ಮಾಸ್ಕೋ: ಉಕ್ರೇನ್ ವಿರುದ್ಧ ಯುದ್ಧ ಸಾರಿದ ನಂತರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಒಂದಲ್ಲ ಒಂದು ವಿಷಯದಲ್ಲಿ ಚರ್ಚೆಗೆ ಒಳಗಾಗುತ್ತಿದ್ದಾರೆ. ಆಡಳಿತ ಹಾಗೂ ಯುದ್ಧ ತಂತ್ರಗಾರಿಕೆ ಅಷ್ಟೇ ಅಲ್ಲ, ಪುಟಿನ್ ತಮ್ಮ ಜೀವನ ಶೈಲಿಯಲ್ಲೂ ಕುತೂಹಲಕಾರಿ ವ್ಯಕ್ತಿತ್ವದವರು.
ಯುದ್ಧದ ಕಾರಣದಿಂದಾಗಿ ಅಂತರರಾಷ್ಟ್ರೀಯ ರಾಜಕೀಯದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿ ಪುಟಿನ್ ಗುರುತಿಸಿಕೊಂಡಿದ್ದಾರೆ. ಅವರು ದಶಕಗಳಿಂದ ರಷ್ಯಾದಲ್ಲಿ ವ್ಯವಹಾರಗಳ ಚುಕ್ಕಾಣಿ ಹಿಡಿದಿದ್ದಾರೆ. ಪಾಶ್ಚಿಮಾತ್ಯರು ಮಾತ್ರ ಪುಟಿನ್ ಮೇಲೆ ಎಚ್ಚರಿಕೆ ಕಣ್ಣಿಟ್ಟಿದ್ದಾರೆ. 21 ನೇ ಶತಮಾನದಲ್ಲಿ ಉಕ್ರೇನ್ ಮೇಲೆ ಯುದ್ಧವನ್ನು ಪ್ರಾರಂಭಿಸುವ ಪುಟಿನ್ ನಿರ್ಧಾರವು ಕೆಲವು ಅನುಭವಿ ರಾಜತಾಂತ್ರಿಕರು ಮತ್ತು ನೀತಿ ನಿರೂಪಕರನ್ನು ಸಹ ಚಕಿತರನ್ನಾಗಿಸಿದೆ. ಇದನ್ನೂ ಓದಿ: ಉಕ್ರೇನ್ ಯುದ್ಧದ ನಡುವೆಯೇ ಸುದ್ದಿಯಾಗ್ತಿದ್ದಾರೆ ಪುಟಿನ್ ಗರ್ಲ್‌ಫ್ರೆಂಡ್- ಯಾರೀಕೆ?
Advertisement
Advertisement
ತಮ್ಮ ವ್ಯಕ್ತಿತ್ವ ಹಾಗೂ ನಿರ್ಧಾರಗಳ ಮೂಲಕವೇ ಜಗತ್ತನ್ನು ಚಕಿತಗೊಳಿಸುವ ಪುಟಿನ್ ಎಷ್ಟು ಶ್ರೀಮಂತರು ಗೊತ್ತೆ? ಅವರ ಜೀವನಶೈಲಿ ಹೇಗಿದೆ ಎಂದು ತಿಳಿದಿದೆಯೇ?
Advertisement
ಫಾರ್ಚೂನ್ ಪ್ರಕಾರ ಪುಟಿನ್ ವಾರ್ಷಿಕ 1.06 ಕೋಟಿ ರೂ. (1,40,000 ಯುಎಸ್ ಡಾಲರ್) ವೇತನವನ್ನು ಗಳಿಸುತ್ತಾರೆ ಎಂದು ಕ್ರೆಮ್ಲಿನ್ ಉಲ್ಲೇಖಿಸಿದೆ. ಅವರು ಸಾರ್ವಜನಿಕವಾಗಿ ಘೋಷಿಸಿದ ಆಸ್ತಿಗಳಲ್ಲಿ 800 ಚದರಡಿ ಅಪಾರ್ಟ್‌ಮೆಂಟ್, ಟ್ರೇಲರ್ ಮತ್ತು ಮೂರು ಕಾರುಗಳು ಸೇರಿವೆ ಎಂದು ವರದಿ ತಿಳಿಸಿದೆ.
Advertisement
ಆದರೆ ಪುಟಿನ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ. ಹೂಡಿಕೆ ಮತ್ತು ಆಸ್ತಿ ನಿರ್ವಹಣಾ ಕಂಪನಿ ಹರ್ಮಿಟೇಜ್ ಕ್ಯಾಪಿಟಲ್ ಮ್ಯಾನೇಜ್ಮೆಂಟ್ 2017 ರಲ್ಲಿ ಪುಟಿನ್ ಅವರ ವೈಯಕ್ತಿಕ ಸಂಪತ್ತು 200 ಬಿಲಿಯನ್ ಡಾಲರ್ ಎಂದು ತಿಳಿಸಿದೆ.
ಐಷಾರಾಮಿ ವಾಚ್‌ಗಳು
ಪುಟಿನ್ ಐಷಾರಾಮಿ ಕೈಗಡಿಯಾರಗಳನ್ನು ಧರಿಸುತ್ತಾರೆ. 4.57 ಕೋಟಿ ರೂ. ಮೌಲ್ಯದ ಪಾಟೆಕ್ ಫಿಲಿಪ್ ಹಾಗೂ 3.81 ಕೋಟಿ ರೂ. ಮೌಲ್ಯದ ಲ್ಯಾಂಗ್ ಮತ್ತು ಸೊಹ್ನ್ ಟೂಬೊಗ್ರಾಫ್ ವಾಚ್‌ಗಳನ್ನು ಹಾಕುತ್ತಾರೆ.
