Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: `ಜಿಪಿಎಸ್‌’ ಜೊತೆಗೆ ಹುಟ್ಟುವ ಆಲಿವ್ ರಿಡ್ಲಿ ಆಮೆಗಳು!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | `ಜಿಪಿಎಸ್‌’ ಜೊತೆಗೆ ಹುಟ್ಟುವ ಆಲಿವ್ ರಿಡ್ಲಿ ಆಮೆಗಳು!

Latest

`ಜಿಪಿಎಸ್‌’ ಜೊತೆಗೆ ಹುಟ್ಟುವ ಆಲಿವ್ ರಿಡ್ಲಿ ಆಮೆಗಳು!

Public TV
Last updated: January 13, 2026 8:35 pm
Public TV
Share
3 Min Read
AME 00000
SHARE

ಸಮುದ್ರ ಆಮೆಗಳು (Turtles) ಆಹಾರಕ್ಕಾಗಿ ಮತ್ತು ಸಂತಾನೋತ್ಪತ್ತಿಗಾಗಿ ಸಾವಿರಾರು ಕಿಲೋಮೀಟರ್‌ಗಳಷ್ಟು ದೂರದ ಕಡಲು ಪ್ರದೇಶಗಳ ನಡುವೆ ಪ್ರಯಾಣಿಸುತ್ತವೆ. ಇಷ್ಟೆಲ್ಲ ದೂರ ಸಾಗುವ ಇವು ಮತ್ತೆ ಮೊಟ್ಟೆ ಇಡಲು ತಮ್ಮ ಹುಟ್ಟಿದ ಸ್ಥಳದ ಕಡಲತೀರಗಳಿಗೆ ವಾಪಸ್‌ ಬರುತ್ತವೆ. ಹೀಗೆ ಅದೇ ಕಡಲ ತೀರಕ್ಕೆ ವಾಪಸ್‌ ಆಗಲು ಅವುಗಳಿಗೆ ವಿಶೇಷವಾದ ಶಕ್ತಿಯನ್ನು ಪ್ರಕೃತಿ ನೀಡಿದೆ. ಆ ಆಮೆಗಳ ವಿಶೇಷ ಶಕ್ತಿ, ಸಾಮರ್ಥ್ಯ, ಅವುಗಳಿಗಿರುವ ಅಪಾಯಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ. 

ಹುಟ್ಟಿನಿಂದಲೇ ಬಂದ ಜಿಪಿಎಸ್‌! 
ದಿಕ್ಸೂಚಿ ಮತ್ತು ನ್ಯಾವಿಗೇಷನ್: ಹೆಣ್ಣು ಆಮೆಗಳು ಮೊಟ್ಟೆ ಇಡಲು ಅವು ಜನಿಸಿದ ಕಡಲತೀರಗಳಿಗೆ ಹಿಂತಿರುಗಿ ಬರುತ್ತವೆ. ಇದನ್ನು ʻನೇಟಲ್ ಹೋಮಿಂಗ್ʼ ಎನ್ನುತ್ತಾರೆ. ಭೂಮಿಯ ಕಾಂತಕ್ಷೇತ್ರ, ಸಾಗರ ಪ್ರವಾಹ ಮತ್ತು ನೀರಿನ ಗುಣಲಕ್ಷಣ ಬಳಸಿ ತಮ್ಮ ದಾರಿಯನ್ನು ಈ ಆಮೆಗಳು ಪತ್ತೆ ಮಾಡುತ್ತವೆ. ಲೆದರ್‌ಬ್ಯಾಕ್ ಆಮೆಗಳು 3,000 ಮೈಲುಗಳಿಗಿಂತ ಹೆಚ್ಚು ದೂರ ವಲಸೆ ಕೈಗೊಳ್ಳಬಲ್ಲವು.

