ಮುಂಬೈ: ಜೀವನದಲ್ಲಿ ಏನಾದ್ರೂ ಮಾಡೋಕೆ ನಿಮಗೊಂದು ಸ್ಫೂರ್ತಿ ಬೇಕು ಅನ್ನೋದಾದ್ರೆ ಮುಂಬೈ ವ್ಯಕ್ತಿಯ ಈ ಸ್ಟೋರಿಯನ್ನ ನೀವು ಓದ್ಲೇಬೇಕು. ಈ ಸ್ಟೋರಿಯನ್ನ ಹ್ಯೂಮನ್ಸ್ ಆಫ್ ಬಾಂಬೇ ಎಂಬ ಫೇಸ್‍ಬುಕ್ ಪೇಜ್‍ನಲ್ಲಿ ಹಂಚಿಕೊಂಡ ಕೇವಲ 7 ಗಂಟೆಗಳಲ್ಲಿ 17 ಸಾವಿರಕ್ಕೂ ಹೆಚ್ಚು ರಿಯಾಕ್ಷನ್ಸ್ ಪಡೆದಿದ್ದು, 1300ಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ.
ರತ್ನಗಿರಿಯಲ್ಲಿದ್ದಾಗ ನಾನು 10ನೇ ತರಗತಿಯಲ್ಲಿ ಫೇಲ್ ಆಗಿದ್ದೆ, ಆದ್ರೆ ನನಗಾಗ ದೊಡ್ಡ ಕನಸುಗಳಿದ್ವು ಎಂದು ಶುರು ಮಾಡಿ ಆ ವ್ಯಕ್ತಿ ತನ್ನ ಕಥೆಯನ್ನ ಹೇಳ್ತಾ ಹೋಗ್ತಾರೆ. ಈ ವ್ಯಕ್ತಿಯ ಕುಟುಂಬದವರು ಕ್ಷೌರಿಕರಾಗಿದ್ದು, ತಾನೂ ಕೂಡ ಅದೇ ವೃತ್ತಿಯನ್ನ ಮುಂದುವರೆಸಬೇಕು ಎಂದುಕೊಂಡಿದ್ರು. ಚಿತ್ರರಂಗದಲ್ಲಿ ಕೇಶವಿನ್ಯಾಸಕನಾಗಿ ಕೆಲಸ ಮಾಡಲು ಇಚ್ಛಿಸಿದ್ರು. ಈ ಕನಸನ್ನ ಈಡೇರಿಸಿಕೊಳ್ಳೋಕೆ ಏನೆಲ್ಲಾ ಮಾಡಿದ್ರು ಅನ್ನೋದನ್ನ ಈ ವ್ಯಕ್ತಿ ಮುಂದೆ ವಿವರಿಸುತ್ತಾ ಹೋಗ್ತಾರೆ. ಮೊದಲಿಗೆ ಮುಂಬೈನಂತಹ ಮಹಾನಗರಕ್ಕೆ ಬಂದು ಬೀದಿ ಬದಿಯಲ್ಲಿ ಜೀವನ ನಡೆಸಿದ್ದ ವ್ಯಕ್ತಿ ಮುಂದೆ 2010ರಲ್ಲಿ ಆಯೆಶಾ ಚಿತ್ರದಲ್ಲಿ ಸೋನಮ್ ಕಪೂರ್ ಹಾಗೂ ಅಭಯ್ ಡಿಯೋಲ್ ಜೊತೆಗೆ ಕೆಲಸ ಮಾಡ್ತಾರೆ. ಅಲ್ಲದೆ ಒಂದು ಅಪಾರ್ಟ್‍ಮೆಂಟ್ ಕೂಡ ಕೊಂಡುಕೊಳ್ತಾರೆ.
Advertisement
ಅವರ ಕಥೆಯನ್ನ ಅವರ ಮಾತುಗಳಲ್ಲೇ ಹೇಳೋದಾದ್ರೆ:
Advertisement
“ನಾನು ರತ್ನಗಿರಿಯಲ್ಲಿದ್ದಾಗ 10ನೇ ತರಗತಿಯಲ್ಲಿ ಫೇಲ್ ಆಗಿದ್ದೆ, ಆದ್ರೆ ನನಗಾಗ ದೊಡ್ಡ ಕನಸುಗಳಿದ್ವು. ನನ್ನ ಕುಟುಂದವರು ಕ್ಷೌರಿಕ ವೃತ್ತಿಯುಳ್ಳ ಸಮುದಾಯಕ್ಕೆ ಸೇರಿದವರಾಗಿದ್ರು. ನನ್ನ ತಾತ, ಮುತ್ತಾತ, ಅಂಕಲ್‍ಗಳೆಲ್ಲರೂ ಕ್ಷೌರಿಕರಾಗಿದ್ರು. ನಾನೂ ಕೂಡ ಇದೇ ವೃತ್ತಿ ಮುಂದುವರಿಸಬೇಕು ಎಂದು ಗೊತ್ತಿತ್ತು. ಆದ್ರೆ ಕೇವಲ ಹೇರ್‍ಕಟ್, ಶೇವಿಂಗ್ ಮಾಡುವಷ್ಟಕ್ಕೇ ನಿಲ್ಲಲು ನನಗೆ ಇಷ್ಟವಿರಲಿಲ್ಲ. ನನಗೆ ಚಿತ್ರರಂಗದಲ್ಲಿ ವೃತ್ತಿಪರ ಕೇಶವಿನ್ಯಾಸಕನಾಗಿ ಕೆಲಸ ಮಾಡುವ ಆಸೆ ಇತ್ತು.
