– ರೈತರ ಆದಾಯ ಹೆಚ್ಚಿಸುವ ಹೊಸ ತಳಿಗಳ ಅನಾವರಣ
ಹವಾಗುಣ ಸಹಿಷ್ಣು ಗುಣವಿರುವ, ಜೈವಿಕ ಬಲವರ್ಧಿತ ಹಾಗೂ ಪೌಷ್ಠಿಕಾಂಶ ಹೆಚ್ಚಿರುವ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ 109 ತಳಿಗಳನ್ನು (Crop Varieties) ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಇತ್ತೀಚೆಗೆ ಬಿಡುಗಡೆಗೊಳಿಸಿದ್ರು. ಭಾರತೀಯ ಕೃಷಿ ಸಂಶೋಧನಾ ಪರಿಷತ್ತು (ICAR) ಅಭಿವೃದ್ಧಿಪಡಿಸಿದ ತಳಿಗಳನ್ನು ದೆಹಲಿಯ ಪೂಸಾದಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (IARI) ಕ್ಯಾಂಪಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅನಾವರಣಗೊಳಿಸಿದ್ದರು.
34 ಕೃಷಿ ಬೆಳೆಗಳು ಹಾಗೂ 27 ತೋಟಗಾರಿಕೆ ಬೆಳೆಗಳು ಸೇರಿದಂತೆ ಒಟ್ಟು 61 ಬೆಳೆಗಳಿಗೆ ಸಂಬಂಧಿಸಿದ ತಳಿಗಳನ್ನು ಸಂಸ್ಥೆ ಅಭಿವೃದ್ಧಿಪಡಿಸಿದ್ದು, ಈ ತಳಿಗಳಿಂದ ಅಧಿಕ ಇಳುವರಿ ಸಾಧ್ಯವಾಗಲಿದೆ. ಆ ಮೂಲಕ ರೈತರ ಆದಾಯ ಹೆಚ್ಚಲಿದೆ. ಇದನ್ನು ರೈತರಿಗೆ (Farmers) ಪರಿಚಯಿಸಬೇಕು ಹಾಗೂ ಸಾವಯವ ಕೃಷಿಗೆ ಉತ್ತೇಜನ ನೀಡಬೇಕು ಎಂಬುದು ಈ ಮೇಳದ ಉದ್ದೇಶವಾಗಿತ್ತು.
Advertisement
Advertisement
ಈ ಬೇಳೆಗಳನ್ನು ಅನಾವರಣಗೊಳಿಸಲು ಮುಖ್ಯ ಕಾರಣವೂ ಇದೆ. ಕೆಲ ಬೆಳಗೆಳು ಅತಿಯಾದ ಶೀತದಿಂದ ಕೊಳೆಯುವ ಹಾಗೂ ಅತಿಯಾದ ಬಿಸಿಲಿನಿಂದ ಬಾಡಿಹೋಗುತ್ತವೆ. ಆದ್ರೆ ಇತ್ತೀಚೆಗೆ ಅನಾವರಣಗೊಳಿಸಿದ ಈ ಬೆಳಗಳು ಹವಾಮಾನ ವೈಪರೀತ್ಯದಂತಹ ಸಂರ್ಭದಲ್ಲೂ ಬೆಳೆಯುವಂತಹದ್ದು. ಇದು ಎಲ್ಲ ಕಾಲದಲ್ಲಿಯೂ ರೈತರಿಗೆ ಅನುಕೂಲವಾಗಲಿದೆ ಎಂದ ಐಸಿಎಆರ್‌ನ ವಿಜ್ಞಾನಿಗಳೇ ಹೇಳಿದ್ದಾರೆ. ಹಾಗಾದ್ರೆ ಬಿಡುಗಡೆಯಾದ 109 ತಳಿಯ ಕೃಷಿ ಬೆಳೆಗಳು ಯಾವುವು? ಹವಾಮಾನ ವೈಪರಿತ್ಯ ಸಂದರ್ಭದಲ್ಲಿಯೂ ರೈತರ ಇಳುವರಿಗೆ ಹೇಗೆ ಸಹಾಯಕವಾಗುತ್ತವೆ? ಈ ಬೆಳೆಗಳನ್ನ ಈಗ ಅನಾವರಣಗೊಳಿಸಲು ಕಾರಣ ಎಂಬುದನ್ನು ತಿಳಿಯೋಣ…
Advertisement
ಬಿಡುಗಡೆಯಾದ 109 ಬೆಳೆಗಳು ಯಾವುವು?
