ಹೆಚ್ಚುತ್ತಿರುವ ಹಣಕಾಸಿನ ವಂಚನೆ (Financial Fraud) ವಿರುದ್ಧದ ಹೋರಾಟ ಮಾಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (Reserve Bank Of India) ಅಂಗವಾಗಿರುವ ರಿಸರ್ವ್ ಬ್ಯಾಂಕ್ ಇನ್ನೋವೇಶನ್ ಹಬ್‌ನ (Reserve Bank Innovation Hub) ಹೊಸ ಎಐ ತಂತ್ರಜ್ಞಾನವನ್ನು ಸಿದ್ಧಪಡಿಸಿದ್ದು, ಮ್ಯೂಲ್ ಹಂಟರ್ ಎಂದು ಕರೆಯಲಾಗುತ್ತದೆ. ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಕ್ರಮ ಹಣ ವರ್ಗಾವಣೆಯ ಟ್ರ‍್ಯಾಕ್ ಹೇಗೆ ಮಾಡುತ್ತದೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಂಗವಾಗಿರುವ ರಿಸರ್ವ್ ಬ್ಯಾಂಕ್ ಇನ್ನೋವೇಶನ್ ಹಬ್ `Mule Hunter AI’ ಎಂಬ ಸುಧಾರಿತ ಎಐ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಎಐ ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸುವ ಮೂಲಕ ಹಣಕಾಸಿನ ವಂಚನೆಯ ವಿರುದ್ಧದ ಹೋರಾಡಬೇಕು ಎನ್ನುವ ಮೂಲ ಉದ್ದೇಶವನ್ನು ಹೊಂದಿದೆ. ಸಾಮಾನ್ಯವಾಗಿ ಮನಿ ಲಾಂಡರಿಂಗ್ ಯೋಜನೆಗಳಲ್ಲಿ ಬಳಸುವ ಮ್ಯೂಲ್ ಖಾತೆಗಳನ್ನು ಗುರುತಿಸಿ, ಫ್ಲ್ಯಾಗ್ ಮಾಡುವ ಮೂಲಕ ಈ ರೀತಿಯ ಖಾತೆಗಳನ್ನು ಪತ್ತೆಹಚ್ಚುತ್ತದೆ.
Advertisement
Advertisement
ಈಗಾಗಲೇ ಈ ತಂತ್ರಜ್ಞಾನವನ್ನೊಳಗೊಂಡ ಅಪ್ಲಿಕೇಶನ್‌ಅನ್ನು ಎರಡು ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಯಶಸ್ವಿಯಾಗಿ ಪ್ರದರ್ಶಿಸಲಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಮಾಹಿತಿ ಪ್ರಕಾರ, ಸೈಬರ್ ಅಪರಾಧಕ್ಕೆ ಸಂಬಂಧಿಸಿದ ದೂರುಗಳ ಪೈಕಿ 67.8% ರಷ್ಟು ಆನ್‌ಲೈನ್ ಹಣಕಾಸು ವಂಚನೆಗಳಾಗಿವೆ. ಹೀಗಾಗಿ ಈ ರೀತಿಯ ವಂಚನೆ ತಡಗಟ್ಟಲು ಎಐ ಪ್ರಮುಖ ಪಾತ್ರವಹಿಸುತ್ತದೆ.
Advertisement
ಹಣಕಾಸಿನ ವಂಚನೆಯ ವಿರುದ್ಧ ಹೋರಾಡುವ ದೊಡ್ಡ ಸಮಸ್ಯೆಯೆಂದರೆ ಮ್ಯೂಲ್ ಖಾತೆಗಳನ್ನು ಪತ್ತೆ ಹಚ್ಚುವುದು. ಅಕ್ರಮ ಹಣಕಾಸು ಚಟುವಟಿಕೆಗಳ ಪ್ರಮುಖ ಸಕ್ರಿಯ ಕೇಂದ್ರವಾಗಿ ಮ್ಯೂಲ್ ಖಾತೆಗಳು ಕಾರ್ಯನಿರ್ವಹಿಸುತ್ತವೆ. `ಮ್ಯೂಲ್ ಹಂಟರ್ ಎಐ’ ನಂತಹ ತಂತ್ರಜ್ಞಾನಗಳು ಹಣಕಾಸಿನ ವ್ಯವಸ್ಥೆಯನ್ನು ರಕ್ಷಿಸಲು ಮತ್ತು ಸೈಬರ್ ಅಪರಾಧವನ್ನು ನಿಗ್ರಹಿಸಲು ಪ್ರಾಮುಖ್ಯತೆಯನ್ನು ಹೊಂದಿವೆ.
Advertisement
ಮ್ಯೂಲ್ ಖಾತೆ ಎಂದರೇನು?
ರಿಸರ್ವ್ ಬ್ಯಾಂಕ್ ಇನ್ನೋವೇಶನ್ ಹಬ್ ಪ್ರಕಾರ, ಅಕ್ರಮ ಹಣವನ್ನು ವರ್ಗಾವಣೆ ಮಾಡಲು ಬಳಸುವ ಬ್ಯಾಂಕ್ ಖಾತೆಯನ್ನು ಮ್ಯೂಲ್ ಖಾತೆ (Mule Accounts) ಎನ್ನುವರು. ಸುಲಭವಾಗಿ ಹಣದ ಭರವಸೆಯ ಆಮಿಷಕ್ಕೆ ಒಳಗಾಗಲು ಬಲವಂತಪಡಿಸುವ ಅನುಮಾನಾಸ್ಪದ ವ್ಯಕ್ತಿಗಳು ಇದನ್ನು ಬಳಸುತ್ತಾರೆ. ಈ ರೀತಿಯ ಖಾತೆಗಳ ಮೂಲಕ ಹಣವನ್ನು ವರ್ಗಾವಣೆ ಮಾಡುವುದರಿಂದ ಹಣವನ್ನು ಪತ್ತೆಹಚ್ಚಲು ಮತ್ತು ಮರುಪಡೆಯಲು ಕಷ್ಟವಾಗುತ್ತದೆ.