Tortoise

ಭೂಮಿಯ ಕಾಂತಕ್ಷೇತ್ರವನ್ನು ಗ್ರಹಿಸುವ ಶಕ್ತಿ
ಆಲಿವ್ ರಿಡ್ಲಿಯಂತಹ (Olive Ridley) ಆಮೆಗಳಿಗೆ ಭೂಮಿಯ ಕಾಂತಕ್ಷೇತ್ರವನ್ನು ಗ್ರಹಿಸುವ ಶಕ್ತಿಯಿದೆ (ಮ್ಯಾಗ್ನೆಟೋರೆಸೆಪ್ಷನ್), ಇದನ್ನು ಅವು ದಿಕ್ಸೂಚಿಯಂತೆ ಬಳಸಿಕೊಂಡು ಸಾವಿರಾರು ಮೈಲುಗಳಷ್ಟು ದೂರದ ತಮ್ಮ ಹುಟ್ಟಿದ ಕಡಲತೀರಗಳಿಗೆ ಮರಳುತ್ತವೆ. ಅಲ್ಲದೇ ಮಹಾಸಾಗರಗಳಾದ್ಯಂತ ವಲಸೆ ಹೋಗುತ್ತವೆ. ಇದು ಆನುವಂಶಿಕವಾಗಿ ಬಂದ ನೈಸರ್ಗಿಕ `ಜಿಪಿಎಸ್’ (GPS) ವ್ಯವಸ್ಥೆಯಾಗಿದೆ. ಭೂಮಿಯ ಕಾಂತಕ್ಷೇತ್ರದ ಕೋನ ಮತ್ತು ತೀವ್ರತೆಯಂತಹ ವಿಶಿಷ್ಟ ಗುರುತುಗಳನ್ನು ಬಳಸಿಕೊಳ್ಳುತ್ತದೆ. 

ಕಾಂತೀಯ ಶಕ್ತಿ ಹೇಗೆ ಕೆಲಸ ಮಾಡುತ್ತದೆ?
ದಿಕ್ಸೂಚಿ ಮತ್ತು ಜಿಪಿಎಸ್: ಆಮೆಗಳು ಭೂಮಿಯ ಕಾಂತೀಯ ಕ್ಷೇತ್ರದ ಸೂಕ್ಷ್ಮ ವ್ಯತ್ಯಾಸಗಳನ್ನು ಗ್ರಹಿಸುತ್ತವೆ. ಪ್ರತಿಯೊಂದು ಕಡಲತೀರವು ಒಂದು ವಿಶಿಷ್ಟವಾದ ʻಕಾಂತೀಯ ಶಕ್ತಿʼಯನ್ನು ಹೊಂದಿರುತ್ತದೆ. ಆಮೆಗಳು ಮರಿಗಳಿದ್ದಾಗಲೇ ತಮ್ಮ ಮೆದುಳಿನಲ್ಲಿ ಈ ಮಾಹಿತಿಯನ್ನು ದಾಖಲಿಸಿಕೊಳ್ಳುತ್ತವೆ. 

Tortoise 4

ವಲಸೆ ಹೋಗುವಾಗ, ಆಮೆಗಳು ಈ ಕಾಂತೀಯ ಮಾಹಿತಿಯನ್ನು ಬಳಸಿಕೊಂಡು ಅಕ್ಷಾಂಶ ಮತ್ತು ರೇಖಾಂಶವನ್ನು ನಿರ್ಧರಿಸುತ್ತವೆ. ಇದು ಅವುಗಳಿಗೆ ಸಾವಿರಾರು ಮೈಲಿ ಸಂಚರಿಸಲು ಸಹಾಯ ಮಾಡುತ್ತದೆ. ಈ ಸಾಮರ್ಥ್ಯವು ಆನುವಂಶಿಕವಾಗಿದೆ ಎಂದು ನಂಬಲಾಗಿದೆ. ಅಂದರೆ ಮರಿಗಳು ಹುಟ್ಟಿನಿಂದಲೇ ಈ ಕೌಶಲ್ಯವನ್ನು ಹೊಂದಿರುತ್ತವೆ. 

ಕಾಂತೀಯ ಶಕ್ತಿಯ ಜೊತೆಗೆ, ಆಮೆಗಳು ಇತರ ಸುಳಿವುಗಳನ್ನು ಸಹ ಬಳಸುತ್ತವೆ. ನೀರಿನ ಪ್ರವಾಹದ ದಿಕ್ಕು ಮತ್ತು ತಾಪಮಾನವನ್ನು ಗ್ರಹಿಸುತ್ತವೆ. ಸೌರ ಮತ್ತು ನಕ್ಷತ್ರದ ಸಂಕೇತಗಳನ್ನು ಸಹ ಬಳಸಿಕೊಳ್ಳುತ್ತವೆ. ದಡದ ಸಮೀಪ ಬಂದಾಗ, ಅಲ್ಲಿನ ಮರಳು, ನೀರಿನ ತಳದ ಲಕ್ಷಣಗಳು ಮತ್ತು ವಾಸನೆಗಳನ್ನು ಗುರುತಿಸುತ್ತವೆ. ಈ ಸಾಮರ್ಥ್ಯ ಆಮೆಗಳ ವಲಸೆಯನ್ನು ಯಶಸ್ವಿಗೊಳಿಸುತ್ತವೆ.