ಕ್ಷೇತ್ರ ಬೆಳೆಗಳಲ್ಲಿ ರಾಗಿ, ಮೇವು ಬೆಳೆಗಳು, ಎಣ್ಣೆಕಾಳುಗಳು, ದ್ವಿದಳ ಧಾನ್ಯಗಳು, ಕಬ್ಬು, ಹತ್ತಿ, ನಾರು ಮತ್ತು ಇತರ ಸಂಭಾವ್ಯ ಬೆಳೆಗಳು ಸೇರಿದಂತೆ ವಿವಿಧ ಧಾನ್ಯಗಳ ಬೀಜಗಳನ್ನು ಬಿಡುಗಡೆ ಮಾಡಲಾಯಿತು. ತೋಟಗಾರಿಕಾ ಬೆಳೆಗಳ ಪೈಕಿ ವಿವಿಧ ಬಗೆಯ ಹಣ್ಣುಗಳು, ತರಕಾರಿ ಬೆಳೆಗಳು, ತೋಟದ ಬೆಳೆಗಳು, ಗಡ್ಡೆ ಬೆಳೆಗಳು, ಸಾಂಬಾರು ಪದಾರ್ಥಗಳು, ಹೂವುಗಳು ಮತ್ತು ಔಷಧೀಯ ಬೆಳೆಗಳನ್ನು ಬಿಡುಗಡೆ ಮಾಡಲಾಯಿತು. ಕ್ಷೇತ್ರ ಬೆಳೆಗಳಲ್ಲಿ ಒಂಬತ್ತು ವಿಧದ ಭತ್ತ, ಆರು ಬಗೆಯ ಮೆಕ್ಕೆಜೋಳ, ಎರಡು ಬಗೆಯ ಗೋಧಿ ತಳಿ, ಜೋಳ, ಬಜರಾ ಮತ್ತು ರಾಗಿ ತಲಾ ಒಂದು, ಏಳು ಬಗೆಯ ಎಣ್ಣೆಕಾಳುಗಳು, 11 ಬಗೆಯ ಧಾನ್ಯಗಳು, 5 ಬಗೆಯ ಹತ್ತಿ ಬೆಳೆ, ಹಾಗೂ ನಾಲ್ಕು ಬಗೆಯ ಕಬ್ಬು, ಸಿರಿಧಾನ್ಯಗಳು, ಪ್ಲಾಂಟೇಷನ್ ಬೆಳೆಗಳು, ಸಂಬಾರ್ ಪದಾರ್ಥಗಳು ಬೆಳೆಗಳು ಸೇರಿವೆ. ತೋಟಗಾರಿಕೆ ಬೆಳೆಗಳ ಪೈಕಿ, 3 ವಿಧದ ಮಾವು, ಎರಡು ಬಗೆಯ ಪೇರಲ, ಒಂದು ಬಗೆಯ ದಾಳಿಂಬೆ, 2 ಬಗೆಯ ಟೊಮೆಟೊ, ಇತರ ಹಣ್ಣುಗಳು, ತರಕಾರಿಗಳು ಮತ್ತು ಔಷಧೀಯ ಸಸ್ಯಗಳನ್ನು ಒಳಗೊಂಡಿದೆ.
Advertisement
ಈ ಬೆಳೆಗಳನ್ನು ಬಿಡುಗಡೆ ಮಾಡಿದ್ದು ಏಕೆ?