ಮ್ಯೂಲ್ ಹಂಟರ್ ಎಐನ ಅಭಿವೃದ್ಧಿ:
ರಿಸರ್ವ್ ಬ್ಯಾಂಕ್ ಇನ್ನೋವೇಶನ್ ಹಬ್ ಪ್ರಕಾರ, ಇದು ಮ್ಯೂಲ್ ಖಾತೆಗಳನ್ನು ಗುರುತಿಸಲು ಮತ್ತು ವರದಿ ಮಾಡುವ ಉದ್ದೇಶದಿಂದ ಅಸ್ತಿತ್ವದಲ್ಲಿರುವ ವಿಧಾನಗಳು ಮತ್ತು ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳಲು ಇಲಾಖೆಯು ಬ್ಯಾಂಕುಗಳೊಂದಿಗೆ ವ್ಯಾಪಕವಾದ ಸಮಾಲೋಚನೆ ನಡೆಸಿದೆ.
ಈ ತಂತ್ರಜ್ಞಾನವು ಈಗಾಗಲೇ ಹಲವಾರು ಬ್ಯಾಂಕ್‌ಗಳೊಂದಿಗೆ ಕೆಲಸ ನಿರ್ವಹಿಸಿದ್ದು, ಮ್ಯೂಲ್ ಖಾತೆಯ ಹತ್ತೊಂಬತ್ತು ವಿಭಿನ್ನ ಮಾದರಿಯ ಚಟುವಟಿಕೆಗಳನ್ನು ವಿಶ್ಲೇಷಿಸಿದೆ. ಹೀಗಾಗಿ ತಂತ್ರಜ್ಞಾನದ ಆರಂಭಿಕ ಫಲಿತಾಂಶದಲ್ಲಿ ದಕ್ಷತೆ ಮತ್ತು ನಿಖರತೆಯನ್ನು ಎತ್ತಿ ತೋರಿಸಿದೆ.
ಮ್ಯೂಲ್ ಹಂಟರ್ ಎಐ ಹೇಗೆ ಕೆಲಸ ಮಾಡುತ್ತದೆ?
ಶಂಕಿತ ಮ್ಯೂಲ್ ಖಾತೆಗಳನ್ನು ಗುರುತಿಸಲು ನಿಯಮ-ಆಧಾರಿತ ವ್ಯವಸ್ಥೆಗಿಂತ ಕೃತಕ ಬುದ್ಧಿಮತ್ತೆ (Artificial Intelligence) ಹಾಗೂ ಮಷಿನ್ ಲರ್ನಿಂಗ್ ಆಧಾರಿತ ಪರಿಹಾರವು ಸೂಕ್ತವಾಗಿರುತ್ತದೆ. ಈ ಮೂಲಕ ಹೆಚ್ಚಿನ ನಿಖರತೆ ಹಾಗೂ ಹೆಚ್ಚಿನ ವೇಗದೊಂದಿಗೆ ಮ್ಯೂಲ್ ಖಾತೆಗಳ ವಹಿವಾಟು ಮತ್ತು ಖಾತೆ ವಿವರ-ಸಂಬಂಧಿತ ಡೇಟಾಸೆಟ್‌ಗಳನ್ನು ವಿಶ್ಲೇಷಿಸಬಹುದು.
ರಿಸರ್ವ್ ಬ್ಯಾಂಕ್ ಇನ್ನೋವೇಶನ್ ಹಬ್‌ನ ಎಐನಿಂದ ಹಣಕಾಸು ವಂಚನೆಯ ಖಾತೆಗಳನ್ನು ವೇಗವಾಗಿ ಗುರುತಿಸುವ ಉದ್ದೇಶವನ್ನು ಹೊಂದಿದೆ. ವಂಚನೆಗಳು ವಿವಿಧ ಮಾರ್ಗಗಳ ಮೂಲಕ ಸಂಭವಿಸಬಹುದು. ಈ ರೀತಿಯ ವಂಚನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿವೆ. ಹಣವು ಅಂತಿಮವಾಗಿ ಯಾವ ಮ್ಯೂಲ್ ಖಾತೆಗಳಿಗೆ ಹೋಗುತ್ತದೆ ಎಂಬುದನ್ನು ಇದು ತಿಳಿಸುತ್ತದೆ. ಹೀಗಾಗಿ ಈ ತಂತ್ರಜ್ಞಾನ ಮಷಿನ್ ಲರ್ನಿಂಗ್ (Machine Learning) ಆಧಾರಿತ ವಿಧಾನದ ಮೂಲಕ ಬ್ಯಾಂಕಿನ ವ್ಯವಸ್ಥೆಯಲ್ಲಿ ಹೆಚ್ಚಿನ ಮ್ಯೂಲ್ ಕಾತೆಗಳನ್ನು ಪತ್ತೆಹಚ್ಚಲು ಸಹಕಾರಿಯಗುತ್ತದೆ.