ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕತ್ವದಿಂದ ಸರ್ಫರಾಜ್ ಅಹ್ಮದ್‍ರನ್ನು ಕೆಳಗಿಳಿಸಿದ ಬಳಿಕ ಸರ್ಫರಾಜ್ ಪತ್ನಿ ಖುಷ್ ಬಹ್ತ್ ಪತಿ ವಿರುದ್ಧ ಕೇಳಿ ಬಂದ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ. ಆದರೆ ಖುಷ್ ಬಹ್ತ್ ಪತಿಯ ಬೆಂಬಲಕ್ಕೆ ನಿಲ್ಲಲು ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಯನ್ನು ಉದಾಹರಣೆಯಾಗಿ ನೀಡಿ ಪತಿಯನ್ನು ಸಮರ್ಥಿಸಿಕೊಂಡಿದ್ದಾರೆ.
ಟೀ ಇಂಡಿಯಾ ಆಟಗಾರ 38 ವರ್ಷದ ಎಂಎಸ್ ಧೋನಿ ಕ್ರಿಕೆಟ್ ಆಡುತ್ತಿದ್ದ ಸಂದರ್ಭದಲ್ಲಿ ತನ್ನ ಪತಿ ಏಕೆ ಕ್ರಿಕೆಟ್ ಆಡಬಾರದು ಎಂಬುವುದು ಖುಷ್ ಬಹ್ತ್ ಅವರ ವಾದವಾಗಿದೆ. ಅಲ್ಲದೇ ತಮ್ಮ ಪತಿ ಮತ್ತಷ್ಟು ಸಮರ್ಥರಾಗಿ ತಂಡಕ್ಕೆ ಕಮ್‍ಬ್ಯಾಕ್ ಮಾಡುತ್ತಾರೆ ಎಂದು ಖುಷ್ ಬಹ್ತ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
Advertisement
Advertisement
ಸಂದರ್ಶನವೊಂದರಲ್ಲಿ ಮಾತನಾಡಿದ ಖುಷ್ ಬಹ್ತ್, ನನ್ನ ಪತಿ ಏಕೆ ನಿವೃತ್ತಿಯಾಗಬೇಕು? ಅವರಿಗೆ ಇನ್ನು 32 ವರ್ಷವಷ್ಟೇ. ಧೋನಿ ಅವರ ವಯಸ್ಸೆಷ್ಟು? ಅವರು ಈ ವಯಸ್ಸಿಗೆ ನಿವೃತ್ತಿಯಾಗಿದ್ದಾರಾ ಎಂದು ಪ್ರಶ್ನೆ ಮಾಡಿ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.
Advertisement
2019ರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಿಂದ ಪಾಕಿಸ್ತಾನ ಕ್ರಿಕೆಟ್ ತಂಡ ಹೊರಬಿದ್ದ ಬಳಿಕ ತಂಡದ ನಾಯಕತ್ವ ಕುರಿತು ಭಾರೀ ಟೀಕೆ ವ್ಯಕ್ತವಾಗಿತ್ತು. ಅಲ್ಲದೇ ಆ ಬಳಿಕ ನಡೆದ ಶ್ರೀಲಂಕಾ ವಿರುದ್ಧ ಕ್ರಿಕೆಟ್ ಟೂರ್ನಿಯಲ್ಲೂ ಪಾಕ್ ತಂಡ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಪರಿಣಾಮ ಪಾಕ್ ಕ್ರಿಕೆಟ್ ಬೋರ್ಡ್, ಸರ್ಫರಾಜ್ ಅಹ್ಮದ್‍ರನ್ನು ಟೆಸ್ಟ್, ಟಿ20 ತಂಡದ ನಾಯಕತ್ವದಿಂದ ಸರ್ಫರಾಜ್ ಅಹ್ಮದ್ ರನ್ನು ಕೆಳಗಿಳಿಸಿ ಅಝರ್ ಅಲಿರನ್ನು ನಾಯಕರನ್ನಾಗಿ ಮಾಡಿತ್ತು. ನಾಯಕತ್ವದಿಂದ ಕೆಳಗಿಳಿಸಿದ್ದು ಮಾತ್ರವಲ್ಲದೇ ಟೆಸ್ಟ್ ಹಾಗೂ ಟಿ20 ತಂಡದಿಂದಲೂ ಸರ್ಫರಾಜ್‍ರನ್ನು ಕೈ ಬಿಟ್ಟಿತ್ತು.