109 ತಳಿಯ ತೋಟಗಾರಿಕಾ ಬೆಳೆಗಳನ್ನು ಅನಾವರಣಗೊಳಿಸಲು ಪ್ರಮುಖ ಕಾರಣವೂ ಇದೆ. ಇತ್ತೀಚೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ 1.52 ಲಕ್ಷ ಕೋಟಿ ಅನುದಾನ ಘೋಷಿಸಿದರು. ಈ ಮೂಲಕ ನೈಸರ್ಗಿಕ ಕೃಷಿಗೆ ಪ್ರೋತ್ಸಾಹ ಹಾಗೂ ಕೃಷಿ ಸಂಶೋಧನೆ (Agricultural Research) ಮತ್ತು ಹೊಸ ತಳಿಗಳ ಅಭಿವೃದ್ಧಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಘೋಷಿಸಿದ್ದರು. ಹಾಗಾಗಿ ಹೊಸ ಬೀಜಗಳನ್ನು ತರುವ, ಹೊಸ ತಳಿಗಳನ್ನು ಅಭಿವೃದ್ಧಿಪಡಿಸುವ ನಿರ್ಧಾರವು ಕೃಷಿ ಉತ್ಪಾದಕತೆ ಮತ್ತು ರೈತರ ಆದಾಯ ಹೆಚ್ಚಿಸುವ ಗುರಿ ಹೊಂದಿದೆ ಎಂದು ಐಸಿಎಆರ್ ತಜ್ಞರು ತಿಳಿಸಿದ್ದಾರೆ. ಕೃಷಿ ವಿಜ್ಞಾನಿಗಳೊಂದಿಗೆ ಹೊಸ ತಳಿಗಳ ಪ್ರಾಮುಖ್ಯತೆಗಳನ್ನು ಚರ್ಚಿಸಿದ ಪ್ರಧಾನಿ ಮೋದಿ (Narendra Modi) ಬಳಿಕ ಅವುಗಳ ಮಹತ್ವದ ಬಗ್ಗೆ ಒತ್ತಿ ಹೇಳಿದರು. ನೈಸರ್ಗಿಕ ಕೃಷಿಯಿಂದ ಲಾಭ ಹೆಚ್ಚು. ಜನರಲ್ಲಿ ಕೂಡ ಸಾವಯವ ಕೃಷಿ ಮತ್ತು ಆಹಾರ ಕುರಿತು ಒಲವು ಹೆಚ್ಚುತ್ತಿದೆ. ಜೊತೆಗೆ ಜನರು ಸಾವಯವ ಪದಾರ್ಥಗಳ ಆಹಾರವನ್ನು ಹೆಚ್ಚಾಗಿ ಸೇವಿಸುವಂತೆ ಕರೆ ನೀಡಿದರು.
ಪ್ರತಿ ವರ್ಷವೂ ಮಳೆಗಾಲ, ಬೇಸಿಗೆಗಾಲ, ಚಳಿಗಾಲ ಎಂಬ ಮೂರು ಕಾಲಗಳನ್ನು ಎದುರಿಸುತ್ತೇವೆ. ಈ ಮೂರು ಕಾಲಮಾನಗಳಲ್ಲಿ ಪ್ರವಾಹ, ಬರ ಅಥವಾ ತೀರ್ವ ಶಾಖಕ್ಕೆ ಪ್ರತಿರೋಧ ಒಡ್ಡುವ ರೀತಿಯಲ್ಲಿ ಬೀಜಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಇವು ಜೈವಿಕ ಮತ್ತು ಅಜೈವಿಕ ಪರಿಸ್ಥಿತಿಗಳಿಗೆ ಹೊಂದಿಕೊಂಡು ಇಳುವರಿ ನೀಡುತ್ತವೆ. ಆದ್ದರಿಂದ ರೈತರು ಯಾವುದೇ ನಷ್ಟ ಅನುಭವಿಸದೇ ಹೆಚ್ಚಿನ ಇಳುವರಿ ಕಾಣಬಹುದು ಎನ್ನುತಾರೆ ವಿಜ್ಞಾನಿಗಳು.
