ಬೆಂಗಳೂರು: ನಾಗಸಂದ್ರ-ಯಲಚೇನಹಳ್ಳಿ ಮಧ್ಯೆ ಸಂಚರಿಸುವ ಹಸಿರು ಮೆಟ್ರೋದ ಇತಿಹಾಸದಲ್ಲಿ ಮೊದಲ ಬಾರಿಗೆ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ಇನ್ನಾದರೂ ನಮ್ಮ ಮೆಟ್ರೋ ಹೆಚ್ಚಿನ ಸುರಕ್ಷತೆಗಳನ್ನು ಅಳವಡಿಸಿಕೊಂಡರೆ ಈ ರೀತಿಯ ಆತ್ಮಹತ್ಯೆ ಯತ್ನಗಳನ್ನು ತಡೆಯಬಹುದು.
ಹೌದು. ಪ್ರಸ್ತುತ ಮೆಟ್ರೋ ರೈಲು ಬರುವಾಗ ಸಿಬ್ಬಂದಿ ಮುಂದಕ್ಕೆ ಹೋಗಬೇಡಿ ಎಂದು ತಡೆಯುತ್ತಾರೆ. ಆದರೆ ರೈಲು ಹತ್ತಿರ ಬರುತ್ತಿದ್ದಾಗ ಏಕಾಏಕಿ ಹಾರಿದರೆ ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಆದರೆ ಮೆಟ್ರೋ ನಿಗಮಗಳು ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಹಣ ಖರ್ಚು ಮಾಡಿದರೆ ಸಂಭವಿಸಬಹುದಾಗಿರುವ ಅವಘಡಗಳನ್ನು ತಪ್ಪಿಸಬಹುದು.
Advertisement
Advertisement
ಏನು ಮಾಡಬಹುದು?:
ವಿದೇಶಗಳಲ್ಲಿರುವ ಮೆಟ್ರೋ ನಿಲ್ದಾಣದಲ್ಲಿ ರೈಲು ಹತ್ತುವ ಜಾಗವನ್ನು ಗ್ಲಾಸ್ ಗೋಡೆಗಳಿಂದ ಮುಚ್ಚಲಾಗುತ್ತದೆ. ರೈಲು ಬಂದಾಗ ಗ್ಲಾಸ್ ಗಳ ಮಧ್ಯೆ ಎಲ್ಲಿ ಡೋರ್ ಇರುತ್ತದೋ ಅಲ್ಲೇ ನಿಲ್ಲುತ್ತದೆ. ರೈಲು ನಿಂತ ಬಳಿಕ ಸೆನ್ಸರ್ ಇರುವ ಡೋರ್ ಓಪನ್ ಆಗುತ್ತದೆ. ಹೊರಡುವ ವೇಳೆ ಗ್ಲಾಸ್ ಡೋರ್ ಮತ್ತು ರೈಲಿನ ಡೋರ್ ಮುಚ್ಚಿಕೊಳ್ಳುತ್ತದೆ. ಈ ರೀತಿಯಾಗಿ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಿದರೆ ಮುಂದೆ ಆತ್ಮಹತ್ಯೆ ಯತ್ನದಂತಹ ಪ್ರಕರಣಗಳನ್ನು ತಡೆಯಬಹುದು.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv