ಚೈನೀಸ್ ಫುಡ್‍ನಲ್ಲಿ ಹೆಚ್ಚು ಜನಪ್ರಿಯವಾದ ಅಡುಗೆ ಎಂದರೆ ನೂಡಲ್ಸ್. ಇದನ್ನು ಚಿಕ್ಕವರಿಂದ ದೊಡ್ಡವರ ತನಕ ನೂಡಲ್ಸ್ ಎಂದರೆ ತುಂಬಾ ಇಷ್ಟ. ಇಂದು ನಾವು ಹೇಳಿಕೊಡುವ ರೆಸಿಪಿಯನ್ನು ನೀವು ಮನೆಯಲ್ಲಿ ಟ್ರೈ ಮಾಡಿ. ಇದು ತುಂಬಾ ರುಚಿಯಾಗಿರುತ್ತೆ. ಮಕ್ಕಳು ಸಹ ಇಷ್ಟಪಟ್ಟು ತಿನ್ನುತ್ತಾರೆ.
Advertisement
ಬೇಕಾಗಿರುವ ಪದಾರ್ಥಗಳು:
* ನೂಡಲ್ಸ್ – 2 ಕಪ್
* ಕಟ್ ಮಾಡಿದ ಶುಂಠಿ, ಬೆಳ್ಳುಳ್ಳಿ – 6
* ಕಟ್ ಮಾಡಿದ ಬೀನ್ಸ್ – 1/4 ಕಪ್
* ಸಣ್ಣದಾಗಿ ಕಟ್ ಮಾಡಿದ ಈರುಳ್ಳಿ – 1/4 ಕಪ್
* ಕಾಟ್ ಮಾಡಿದ ಕ್ಯಾಪ್ಸಿಕಂ – 1/2 ಕಪ್
* ಕಟ್ ಮಾಡಿದ ಎಲೆಕೋಸು – 1/2 ಕಪ್
* ಕಟ್ ಮಾಡಿದ ಕ್ಯಾರೆಟ್ – 1/4 ಕಪ್
Advertisement
Advertisement
* ಕಪ್ಪು ಮೆಣಸು ಪುಡಿ – 1/4 ಟೀಚಮಚ
* ಸೋಯಾ ಸಾಸ್ – 2 ಟೀಸ್ಪೂನ್
* ಚಿಲ್ಲಿ ಸಾಸ್ – 1 ಟೀಚಮಚ
* ಟೊಮೆಟೊ ಕೆಚಪ್ – 1 ಚಮಚ
* ಚಮಚ ಎಣ್ಣೆ – 1 ಚಮಚ
* ರುಚಿಗೆ ತಕ್ಕಷ್ಟು ಉಪ್ಪು
Advertisement
ಮಾಡುವ ವಿಧಾನ:
* ಕಡಿಮೆ ಉರಿಯಲ್ಲಿ ನೂಡಲ್ಸ್ ಬೇಯಿಸಿಕೊಳ್ಳಿ. ಹೆಚ್ಚು ಕುದಿಸಬೇಡಿ.
* ತರಕಾರಿಗಳನ್ನು ಸಾಧ್ಯವಾದಷ್ಟು ತೆಳ್ಳಗೆ ಕಟ್ ಮಾಡಿಕೊಳ್ಳಿ, ಏಕೆಂದರೆ ಅವು ಬೇಯಿಸಲು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ.
* ಒಂದು ಕಾಲಿ ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಬೀನ್ಸ್, ಈರುಳ್ಳಿ, ಕ್ಯಾಪ್ಸಿಕಂ, ಎಲೆಕೋಸು ಮತ್ತು ಕ್ಯಾರೆಟ್ ಸೇರಿಸಿ ಫ್ರೈ ಮಾಡಿ.
* ನಂತರ ತರಕಾರಿಗೆ ಸೋಯಾ ಸಾಸ್, ಚಿಲ್ಲಿ ಸಾಸ್, ಟೊಮೆಟೊ ಕೆಚಪ್, ಕರಿಮೆಣಸಿನ ಪುಡಿ ಮತ್ತು ಉಪ್ಪುನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಒಂದು ನಿಮಿಷ ಬೇಯಿಸಿ.
* ಕೊನೆಗೆ ಫ್ರೈಗೆ ನೂಡಲ್ಸ್ ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ
– ಸರ್ವಿಂಗ್ ಪ್ಲೇಟ್‍ಗೆ ವರ್ಗಾಯಿಸಿ. ಇದನ್ನು ಬಿಸಿ ಇರುವಾಗಲೇ ಟೊಮೆಟೊ ಕೆಚಪ್ ಜೊತೆ ಬಡಿಸಿ.