Advertisement
ನಾನು ಮೊದಲ ಬಾರಿಗೆ ಸಂಬಂಧಿಯೊಬ್ಬರ ಮದುವೆಗೆಂದು ಮುಂಬೈಗೆ ಭೇಟಿ ನೀಡಿದ್ದು 10 ವರ್ಷಗಳ ಹಿಂದೆ. ನಿಜ ಹೇಳ್ತೀನಿ, ಮದುವೆ ಒಂದು ನೆಪವಾಗಿತ್ತು ಅಷ್ಟೆ. ನಾನು ಇಲ್ಲಿಗೆ ಬಂದಿರೋದು ಮತ್ತೊಂದು ಕಾರಣಕ್ಕೆ ಎಂಬುದು ನನ್ನ ಮನಸ್ಸಿಗೆ ಗೊತ್ತಿತ್ತು. ನಾನು ನನ್ನ ಕನಸನ್ನ ಈಡೇರಿಸಿಕೊಳ್ಳಲು ಇಲ್ಲಿಗೆ ಬಂದಿದ್ದೆ. ಮದುವೆಯ ನಂತರ ನಾನು ದಹಿಸರ್‍ನ ಪಾರ್ಲರ್‍ನಲ್ಲಿ ಕೆಲಸ ಮಾಡಲು ಇಲ್ಲೇ ಉಳಿದುಕೊಂಡೆ. ಆಗ ನನ್ನ ಕುಟುಂಬದವರು ನನ್ನ ನೋಡಿ ನಕ್ಕಿದ್ರು. ನನ್ನಂತಹ ಕುರೂಪಿ, ಹಿಂದಿ ಬಾರದ ವ್ಯಕ್ತಿ ಈ ನಗರದಲ್ಲಿ ಬದುಕಲು ಸಾಧ್ಯವೇ ಇಲ್ಲ ಎಂದು ತಮಾಷೆ ಮಾಡಿದ್ರು. ಆದ್ರೆ ನಾನು ಆ ಬಗ್ಗೆ ತಲೆ ಕೆಡಿಸಿಕೊಳ್ದೆ ಆಸಕ್ತಿ ಹಾಗೂ ನಿಷ್ಟೆಯಿಂದ ಕೆಲಸ ಮಾಡ್ದೆ. ದುಡ್ಡಿಗೋಸ್ಕರವಲ್ಲ, ಅನುಭವಕ್ಕೋಸ್ಕರ. ನನಗೆ ಆಗ ಸಂಪಾದನೆಯೇ ಇರುತ್ತಿರಲಿಲ್ಲ. ಮೂರು ತಿಂಗಳುಗಳ ಕಾಲ ಬೀದಿಯಲ್ಲೇ ಸ್ನಾನ ಮಾಡಿದ್ದು ಈಗಲೂ ನೆನಪಿದೆ. ನನ್ನ ಹತ್ತಿರ ಮನೆಯಾಗಲೀ ಹಣವಾಗಲೀ ಇರಲಿಲ್ಲವಾದ್ರೂ ಒಂದಲ್ಲ ಒಂದು ದಿನ ನನ್ನ ಬದುಕು ಬದಲಾಗುತ್ತೆ ಅಂತ ನಂಬಿದ್ದೆ.
