– ಜಮೀರ್‌ಗೆ ಧನ್ಯವಾದ ಹೇಳುತ್ತೇನೆ
ಕೊಪ್ಪಳ: ಎಸ್ಟಿ ನಿಗಮದ ಹಣ ಲೂಟಿ ಹೊಡೆದ ಕಾಂಗ್ರೆಸ್ (Congress) ಸರ್ಕಾರ ಸಂಡೂರು ಎಸ್ಟಿ ಮೀಸಲು ಕ್ಷೇತ್ರದಲ್ಲಿ ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಿದೆಯೋ ಗೊತ್ತಿಲ್ಲ. ಮಾನ, ಮರ್ಯಾದೆ ಇದ್ದಿದ್ದರೆ ಮತ ಕೇಳಲು ಸಂಡೂರಿಗೆ ಬರುತ್ತಿರಲಿಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಟೀಕಿಸಿದ್ದಾರೆ.
Advertisement
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಸ್ಟಿಗಳ ಹಣ ನುಂಗಿದವರು ಏನೆಂದು ಮತ ಕೇಳುತ್ತಾರೆ ಎಂದು ಆಶ್ಚರ್ಯ ಆಗುತ್ತಿದೆ. ಜನ ಪ್ರಶ್ನೆ ಕೇಳಿದರೆ ಏನು ಹೇಳುತ್ತಾರೆ? ಎಂಬುದು ಗೊತ್ತಾಗುತ್ತಿಲ್ಲ. ಈ ಪ್ರಕರಣದಲ್ಲಿ ಸ್ವತಃ ಮಂತ್ರಿಯೇ ಜೈಲಿಗೆ ಹೋಗಿ ಬಂದರು. ಎಸ್ಟಿ ವರ್ಗದ ಜನರ ಕಲ್ಯಾಣಕ್ಕೆ ಮೀಸಲಿಟ್ಟ ಬರೋಬ್ಬರಿ 187 ಕೋಟಿ ರೂ. ಹಣ ನುಂಗಿದ್ದಾರೆ. ಸಿಎಂ ಸಿದ್ದರಾಮಯ್ಯ ಮುಂದೆ ನಿಂತು ಎಸ್ಸಿ/ಎಸ್ಟಿಗಳ ಅನುದಾನವನ್ನು ಅದೇ ವರ್ಗದ ಮಂತ್ರಿಗಳ ಮೂಲಕ ಕೊಳ್ಳೆ ಹೊಡೆಸುತ್ತಿದ್ದಾರೆ. ಕಪ್ಪು ಚುಕ್ಕೆ ಇಲ್ಲ, ತೆರೆದ ಪುಸ್ತಕ ಅಂತಾರೆ, ಪುಸ್ತಕ ತೆರೆದರೆ ಕಪ್ಪು ಚುಕ್ಕೆಗಳೆ ಕಾಣುತ್ತಿವೆ ಎಂದು ಲೇವಡಿ ಮಾಡಿದರು.ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಮತ್ತೆ ಇಬ್ಬರು ಬಲಿ – ಸಿಎಂ ಒಮರ್ ಅಬ್ದುಲ್ಲಾ ಖಂಡನೆ
Advertisement
Advertisement
ರೈತರ ಭೂಮಿಯಲ್ಲಿ ವಕ್ಫ್ (Waqf Board) ಹೆಸರು ನಮೂದು ವಿಚಾರಕ್ಕೆ ಸಂಬಂಧಿಸಿ, ಇಂದು ಜಂಟಿ ಸದನ ಸಮಿತಿ ವರದಿ ತೆಗೆದುಕೊಂಡು ಹೋಗಿದೆ. ಸಮಿತಿಯನ್ನು ಭೇಟಿ ಮಾಡಿ, ಅನೇಕ ವಿಚಾರಗಳ ಚರ್ಚೆ ಮಾಡಿದ್ದೇನೆ. ವಕ್ಫ್ ಬೋರ್ಡ್ನಿಂದ ರೈತರಿಗೆ, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಬಗ್ಗೆ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದರು.
Advertisement
ಕೇವಲ ಪಹಣಿಯಲ್ಲಿ ವಕ್ಫ್ ಹೆಸರು ತೆಗೆಯಬಾರದು. ವಕ್ಫ್ ಬೋರ್ಡನ ಪೂರ್ತಿ ರದ್ದು ಮಾಡಬೇಕು. ಇದೊಂದು ರಿಯಲ್ ಎಸ್ಟೇಟ್ ದಂಧೆಯಾಗಿದೆ. ಬೆಂಗಳೂರಲ್ಲಿ ಅತೀ ಹೆಚ್ಚು ಇಂತಹ ಪ್ರಕರಣಗಳಿವೆ. ಕಾಂಗ್ರೆಸ್‌ನಲ್ಲಿ ಮೊದಲು ಜೇಬುಗಳ್ಳರು ಮಾತ್ರ ಇದ್ದರು, ಈಗ ಭೂಗಳ್ಳರು ಸೇರಿಕೊಂಡಿದ್ದಾರೆ.
