ಮುಂಬೈ: ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಉತ್ತಮ ಆದಾಯ ಗಳಿಸುವ ಜೊತೆಗೆ ಭಾರೀ ಮೊತ್ತದ ತೆರಿಗೆಯನ್ನೂ ಪಾವತಿಸುತ್ತಿದೆ.
2021-22ನೇ ಸಾಲಿನ ಹಣಕಾಸು ವರ್ಷದಲ್ಲಿ ಬರೋಬ್ಬರಿ 1,159 ಕೋಟಿ ರೂ. ಆದಾಯ ತೆರಿಗೆ ಪಾವತಿಸಿರುವುದನ್ನು ಬಹಿರಂಗಪಡಿಸಿದೆ. ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿರುವ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ಕಳೆದ 5 ವರ್ಷಗಳಲ್ಲಿ ಬಿಸಿಸಿಐ ಪಾವತಿಸಿದ ಆದಾಯ ತೆರಿಗೆ ಮತ್ತು ಅದರ ಆದಾಯ ಮತ್ತು ವೆಚ್ಚಗಳ ವಿವರಗಳನ್ನು ನೀಡಿದ್ದಾರೆ. ಇದನ್ನೂ ಓದಿ: ತಿಲಕ್ ವರ್ಮಾ ಫಿಫ್ಟಿ ತಪ್ಪಿಸಿ ಹಿಗ್ಗಾಮುಗ್ಗ ಟ್ರೋಲ್‌ಗೆ ಗುರಿಯಾದ ಪಾಂಡ್ಯ – ಅಭಿಮಾನಿಗಳು ಕೆಂಡ
Advertisement
Advertisement
ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿರುವ ಬಿಸಿಸಿಐ 2024-27ರ ವರೆಗೆ ವಾರ್ಷಿಕವಾಗಿ 230 ಮಿಲಿಯನ್ ಡಾಲರ್ (ಸುಮಾರು 19 ಸಾವಿರ ಕೋಟಿ ರೂ.) ಹಣವನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ (ICC) ಪಡೆಯಲಿದೆ. ಐಸಿಸಿಯ ವಾರ್ಷಿಕ ಆದಾಯದಿಂದ ಅತಿ ಹೆಚ್ಚು ಮೊತ್ತವನ್ನು ಪಡೆಯುತ್ತಿರುವ ಬಿಸಿಸಿಐ ಸಂಸ್ಥೆ, ದೊಡ್ಡ ಮೊತ್ತದ ತೆರಿಗೆಯನ್ನೂ ಸರ್ಕಾರಕ್ಕೆ ಪಾವತಿಸುತ್ತಿದೆ.
Advertisement
Advertisement
ಬಿಸಿಸಿಐಗೆ ಬರುತ್ತಿರುವ ಆದಾಯ ಮೂಲಗಳಲ್ಲಿ ಐಸಿಸಿ ಹಾಗೂ ಐಪಿಎಲ್‌ನಿಂದ (IPL) ಬರುವ ಆದಾಯ ಮೂಲಗಳು ಪ್ರಮುಖವಾಗಿವೆ. ಆಟಗಾರರ ಭಾಗವಹಿಸುವಿಕೆ ಮತ್ತು ಪ್ರಾಯೋಜಕತ್ವಗಳೆರಡರಲ್ಲೂ ಐಪಿಎಲ್ ವಿಶ್ವದ ಅತ್ಯಂತ ಲಾಭದಾಯಕ ಕ್ರಿಕೆಟ್ ಲೀಗ್ ಆಗಿ ಹೊರಹೊಮ್ಮಿದೆ. ಇದು ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಬಲಗೊಳ್ಳುವ ನಿರೀಕ್ಷೆಯಿದೆ. ಇದನ್ನೂ ಓದಿ: ಸೂರ್ಯನ ಆರ್ಭಟಕ್ಕೆ ವಿಂಡೀಸ್ ಕಂಗಾಲು, ಭಾರತಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ – ಸರಣಿ ಜಯದ ಕನಸು ಜೀವಂತ
2020-21ನೇ ಹಣಕಾಸು ವರ್ಷದಲ್ಲಿ ಬಿಸಿಸಿಐ ಆದಾಯ ತೆರಿಗೆಯ ರೂಪದಲ್ಲಿ ಸರ್ಕಾರಕ್ಕೆ 844.92 ಕೋಟಿ ರೂ. ಪಾವತಿಸಿದೆ. 2019-20ರಲ್ಲಿ ಸಂಸ್ಥೆ 882.29 ಕೋಟಿ ರೂ. ತೆರಿಗೆ ಪಾವತಿಸಿದೆ. 2019ರ ಆರ್ಥಿಕ ವರ್ಷದಲ್ಲಿ ಮಂಡಳಿಯು 815.08 ಕೋಟಿ ರೂ. ಮೊತ್ತವನ್ನ ತೆರಿಗೆಯಾಗಿ ಸರ್ಕಾರಕ್ಕೆ ಪಾವತಿಸಿದೆ. ಇದು 2017-18ರಲ್ಲಿ ಪಾವತಿಸಿದ 596.63 ಕೋಟಿ ರೂ.ಗಿಂತ ತುಂಬಾ ಹೆಚ್ಚಾಗಿದೆ.
2021-22ನೇ ಹಣಕಾಸು ವರ್ಷದಲ್ಲಿ ಬಿಸಿಸಿಐ 7,606 ಕೋಟಿ ರೂ. ಆದಾಯ ಗಳಿಸಿದ್ದರೆ, ಸಂಸ್ಥೆಯ ವೆಚ್ಚ 3,064 ಕೋಟಿ ರೂ.ಗಳಷ್ಟಿದೆ. ವೆಚ್ಚ 3,064 ಕೋಟಿ ರೂ.ಗಳಷ್ಟಿತ್ತು. 2020-21ರಲ್ಲಿ ಇದೇ ಬಿಸಿಸಿಐ ಆದಾಯ 4,735 ಕೋಟಿ ರೂ. ಮತ್ತು ವೆಚ್ಚ 3,080 ಕೋಟಿ ರೂ. ಆಗಿತ್ತು.
Web Stories