Advertisement
ಕೆಲ ಸಮಯದ ನಂತರ ನನಗೆ ಒಂದು ದೊಡ್ಡ ಸಲೂನ್‍ನಿಂದ ಸಂದರ್ಶನಕ್ಕಾಗಿ ಕರೆ ಬಂತು. ನಾನು ಹಾಕಿದ್ದ ಬಟ್ಟೆಯನ್ನ ನೋಡಿಕೊಂಡು ಹಾಕಲು ಒಂದು ಚೆನ್ನಾಗಿರೋ ಟೀ- ಶರ್ಟ್ ಕೂಡ ಇಲ್ಲದವನನ್ನ ಕೆಲಸಕ್ಕೆ ತೆಗೆದುಕೊಳ್ಳಲ್ಲ ಅಂದುಕೊಂಡಿದ್ದೆ. ಆದ್ರೆ ಅವರು ನನ್ನ ಬಟ್ಟೆಯಿಂದ ಅಳೆಯದೇ ಕೆಲಸಕ್ಕೆ ತೆಗೆದುಕೊಂಡ್ರು. ನನ್ನ ಬಾಸ್ ಹಾಗೂ ಸಹೋದ್ಯೋಗಿಗಳು ಹಿಂದಿಯಿಂದ ಹಿಡಿದು ಹೇರ್‍ಸ್ಟೈಲಿಂಗ್‍ವರೆಗೆ ಸಾಕಷ್ಟು ಹೇಳಿಕೊಟ್ರು. ಸಲೂನ್‍ಗೆ ಬರುವ ವಿದೇಶಿಗರನ್ನ ಗಮನಿಸುತ್ತಲೇ ನಾನು ಇಂಗ್ಲಿಷ್ ಕೂಡ ಕಲಿತೆ. ಮೊದಮೊದಲಿಗೆ ನನಗೆ ಹಾಯ್ ಹಾಗೂ ಹೌ ಡು ಯು ಡು ಅನ್ನೋದಕ್ಕೆ ಹೇಗೆ ಪ್ರತಿಕ್ರಿಯೆ ನೀಡಬೇಕು ಅನ್ನೋದು ಕೂಡ ಗೊತ್ತಾಗ್ತಿರಲಿಲ್ಲ. ಆದ್ರೆ ಕಾಲ ಕಳೆದಂತೆ, ಕೆಲವರ ಸಹಾಯದಿಂದ ನಾನೀಗ ಸರಾಗವಾಗಿ ಇಂಗ್ಲಿಷ್‍ನಲ್ಲಿ ಮಾತನಾಡಬಲ್ಲವನಾಗಿದ್ದೇನೆ.
ನನಗೀಗ 33 ವರ್ಷ ವಯಸ್ಸು. ಕಳೆದ ದಿನಗಳನ್ನ ಹಿಂದಿರುಗಿ ನೋಡಿದ್ರೆ ಹೆಮ್ಮೆಯೆನಿಸುತ್ತದೆ. ಪ್ರತಿ ಭಾನುವಾರ ನನ್ನ ಅಂಕಲ್‍ನಿಂದ ಹೇರ್‍ಕಟ್ ಮಾಡೋದನ್ನ ಕಲಿಯುತ್ತಿದ್ದವನು ಮದುವೆಗಾಗಿ ಪ್ರೊಫೆಷನಲ್ ಆರ್ಟಿಸ್ಟ್ ಆಗಿ ಯೂರೋಪ್‍ಗೆ ಹೋದೆ. ಬಾಲಿವುಡ್‍ನಲ್ಲಿ ಕೆಲಸ ಮಾಡಬೇಕೆಂದು ಕನಸು ಕಾಣ್ತಿದ್ದವನು ನಿಜವಾಗಿಯೂ ಬಾಲಿವುಡ್ ತಾರೆಗಳಾದ ಸೋನಮ್ ಹಾಗೂ ಅಭಯ್ ಡಿಯೋಲ್‍ರೊಂದಿಗೆ ಕಲಸ ಮಾಡಿದೆ. ಬೀದಿಯಲ್ಲಿ ಸ್ನಾನ ಮಾಡ್ತಿದ್ದವನು ಸ್ವಂತ ಅಪಾರ್ಟ್‍ಮೆಂಟ್ ಕೊಂಡುಕೊಂಡೆ. ಕೈಯಲ್ಲಿ ಬಿಡಿಗಾಸು ಇಲ್ಲದೆ ಮುಂಬೈಗೆ ಬಂದವನು ಈಗ ನನ್ನ 4 ಸಹೋದರರು ಹಾಗೂ ಪೋಷಕರನ್ನ ಸಾಕುವಷ್ಟು ಹಣ ಕೂಡಿಟ್ಟಿದ್ದೇನೆ. ಹೆಸರು, ಜನಪ್ರಿಯತೆ ಯಾವುದೂ ಇಲ್ಲದವನು ವೋಗ್‍ನಲ್ಲಿ(ಮ್ಯಾಗಜೀನ್) ಕಾಣಿಸಿಕೊಂಡೆ. ನನ್ನ ಕನಸುಗಳೆಲ್ಲಾ ಈಡೇರಿವೆ. ಯಾಕೆ? ಯಾಂಕಂದ್ರೆ ನಾನು ನನ್ನನ್ನ ದೃಢವಾಗಿ ನಂಬಿದ್ದೆ. ಜಗತ್ತಿಗೂ ಕೂಡ ನನ್ನನ್ನು ನಂಬದೆ ಬೇರೆ ದಾರಿ ಇರಲಿಲ್ಲ”