ಕಳೆದ 400 ರಿಂದ 500 ವರ್ಷದಿಂದ ಉಳುಮೆ ಮಾಡಿದ ಭೂಮಿಗೆ ವಕ್ಫ್ ಬೋರ್ಡ್ಗೆ ಸೇರಿಕೊಂಡಿದೆ. ಆಗ, ವಕ್ಫ್ ಬೋರ್ಡ್ ಇತ್ತಾ? ಮತ್ತೇ ಹೇಗೆ ವಕ್ಫ್ ಆಸ್ತಿ ಆಗುತ್ತೆ? ಜಮೀರ್ ಅಹ್ಮದ್ ಖಾನ್ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ಮುಂದೊಂದು ದಿನ ಇದನ್ನು ದೊಡ್ಡದಾಗಿ ಸಮಸ್ಯೆಯಾಗಿ ಅನುಭವಿಸಬೇಕಿತ್ತು. ಆದರೆ, ಏನೋ ಮಾಡಲು ಹೋಗಿ ಜಾರಿಬಿದ್ದಿದ್ದರಿಂದ ಜಮೀರ್ ಜಾಣ ಆಗಿದ್ದಾರೆ. ಇದು ಹಿಂದು ಮುಸ್ಲಿಂ ಅಲ್ಲ, ಇದು ರೈತರ ಜಮೀನು. ನಮ್ಮ ಹೋರಾಟ ಯಾರ ವಿರುದ್ಧವೂ ಇಲ್ಲ. ನಮ್ಮ ಹೋರಾಟ ಕಾಂಗ್ರೆಸ್ ಹಾಗೂ ವಕ್ಫ್ ವಿರುದ್ಧ ಮಾತ್ರ. ಇದಕ್ಕೆಲ್ಲ ಮೂಲ ಕಾರಣ ಕಾಂಗ್ರೆಸ್ ಸರ್ಕಾರ ಎಂದರು.
ಇನ್ನೂ ಸಿಎಂ (CM Siddaramaiah) ಲೋಕಾಯುಕ್ತ ವಿಚಾರಣೆಗೆ ಸಂಬಂಧಿಸಿದಂತೆ ಮಾತನಾಡಿ, ಮುಡಾ ಹಗರಣದಲ್ಲಿ ಸಿಎಂ ಸಿಕ್ಕಿಹಾಕಿಕೊಂಡರು. ಕೋರ್ಟ್ ಆದೇಶದಂತೆ ವಿಚಾರಣೆ ಎದುರಿಸುತ್ತಿದ್ದಾರೆ. ಬಿಜೆಪಿಗೆ ಜಗ್ಗಲ್ಲ ಅಂದು ರಾತ್ರೋರಾತ್ರಿ ಸೈಟ್ ವಾಪಸ್ ಕೊಟ್ಟರು. ಸಿಎಂ ಟಿಪಿ ನೋಡಿದರೆ ಎಲ್ಲವೂ ಪ್ರೀಪ್ಲ್ಯಾನ್. ನಾಟಕದ ಸ್ಕ್ರಿಪ್ಟ್ ಬರೆದು ನೀವೆ ಪಾತ್ರ ಮಾಡಿ, ಪ್ರಶ್ನೆ ಕೇಳುವುದು ಏನು ಎಂದು ಫಿಕ್ಸ್ ಆಗಿತ್ತಾ? ಎರಡೇ ಗಂಟೆಗಳಲ್ಲಿ ವಿಚಾರಣೆ ಮುಗಿಯುತ್ತದೆ ಎಂದು ನಿಮಗೆ ಹೇಗೆ ಗೊತ್ತು? ಲೋಕಾಯುಕ್ತ ಇದೆಲ್ಲ ಮಾಡತ್ತಾ? ತೊಟ್ಟಿಲು ತೂಗೋದು ತಾವೇ? ಮಗು ಚುಟೋದು ತಾವೇ ಎನ್ನುವಂತಾಗಿದೆ. ಸಿಎಂ ಪಟಾಲಂ ನೇಮಕ ಮಾಡಿರುವ ಅಧಿಕಾರಿಗಳು ಏನೂ ವಿಚಾರಣೆ ಮಾಡುತ್ತಾರೆ? ಯಾವ ರೀತಿ ಪ್ರಶ್ನೆ ಕೇಳುತ್ತಾರೆ? ಇದು ಕ್ಲೀನ್‌ಚಿಟ್ ಕೊಡುವ ಕೆಲಸ ನಡೀತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.ಇದನ್ನೂ ಓದಿ:
ಸಿಎಂ ಕೂಡಲೆ ರಾಜೀನಾಮೆ ನೀಡಬೇಕು. ಇದು ರಾಜ್ಯದ ಜನತೆಗೆ ಅವಮಾನ. ನಾಗೇಂದ್ರ ಅವರ ಮೇಲೆ ಆಪಾದನೆ ಬಂದಾಗ ರಾಜೀನಾಮೆ ಪಡೆದು ನೀವ್ಯಾಕೆ ರಾಜೀನಾಮೆ ಕೊಡುತ್ತಿಲ್ಲ. ದಲಿತರಿಗೊಂದು ನ್ಯಾಯ ನಿಮಗೊಂದು ನ್ಯಾಯವೇ? ಎಂದು ಪ್ರಶ್ನಿಸಿದರು.ಇದನ್ನೂ ಓದಿ: ಮನೆಯ ಮುಂದೆ ಆಡುತ್ತಿದ್ದ ಎರಡೂವರೆ ವರ್ಷದ ಮಗುವನ್ನು ಅಪಹರಿಸಿದ ಮಹಿಳೆ