– ಮೊದಲ ದಿನ ಇಬ್ಬರೂ ಮಾತನಾಡಿರಲಿಲ್ಲ!
ಮುಂಬೈ: 2024ರ ಐಪಿಎಲ್ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ತಂಡದ ಕ್ಯಾಪ್ಟನ್ಸಿ ವಿಚಾರವಾಗಿ ರೋಹಿತ್-ಹಾರ್ದಿಕ್ ಪಾಂಡ್ಯ ನಡುವಿನ ಕಿತ್ತಾಟ ಚರ್ಚೆಗೆ ಗ್ರಾಸವಾಗಿತ್ತು. ಇವರಿಬ್ಬರ ಕಿತ್ತಾಟ ಟಿ20 ವಿಶ್ವಕಪ್‌ನಲ್ಲೂ (T20 World Cup 2024) ಮುಂದುವರಿಯಲಿದೆ ಎಂದೇ ಅಭಿಮಾನಿಗಳು ಭಾವಿಸಿದ್ದರು. ಆದ್ರೆ ಅದಕ್ಕೆ ವಿರುದ್ಧವಾಗಿ ನಡೆದುಕೊಂಡ ಪಾಂಡ್ಯ-ರೋಹಿತ್ ಟ್ರೋಫಿ ಗೆದ್ದು ತರುವಲ್ಲಿ ಯಶಸ್ವಿಯಾದರು. ಅಷ್ಟಕ್ಕೂ ಇವರಿಬ್ಬರ ಮುನಿಸು ಕೊನೆಗೊಂಡಿದ್ದು ಹೇಗೆ? ಅನ್ನೋ ಆಸಕ್ತಿದಾಯಕ ವಿಚಾರವನ್ನ ಹಿರಿಯ ಪತ್ರಕರ್ತ ವಿಮಲ್ ಕುಮಾರ್ ರಿವೀಲ್ ಮಾಡಿದ್ದಾರೆ.
Advertisement
ಹೌದು. 2024ರ ಐಪಿಎಲ್ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್‌ನಲ್ಲಿದ್ದ ಪಾಂಡ್ಯ (Hardik Pandya) ಅವರನ್ನು ಕರೆ ತಂದು ಮುಂಬೈ ತಂಡದ ನಾಯಕತ್ವದ ಹೊಣೆ ನೀಡಲಾಯಿತು. ಆದ್ರೆ 13 ವರ್ಷಗಳಿಂದ ತಂಡಕ್ಕೆ 5 ಬಾರಿ ಟ್ರೋಫಿ ತಂದುಕೊಟ್ಟ ರೋಹಿತ್ (Rohit Sharma) ಅವರನ್ನ ನಾಯಕ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ ಅಭಿಮಾನಿಗಳು ಆಕ್ರೋಶಗೊಂಡಿದ್ದರು. ಪಾಂಡ್ಯ ವಿರುದ್ಧ ಮುಗಿಬಿದ್ದಿದ್ದರು, ಮೈದಾನದಲ್ಲಿ ನಾಯಿಯೊಂದು ಪ್ರವೇಶಿಸಿದಾಗ ಹಾರ್ದಿಕ್ ಹಾರ್ದಿಕ್ ಅಂತ ಕೂಗಿ ಅವಮಾನಿಸಿದ್ದರು. ಇದನ್ನೂ ಓದಿ: IPL 2025 | ಐಪಿಎಲ್ ಅಖಾಡದಲ್ಲಿ ʻಇಂಪ್ಯಾಕ್ಟ್ʼ ವಾರ್, ಪರ-ವಿರೋಧ ಚರ್ಚೆ; ಏನಿದು ನಿಯಮ?
Advertisement
Advertisement
ಇಷ್ಟೆಲ್ಲಾ ಆಗಿದ್ದರೂ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪಾಂಡ್ಯ ನಿರ್ಣಾಯಕ ಪಾತ್ರ ವಹಿಸಿದರು. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಟಿ20 ವಿಶ್ವಕಪ್ ಗೆಲ್ಲಲು ಸಹಕಾರಿಯಾದರು. ಆದರೀಗ ರೋಹಿತ್-ಪಾಂಡ್ಯ ಅವರ ಮುನಿಸು ಕೊನೆಗೊಂಡಿದ್ದು ಹೇಗೆ ಅನ್ನುವ ಆಸಕ್ತಿದಾಯಕ ವಿಚಾರವನ್ನು ಹಿರಿಯ ಪತ್ರಕರ್ತ ವಿಮಲ್ ಕುಮಾರ್ (Vimal Kumar) ಹಂಚಿಕೊಂಡಿದ್ದಾರೆ.