Tortoise 3

ಸಂತಾನೋತ್ಪತ್ತಿ ವಲಸೆ: ಸಂಯೋಗದ ನಂತರ ಹೆಣ್ಣು ಆಮೆಗಳು ಕಡಲತೀರಕ್ಕೆ ಹೋಗುತ್ತವೆ. ಆಲಿವ್ ರಿಡ್ಲಿ (Olive Ridley) ಮತ್ತು ಲೆದರ್‌ಬ್ಯಾಕ್‌ನಂತಹ ಕೆಲವು ಜಾತಿ ಆಮೆಗಳು ಆಹಾರಕ್ಕಾಗಿ ಸಾಗರದಲ್ಲಿ ವಿವಿಧ ಪ್ರದೇಶಗಳಿಗೆ ಚಲಿಸುತ್ತವೆ. ಹಸಿರು ಆಮೆಗಳು ಮೇವು ಇರುವ ಪ್ರದೇಶಗಳಿಗೂ, ಲೆದರ್‌ಬ್ಯಾಕ್‌ಗಳು ತೆರೆದ ಸಾಗರದಲ್ಲೂ ವಲಸೆ ಹೋಗುತ್ತವೆ. 

ಹೊನ್ನಾವರ ಕಡಲತೀರದಲ್ಲಿ ಆಲಿವ್ ರಿಡ್ಲೆಗಳು
ನವೆಂಬ‌ರ್ ಆರಂಭಗೊಳ್ಳುತ್ತಿದ್ದಂತೆ ಉತ್ತರ ಕನ್ನಡದ ಆಯ್ದ ಕಡಲತೀರಗಳಲ್ಲಿ ಆಲಿವ್ ರಿಡ್ಲೆಗಳು ಮೊಟ್ಟೆ ಇಡಲು ಆಗಮಿಸುತ್ತವೆ. ಹೊನ್ನಾವರ ವಿಭಾಗದ ಕಡಲತೀರಗಳಲ್ಲಿ, ಕಾರವಾರದ ಮಾಜಾಳಿ ಭಾಗದಲ್ಲಿ ಮೊಟ್ಟೆ ಇಡುವ ಪ್ರಮಾಣ ಹೆಚ್ಚಿದೆ. ಏಪ್ರಿಲ್ ತಿಂಗಳು ಮುಗಿಯುವವರೆಗೂ ಅಳಿವಿನಂಚಿನಲ್ಲಿರುವ ಈ ತಳಿಯ ಕಡಲಾಮೆಗಳ ಮೊಟ್ಟೆಗಳನ್ನು ಸಂರಕ್ಷಣೆ ಮಾಡುವ ಕೆಲಸ ನಡೆಯುತ್ತದೆ. ಸದ್ಯ ಜಿಲ್ಲೆಯ ಮಂಜಗುಣಿ, ಬಾವಳ, ಧಾರೇಶ್ವರ ಭಾಗದಲ್ಲಿ ನೂರಾರು ಮೊಟ್ಟೆಗಳನ್ನು ಕಡಲಾಮೆಗಳು ಇರಿಸಿ ಹೋಗಿವೆ. 

Tortoise 2

2024-25ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯ ಕರಾವಳಿ ಪ್ರದೇಶದ ಸಸಿಹಿತ್ಲುವಿನ 8 ಕಡೆ, ಬೆಂಗ್ರೆಯಲ್ಲಿ 1 ಕಡೆ ಹಾಗೂ ಇಡ್ಯಾದಲ್ಲಿ 13 ಕಡೆ ಸೇರಿ ಒಟ್ಟು 24 ಗೂಡುಗಳಲ್ಲಿ ಆಮೆಯ 2,490 ಮೊಟ್ಟೆಗಳನ್ನು ಸಂಗ್ರಹಿಸಲಾಗಿತ್ತು. ಇದರಲ್ಲಿ 1,842 ಮರಿಗಳು ಯಶಸ್ವಿಯಾಗಿ ಹೊರ ಬಂದಿವೆ. 