ಬೆಂಗಳೂರು ಸಂಸ್ಥೆಯ 13 ತಳಿ ಅನಾವರಣ:
ಪ್ರಧಾನಿ ಮೋದಿ ಬಿಡುಗಡೆ ಮಾಡಿರುವ 109 ಹವಾಗುಣ ಸಹಿಷ್ಣು ಗುಣವಿರುವ ತಳಿಗಳಲ್ಲಿ ಬೆಂಗಳೂರಿನ ಹೆಸರುಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್‌ಆರ್) ಅಭಿವೃದ್ಧಿಪಡಿಸಿರುವ ಅರ್ಕ ಹೆಸರಿನ 13 ಹಣ್ಣು ತರಕಾರಿ ಹೂವು ಮತ್ತು ಔಷಧೀಯ ಬೆಳೆಗಳ ತಳಿಗಳು ಸೇರಿವೆ. ಅವು ಅರ್ಕ ಉದಯ (ಮಾವು) ಅರ್ಕ ಕಿರಣ್ (ಪೇರಲ) ಅರ್ಕ ಚಂದ್ರ (ಚಕೋತ) ಅರ್ಕ ನಿಕಿತಾ (ಬೆಂಡೆ) ಅರ್ಕ ವಿಸ್ತಾರ (ಚಪ್ಪರದ ಅವರೆ) ಅರ್ಕ ವೈಭವ (ಸುಗಂದರಾಜ ಹೂವು) ಅರ್ಕ ಶ್ರೀಯಾ (ಕನಕಾಂಬರ) ಅರ್ಕ ಅಮರ್ ಮತ್ತು ಅರ್ಕ ಆಯುಷ್ ಪ್ಯುಸಾರಿಯಂ (ಗ್ಲಾಡಿಯೋಲಸ್) ಅರ್ಕಾ ಧ್ವನಂತರಿ ಮತ್ತು ಅರ್ಕಾ ದಕ್ಷ (ವೆಲ್ವೆಟ್ ಬೀನ್ಸ್) ಅರ್ಕಾ ಅಶ್ವಗಂಧ ಮತ್ತು ಅರ್ಕಾ ಪ್ರಭಾವಿ (ಒಂದಲಗ) ಅಂತಿವೆ.
ಜೈವಿಕ ಬಲವರ್ಧನೆ ಹೇಗೆ ನಡೆಯುತ್ತದೆ?
ಸಸ್ಯಗಳ ಸಂತಾನೋತ್ಪತ್ತಿಯ ಆನುವಂಶಿಕ ವಿಧಾನಗಳ ಮೂಲಕ ಖಾದ್ಯ ಭಾಗಗಳ ಪೌಷ್ಠಿಕಾಂಶ ಹೆಚ್ಚಿಸುವಂತೆ ಮಾಡುವುದು ಜೈವಿಕ ಬಲವರ್ಧನೆಯ ಪ್ರಕ್ರಿಯೆಯಾಗಿದೆ. ಅಪೌಷ್ಠಿಕತೆ ನಿವಾರಿಸುವುದಕ್ಕೂ ಇದು ಸಮರ್ಥನೀಯ ವಿಧಾನ ಎಂದು ಪರಿಗಣಿಸಲಾಗಿದೆ. ಏಕೆಂದರೆ ಇದು ನೈಸರ್ಗಿಕ ರೂಪದಲ್ಲಿ ಪೋಷಕಾಂಶಗಳನ್ನು ಒದಗಿಸುತ್ತವೆ. ಇದು ದೇಹ ಸೇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೂ ಸಹಾಯವಾಗುತ್ತದೆ. ಒಟ್ಟಿನಲ್ಲಿ ಬಯೋಫೋರ್ಟಿಫೈಡ್ ಎಂದು ಕರೆಯುವ ಈ ತಳಿಗಳು ಸಾಂಪ್ರದಾಯಿಕ ತಳಿಗಳಂತೆ ಹೆಚ್ಚು ಇಳುವರಿ ನೀಡುವುದರಿಂದ ರೈತರಿಗೆ ನಷ್ಟ ಉಂಟಾಗುವುದಿಲ್ಲ. ಜೊತೆಗೆ ಹೆಚ್ಚುವರಿ ವೆಚ್ಚ ವಿನಿಯೋಗಿಸುವ ಅಗತ್ಯವೂ ಇಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.