Advertisement
ಸಂವಾದವೊಂದರಲ್ಲಿ ಮಾತನಾಡಿದ ವಿಮಲ್ ಕುಮಾರ್, ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದ ವೇಳೆ ನೆಟ್ಸ್‌ಗೆ ಹೋದಾಗ ಹಾರ್ದಿಕ್ ಮತ್ತು ರೋಹಿತ್ ಮಧ್ಯೆ ಏನು ನಡೆಯುತ್ತಿದೆ ಎಂಬುದನ್ನು ಗಮನಿಸಿದೆ. ಮೊದಲ ದಿನ ಅವರಿಬ್ಬರೂ ಮಾತನಾಡಿದ್ದು ಕಂಡುಬರಲಿಲ್ಲ. ಆದ್ರೆ 2ನೇ ದಿನ ಅವರಿಬ್ಬರು ಸಂಭಾಷಣೆ ನಡೆಸುತ್ತಿದ್ದ ರೀತಿ ನೋಡಿ ನನಗೆ ತುಂಬಾ ಖುಷಿ ಆಯ್ತು. ಹಾರ್ದಿಕ್ ಪಾಂಡ್ಯ, ರೋಹಿತ್ ಜೊತೆಗೆ ಮಾತನಾಡುತ್ತಿದ್ದ ರೀತಿ ನೋಡಿ ನನ್ನ ಕಣ್ಣನ್ನು ನಾನೇ ನಂಬಲು ಸಾಧ್ಯವಾಗಲಿಲ್ಲ. ಇಬ್ಬರೂ ಒಬ್ಬರಿಗೊಬ್ಬರು ಸಲಹೆ ನೀಡುತ್ತಿದ್ದರು. ಆಗ ತಂಡದ ಪ್ರದರ್ಶನದ ಬಗ್ಗೆ ಸಂಪೂರ್ಣ ವಿಶ್ವಾಸ ಮೂಡಿತು ಅಂತ ಭಾವುಕರಾಗಿದ್ದಾರೆ.
ಒಬ್ಬರಿಗೊಬ್ಬರು ಸಲಹೆ ನೀಡುತ್ತಾ ಇಬ್ಬರೂ ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುತ್ತಿದ್ದರು. ಅಲ್ಲದೇ ಡ್ರೆಸ್ಸಿಂಗ್ ರೂಮ್‌ನ ವಾತಾವರಣವೂ ಸಹ ಇದರಲ್ಲಿ ಪ್ರಮುಖ ಪಾತ್ರ ವಹಿಸಿದೆ. ಒಟ್ಟಿನಲ್ಲಿ ಭಾರತ ತಂಡದ ಸಲುವಾಗಿ ಇವರಿಬ್ಬರು ಒಂದಾದರು. ಇದರ ಕ್ರೆಡಿಟ್ ಏನಿದ್ದರೂ ಅಂದಿನ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಸೇರಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: IPL 2025 | ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ನೂತನ ಮೆಂಟರ್ ಆಗಿ ಜಹೀರ್ ಖಾನ್ ನೇಮಕ
ಮ್ಯಾಚ್‌ಗೆ ಇನ್ನೂ ಮೂರು ದಿನ ಬಾಕಿಯಿರುವಂತೆಯೇ ಅವರಿಬ್ಬರ ಮುನಿಸು ಕೊನೆಗೊಂಡಿತು. ಬಳಿಕ ಸಮಾನಾಂತರವಾಗಿ ಇಬ್ಬರು ಬ್ಯಾಟ್ ಬೀಸಲು ಶುರು ಮಾಡಿದರು. ರೋಹಿತ್ ಬ್ಯಾಟಿಂಗ್‌ನಲ್ಲಿ, ಪಾಂಡ್ಯ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಗಮನ ಸೆಳೆದರು. ಆ ವಾತಾವರಣವನ್ನು ನಾನು ನೋಡಿ ಬಹಳ ಖುಷಿಪಟ್ಟೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಶಕೀಬ್ ಬ್ಯಾನ್ ಮಾಡಿ – ಬಾಂಗ್ಲಾ ಕ್ರಿಕೆಟ್ ಮಂಡಳಿಗೆ ನೋಟಿಸ್
2025ರ ಐಪಿಎಲ್ ಮೊದಲ ಪಂದ್ಯಕ್ಕೆ ಪಾಂಡ್ಯ ಬ್ಯಾನ್:
2024ರ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಲೀಗ್ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಕಾರಣ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯಗೆ 30 ಲಕ್ಷ ರೂ. ದಂಡ ಹಾಗೂ 1 ಪಂದ್ಯದಿಂದ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ. ಇದರ ಜೊತೆಗೆ ಮುಂಬೈ ಇಂಡಿಯನ್ಸ್ ತಂಡದ ಆಟಗಾರರಿಗೆ 12 ಲಕ್ಷ ರೂ. ದಂಡ ಅಥವಾ ಪಂದ್ಯದ ಸಂಭಾವನೆಯಲ್ಲಿ ಶೇ.50 ರಷ್ಟು ದಂಡವನ್ನು ವಿಧಿಸಲಾಗಿದೆ. ಆದ್ದರಿಂದ 2025ರ ಐಪಿಎಲ್ ಆವೃತ್ತಿಯ ಮೊದಲ ಪಂದ್ಯದಿಂದ ಪಾಂಡ್ಯ ಹೊರಗುಳಿಯಲಿದ್ದಾರೆ.