ಸಮುದ್ರದ ಆರೋಗ್ಯ ಸೂಚಕ
ಆಮೆಗಳು ಅಪರೂಪದ ಜೀವಿಗಳಲ್ಲ. ಸಮುದ್ರದ ಆರೋಗ್ಯದ ಸೂಚಕಗಳಾಗಿವೆ. ಇವು ಜೆಲ್ಲಿ ಫಿಶ್‌ ಜಾತಿಯ ಮೀನುಗಳನ್ನು ಆಹಾರವಾಗಿ ಸೇವಿಸುವುದರಿಂದ ಸಮುದ್ರ ಪರಿಸರದ ಸಮತೋಲನ ಕಾಪಾಡುತ್ತವೆ. ಕಾರವಾರದಿಂದ ದಕ್ಷಿಣ ಕರಾವಳಿ ಭಾಗದವರೆಗೆ ಕಾಣಿಸಿಕೊಳ್ಳುವ ಈ ಆಲಿವ್‌ ರಿಡ್ಲೇ ಆಮೆಗಳ ಸಂತತಿ ಹೆಚ್ಚುತ್ತಿರುವುದು ಸಮುದ್ರ ಪರಿಸರಕ್ಕೆ ಶುಭ ಸಂಕೇತವಾಗಿದೆ. 

Tortoise 1

ಆಮೆ ಮೊಟ್ಟೆ ನಾಶ ಅಪರಾಧ
ಆಮೆ ಅಥವಾ ಅದರ ಮೊಟ್ಟೆ ನಾಶಪಡಿಸುವುದು ಗಂಭೀರ ಅಪರಾಧವಾಗಿದ್ದು, ಇದಕ್ಕೆ ಹುಲಿ ಹತ್ಯೆಗೆ ಸಮನಾದ ಕಾನೂನು(ಶೆಡ್ಯೂಲ್‌-1) ಅನ್ವಯವಾಗುತ್ತದೆ. 

ಕಡಲಾಮೆಗಿರುವ ಬೆದರಿಕೆಗಳು
ಕರಾವಳಿ ಅಭಿವೃದ್ಧಿ: ಕಡಲತೀರಗಳಲ್ಲಿ ಮಾನವ ಚಟುವಟಿಕೆಗಳು ಆಮೆಗಳ ಗೂಡುಕಟ್ಟುವಿಕೆಗೆ ಅಡ್ಡಿಪಡಿಸುತ್ತವೆ. 

ಸಾಗರ ಮಾಲಿನ್ಯ: ಪ್ಲಾಸ್ಟಿಕ್ ಮತ್ತು ಇತರ ಕಡಲ ಕಸಗಳು ಆಮೆಗಳಿಗೆ ಗಾಯ ಅಥವಾ ಸಾವಿಗೆ ಕಾರಣವಾಗುತ್ತವೆ. ತುಂಡಾದ ಮೀನುಗಾರಿಕೆ ಬಲೆಗಳು ಹಾಗೂ ಕೈಗಾರಿಕಾ ಘಟಕಗಳಿಂದ ಬಿಸಿ ನೀರು ಬಿಡುವುದು ಆಮೆಗಳ ಜೀವಕ್ಕೆ ಮಾರಕವಾಗುತ್ತಿದೆ. ಹಿಂದಿನಂತೆ ಜೀವಂತ ಆಮೆಗಳು ಸಮುದ್ರದಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾಗುತ್ತಿದ್ದು, ಸತ್ತು ತೀರಕ್ಕೆ ಬರುವ ಘಟನೆಗಳು ಹೆಚ್ಚಾಗಿವೆ. 

ವಿಜ್ಞಾನಿಗಳು ಉಪಗ್ರಹ ಟ್ರ್ಯಾಕಿಂಗ್ ಬಳಸಿ ಆಮೆಗಳ ಚಲನವಲನಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ವಿವಿಧ ರಾಷ್ಟ್ರಗಳು ಆಮೆಗಳನ್ನು ರಕ್ಷಿಸಲು ಯೋಜನೆ ಕೈಗೊಂಡಿವೆ. 

