ನವದೆಹಲಿ: ವರ್ಷದ ಮೊದಲ ಸೂರ್ಯಗ್ರಹಣವು ಸೋಮವಾರ (ಏ.8) ಗೋಚರವಾಗಿದೆ. ಮೆಕ್ಸಿಕೊ, ಕೆನಡಾ ಹಾಗೂ ಅಮೆರಿಕದಂತಹ ದೇಶಗಳಲ್ಲಿ ಸೂರ್ಯಗ್ರಹಣ (Solar Eclipse) ಗೋಚರವಾಗಿದೆ. ಅಲ್ಲದೇ ನ್ಯೂಯಾರ್ಕ್‌ನಲ್ಲಿ (New York) ಶತಮಾನಗಳ ಬಳಿಕ ಮೊದಲಬಾರಿಗೆ ಸಂಪೂರ್ಣವಾಗಿ ಗೋಚರವಾಗಿರುವ ಸೂರ್ಯಗ್ರಹಣವಿದು ಎಂದು ಹೇಳಲಾಗಿದೆ.
The total solar #eclipse is now sweeping across Indianapolis.
This is the first time in more than 800 years that the city is experiencing this celestial event! pic.twitter.com/jZuKx4nUAb
— NASA (@NASA) April 8, 2024
Advertisement
ಈ ಕುರಿತ ವಿಶೇಷ ವೀಡಿಯೋಗಳನ್ನು ಬಾಹ್ಯಾಕಾಶ ಸಂಸ್ಥೆ ನಾಸಾ ತನ್ನ ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಸಂಪೂರ್ಣತೆಯ ಹಾದಿಯಾಗಿ ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಮರೆಮಾಚುವ ದೃಶ್ಯಗಳು ಈ ಚಿತ್ರಪಟ ಹಾಗೂ ವೀಡಿಯೋದಲ್ಲಿ ಕಂಡುಬಂದಿದೆ. ಆದ್ರೆ ಇದು ಭಾರತದಲ್ಲಿ ಗೋಚರವಾಗಿಲ್ಲ. ಇದನ್ನೂ ಓದಿ: ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವು – ಈ ವರ್ಷದಲ್ಲಿ 10ನೇ ಪ್ರಕರಣ
Advertisement
Ever seen a total solar #eclipse from space?
Here is our astronauts’ view from the @Space_Station pic.twitter.com/2VrZ3Y1Fqz
— NASA (@NASA) April 8, 2024
Advertisement
ನಾಸಾ ವೀಕ್ಷಕರಿಗಾಗಿ ತನ್ನ ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಅಧಿಕೃತ ನೇರ ಪ್ರಸಾರ ಸಹ ಹಮ್ಮಿಕೊಂಡಿತ್ತು. ಈ ಕುರಿತ ವೀಡಿಯೋಗಳನ್ನು ಈಗ ಹಂಚಿಕೊಂಡಿದೆ. ಕಳೆದ ಒಂದು ಶತಮಾನದಲ್ಲಿ ಇದೇ ಮೊದಲಬಾರಿಗೆ ನ್ಯೂಯಾರ್ಕ್ ರಾಜ್ಯದ ಪಶ್ಚಿಮ ಮತ್ತು ಉತ್ತರ ದೇಶದ ಜನರು ಸಂಪೂರ್ಣ ಗ್ರಹಣ ಕಣ್ತುಂಬಿಕೊಂಡಿದ್ದಾರೆ ಎಂದು ನಾಸಾ ಮೂಲಗಳು ತಿಳಿಸಿವೆ.
Advertisement
ಅಲ್ಲದೇ ಮೆಕ್ಸಿಕನ್ ಬೀಚ್‌ಸೈಡ್ ರೆಸಾರ್ಟ್ ಪಟ್ಟಣವಾದ ಮಜಟ್ಲಾನ್ ಉತ್ತರ ಅಮೆರಿಕಾದಲ್ಲಿಯೂ ಜನ ಗ್ರಹಣ ಕೌತುಕವನ್ನ ವೀಕ್ಷಿಸಿದ್ದಾರೆ. ದಕ್ಷಿಣ ಟೆಕ್ಸಾಸ್, ಮೆಕ್ಸಿಕೊದ ದಕ್ಷಿಣ ಗಡಿಯಲ್ಲಿರುವ ಈಗಲ್ ಪಾಸ್ ಭಾಗಶಃ ಗ್ರಹಣವು ಗೋಚರವಾಗಿದೆ. 2024ರ ಸಂಪೂರ್ಣ ಗ್ರಹಣವು ಐತಿಹಾಸಿಕ ಮಹತ್ವವನ್ನು ಗಳಿಸಿಕೊಂಡಿದೆ. ಏಕೆಂದರೆ ಮುಂದೆ 2044ರ ವರೆಗೆ ಮತ್ತೆ ಯುಎಸ್ ದೇಶಾದ್ಯಂತ ಗ್ರಹಣ ಗೋಚರವಾಗುವುದಿಲ್ಲ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ. ಇದನ್ನೂ ಓದಿ: Taiwan Earthquake – 7.4 ತೀವ್ರತೆಯ ಪ್ರಬಲ ಭೂಕಂಪ – ಸುನಾಮಿ ಎಚ್ಚರಿಕೆ
ಅಲ್ಲದೆ ಒಕ್ಲಹೋಮ, ಅರ್ಕಾನ್ಸಾಸ್, ಮಿಸೌರಿ, ಇಲಿನಾಯ್ಸ್, ಕೆಂಟುಕಿ, ಇಂಡಿಯಾನಾ, ಓಹಿಯೋ, ಪೆನ್ಸಿಲ್ವೇನಿಯಾ, ನ್ಯೂಯಾರ್ಕ್, ವಮೊರ್ಂಟ್, ನ್ಯೂ ಹ್ಯಾಂಪ್‍ಶೈರ್ ಮತ್ತು ಮೈನೆ ಮೊದಲಾದ ರಾಜ್ಯಗಳಲ್ಲಿ ಸಂಪೂರ್ಣ ಸೂರ್ಯಗ್ರಹಣ ಗೋಚರವಾಗಿದೆ.