ ಮಾಡಲು ನೇಮಿಸಿಕೊಂಡಿರುವ ಹುಡುಗನ ಸಂಬಳದಲ್ಲಿ ಅದೆಷ್ಟೋ ಕೆಜಿ ಟೊಮ್ಯಾಟೋ ಖರೀದಿಸಬಹುದಿತ್ತು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
Web Stories