TAGGED:gpsIndian BeachOlive RidleyTurtles
Share This Article
Facebook Whatsapp Whatsapp Telegram

Cinema news

KD Vulgar Song Controversy I will write and release a new song Director Prem apologizes 1
ಹೊಸ ಹಾಡನ್ನು ಬರೆದು ಬಿಡುಗಡೆ ಮಾಡುತ್ತೇನೆ: ಕ್ಷಮೆ ಕೇಳಿದ ಪ್ರೇಮ್‌
Bengaluru City Cinema Districts Latest Main Post
KD The Devil Thanks for opposing the song Nora Fatehi Reacts To Vulgar Song Controversy
ಸಾಂಗ್‌ ವಿರೋಧಿಸಿದ್ದಕ್ಕೆ ಥ್ಯಾಂಕ್ಸ್‌ – ಕೆಡಿಯ ಸರ್ಸೆ ಸೆರಗ ಹಾಡಿಗೆ ನೋರಾ ಕಿಡಿ ಕಿಡಿ
Bollywood Cinema Latest Sandalwood
darshan vijayalakshmi
ಕೋರ್ಟ್ ಆದೇಶವಿದ್ರೂ ದರ್ಶನ್‌ಗೆ ಒಳ ಸಂದರ್ಶನಕ್ಕಿಲ್ಲ ಅವಕಾಶ – ಹೆಂಡ್ತಿ, ಮಗನ ಭೇಟಿ ಇಲ್ಲ
Cinema Latest Sandalwood Top Stories
Sarse Ninna Seraga Sarse song jogi prem
ಜೋಗಿ ಪ್ರೇಮ್‌ಗೆ ಬಿಗ್‌ ಶಾಕ್‌ – ‘ಸರ್ಸೆ ಸೆರಗ ಸರ್ಸೆ’ ವಿವಾದಿತ ಹಾಡು ಬ್ಯಾನ್
Cinema Latest Main Post Sandalwood

You Might Also Like

tulsi gabbard
Latest

ಅಮೆರಿಕಕ್ಕೆ ಪಾಕಿಸ್ತಾನದಿಂದ ಪರಮಾಣು ಬೆದರಿಕೆಯಿದೆ: ಗುಪ್ತಚರ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್

Public TV
By Public TV
10 minutes ago
Parappana agrahara 1
Bengaluru City

ಜೈಲಿನಲ್ಲಿ ಮಹಿಳಾ ಖೈದಿಗಳ ಡ್ರಗ್ಸ್ ಟೆಸ್ಟ್ ಪಾಸಿಟಿವ್ ರಿಪೋರ್ಟ್ – ಅಧಿಕಾರಿಗಳೇ ಶಾಕ್

Public TV
By Public TV
50 minutes ago
Bagalkote by election CM Siddaramaiah meeting with HY Meti Family
Bagalkot

ಉಪಚುನಾವಣೆ| ಸಿಎಂ ಕಚೇರಿಯಲ್ಲಿ ಸಂಧಾನ ಸಭೆಗೆ ವ್ಯಾಪಕ ಟೀಕೆ

Public TV
By Public TV
1 hour ago
Kalaburagi Dharwad Benches of the High Court
Districts

ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೋ ಕೇಸ್ – ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ

Public TV
By Public TV
1 hour ago
HD Devegowda Mallikarjun Kharge
Bengaluru City

ಕಾಂಗ್ರೆಸ್‌ ಜೊತೆ ಬಲವಂತದ ಮದುವೆಯಲ್ಲಿದ್ದೆ, ನಮ್ಮನ್ನು ಬಿಟ್ಟು ಹೋಗಿದ್ದಕ್ಕೆ ವಿಚ್ಛೇದನ ನೀಡಿದ್ದೇನೆ: ಹೆಚ್‌ಡಿಡಿ ತಿರುಗೇಟು

Public TV
By Public TV
2 hours ago
ಸಾಂದರ್ಭಿಕ ಚಿತ್ರ
Bengaluru City

ಯುಗಾದಿಗೆ `ಗೃಹಲಕ್ಷ್ಮಿ’ಯರಿಗೆ ಗುಡ್‌ನ್ಯೂಸ್ – 27ನೇ ಕಂತಿನ ಹಣ ಬಿಡುಗಡೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?