ಹತ್ತು ವರ್ಷಗಳ ಹಿಂದೆ ಎಬಿಸಿ ನ್ಯೂಸ್, ರಷ್ಯಾದ ವಿರೋಧ ಗುಂಪು ಸಾಲಿಡಾರಿಟಿ ಬಿಡುಗಡೆ ಮಾಡಿದ ವೀಡಿಯೋವನ್ನು ಆಧರಿಸಿ ವರದಿಯೊಂದನ್ನು ಮಾಡಿತ್ತು. ಅದರಲ್ಲಿ ಪುಟಿನ್ 5.33 ಕೋಟಿ ರೂ. ಮೌಲ್ಯದ ಐಷಾರಾಮಿ ಕೈಗಡಿಯಾರಗಳನ್ನು ಹೊಂದಿದ್ದಾರೆಂದು. ಅಂದರೆ ಅವರ ಅಧಿಕೃತ ಸಂಬಳದ ಆರು ಪಟ್ಟು ಬೆಲೆ ಆ ವಾಚ್‌ನದ್ದು. ಇದನ್ನೂ ಓದಿ: ರಷ್ಯಾ ಯುದ್ಧವನ್ನು 2ನೇ ಮಹಾಯುದ್ಧಕ್ಕೆ ಹೋಲಿಸಿದ ಝೆಲೆನ್ಸ್ಕಿ
ಕಪ್ಪು ಸಮುದ್ರ ದಂಡೆಯಲ್ಲಿ ಮಹಲು
ಪುಟಿನ್, ಕಪ್ಪು ಸಮುದ್ರದ ದಂಡೆಯಲ್ಲಿರುವ 1,90,000 ಚದರಡಿ ಮಹಲಿನ ಮಾಲೀಕ. ಈ ಬಂಗಲೆಯಲ್ಲಿ ಅಮೃತಶಿಲೆಯ ಈಜುಕೊಳ, ಸ್ಪಾ, ಆಂಫಿಥಿಯೇಟರ್, ಅತ್ಯಾಧುನಿಕ ಐಸ್ ಹಾಕಿ ರಿಂಕ್, ವೇಗಾಸ್ ಶೈಲಿಯ ಕ್ಯಾಸಿನೊ ಮತ್ತು ರಾತ್ರಿ ಕ್ಲಬ್. ನೂರಾರು ಡಾಲರ್ ಮೌಲ್ಯದ ವೈನ್‌ಗಳಿರುವ ಬಾರ್ ಹೊಂದಿದೆ.
ಶ್ರೀಮಂತ ಪುಟಿನ್ ಅವರ ಮಹಲಿನ ಚಿತ್ರಗಳನ್ನು ಈ ಹಿಂದೆ ರಷ್ಯಾದ ವಿರೋಧ ಪಕ್ಷದ ನಾಯಕರು ಬಿಡುಗಡೆ ಮಾಡಿದ್ದರು. ಅದನ್ನು ʼಪುಟಿನ್ ಕಂಟ್ರಿ ಕಾಟೇಜ್ʼ ಎಂದು ಕರೆದಿದ್ದರು. 3.81 ಕೋಟಿ ಮೌಲ್ಯದ ಊಟದ ಕೋಣೆಯ ಪೀಠೋಪಕರಣಗಳು, 41.17 ಲಕ್ಷ ರೂ. ಮೌಲ್ಯದ ಬಾರ್ ಟೇಬಲ್, ಅಲಂಕಾರಿಕ 64,809 ರೂ. ಇಟಾಲಿಯನ್ ಟಾಯ್ಲೆಟ್ ಬ್ರಷ್‌ಗಳು ಮತ್ತು 95,308 ರೂ. ಮೌಲ್ಯದ ಟಾಯ್ಲೆಟ್ ಪೇಪರ್ ಹೋಲ್ಡರ್‌ಗಳೊಂದಿಗೆ ಅಲಂಕರಿಸಿದ ಸ್ನಾನಗೃಹ ಈ ಮಹಲಿನಲ್ಲಿದೆ. ಇದನ್ನೂ ಓದಿ: ಕಚ್ಚಾತೈಲ ಬೆಲೆ ಮತ್ತೆ ಶೇ.3 ಏರಿಕೆ; ಮಾರುಕಟ್ಟೆಯಿಂದ ಹೊರಬೀಳಲಿದೆಯಾ ರಷ್ಯಾ ತೈಲ
ವಿಮಾನದಲ್ಲಿ ಚಿನ್ನದ ಶೌಚಾಲಯ
ಕಪ್ಪು ಸಮುದ್ರದ ಮಹಲು ಹೊರತುಪಡಿಸಿಯೂ, 69 ವರ್ಷ ವಯಸ್ಸಿನ ರಷ್ಯಾ ಅಧ್ಯಕ್ಷ ಪುಟಿನ್ ಅವರು 19 ಇತರೆ ಮನೆಗಳು, 700 ಕಾರುಗಳು, 58 ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ಮಾಲೀಕರಾಗಿದ್ದಾರೆ. ಈ ವಿಮಾನಗಳಲ್ಲಿ ಒಂದು ʻದಿ ಫ್ಲೈಯಿಂಗ್ ಕ್ರೆಮ್ಲಿನ್ʼ ಅನ್ನು ಬಹುಕೋಟಿ ವೆಚ್ಚದಲ್ಲಿ ರೂಪಿಸಲಾಗಿದೆ. ಚಿನ್ನದಿಂದ ಮಾಡಿದ ಶೌಚಾಲಯವನ್ನು ವಿಮಾನ ಹೊಂದಿದೆ.