ಕಂಪೆನಿಗಳಲ್ಲಿ ಹೇಗೆ ಸಿಬ್ಬಂದಿಗೆ ಸಂಬಳವನ್ನು ಹೆಚ್ಚಳ ಮಾಡಲಾಗುತ್ತದೋ ಅದೇ ರೀತಿಯಾಗಿ ಸಂಸದರ ವೇತನವೂ ಕೂಡ ಕಾಲ ಕಾಲಕ್ಕೆ ಪರಿಷ್ಕರಣೆ ಆಗುತ್ತದೆ. ರಾಜ್ಯಸಭೆ ಮತ್ತು ಲೋಕಸಭೆ ಸದಸ್ಯರ ಇರುವ ಜಂಟಿ ಸಮಿತಿ ಅಧ್ಯಯನ ನಡೆಸಿ ಸಂಸದರ ಸಂಬಳವನ್ನು ಪರಿಷ್ಕರಿಸುತ್ತದೆ. ಹೀಗಾಗಿ ಇಲ್ಲಿ 2010ರಲ್ಲಿ ವೇತನ ಪರಿಷ್ಕರಣೆಯಂತೆ ಪ್ರಸ್ತುತ ಲೋಕಸಭಾ ಸದಸ್ಯರು ಪಡೆಯುತ್ತಿರುವ ಸಂಬಳ ಮತ್ತು ಭತ್ಯೆಯ ವಿವರಗಳನ್ನು ನೀಡಲಾಗಿದೆ.
ಸಂಬಳ ಮತ್ತು ಭತ್ಯೆ
#ತಿಂಗಳ ಸಂಬಳ: ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಿಗೆ ಪ್ರಸ್ತುತ ಒಂದು ತಿಂಗಳಿಗೆ 50 ಸಾವಿರ ರೂ. ಸಂಬಳ ಸಿಗುತ್ತದೆ. ದಿನ ಭತ್ಯೆ ಯಾಗಿ 2 ಸಾವಿರ ರೂ. ಸಿಕ್ಕಿದರೆ, ಕ್ಷೇತ್ರ ಭತ್ಯೆಯಾಗಿ ತಿಂಗಳಿಗೆ 45 ಸಾವಿರ ರೂ. ಸಿಗುತ್ತದೆ.
Advertisement
#ಕಚೇರಿ ಭತ್ಯೆ: ಪ್ರತಿ ತಿಂಗಳು 45 ಸಾವಿರ ರೂ. ಸಿಗುತ್ತದೆ. ಇದರಲ್ಲಿ 15 ಸಾವಿರ ರೂ. ಸಭೆ, ಪೋಸ್ಟ್ ಖರ್ಚುಗಳನ್ನು ಮಾಡಬಹುದು.
Advertisement
ಪ್ರವಾಸ ಭತ್ಯೆ:
ಕ್ಷೇತ್ರ ಮತ್ತು ಸಂಸತ್ ಕಲಾಪದಲ್ಲಿ ಭಾಗವಹಿಸಲು ಮನೆಯಿಂದ ಪ್ರಯಾಣಿಸಿದರೆ ಅವರಿಗೆ ರೈಲ್ವೇ ಮತ್ತು ವಿಮಾನದಲ್ಲಿ ರಿಯಾಯಿಯಿತಿ ಇದೆ.
Advertisement
#ರೈಲು: ಸಂಸದರಿಗೆ ರೈಲು ಪ್ರಯಾಣಕ್ಕೆ ಉಚಿತ ಪಾಸ್ ನೀಡಲಾಗುತ್ತದೆ. ಈ ಪಾಸನ್ನು ಬೇರೆಯವರಿಗೆ ವರ್ಗಾಯಿಸುವಂತಿಲ್ಲ. ಹವಾನಿಯಂತ್ರಿತ ಬೋಗಿ ಅಥವಾ ಎಕ್ಸ್‍ಕ್ಯುಟಿವ್ ದರ್ಜೆಯಲ್ಲಿ ಉಚಿತವಾಗಿ ಯಾವ ಸಮಯದಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಪ್ರಯಾಣಿಸಬಹುದು. ಸಂಸದರ ಜೊತೆ ಅವರ ಪತಿ/ಪತ್ನಿಯರಿಗೂ ಉಚಿತ ಪ್ರಯಾಣಿಸಲು ಪಾಸ್ ನೀಡಲಾಗುತ್ತದೆ.
Advertisement
#ವಿಮಾನ ಪ್ರಯಾಣ: ಒಂದು ವರ್ಷದಲ್ಲಿ ಗರಿಷ್ಟ 34 ಬಾರಿ ಸಿಂಗಲ್ ಟಿಕೆಟ್ ಮೂಲಕ ವಿಮಾನ ಪ್ರಯಾಣಿಸಬಹುದು. 8 ಬಾರಿ ಪತಿ/ ಪತ್ನಿ ಜೊತೆಯಾಗಿ ಪ್ರಯಾಣ ಬೆಳೆಸಬಹುದು. ಈ ಗರಿಷ್ಟ ಮಿತಿಯನ್ನು ಬಳಸದೇ ಇದ್ದರೆ ಉಳಿಕೆಯಾಗಿರುವ ಪ್ರಯಾಣದ ಟಿಕೆಟ್ ಮುಂದಿನ ವರ್ಷಕ್ಕೆ ವರ್ಗವಾಗುತ್ತದೆ.
#ರಸ್ತೆ: 1 ಕಿ.ಮಿ.ಗೆ 16 ರೂ. ನೀಡಲಾಗುತ್ತದೆ.
ವಸತಿ:
ಹೊಸದಾಗಿ ಆಯ್ಕೆಯಾಗಿರುವ ಸಂಸದ್ ಸದಸ್ಯರಿಗೆ ಆರಂಭದಲ್ಲಿ ತಾತ್ಕಾಲಿಕವಾಗಿ ಉಳಿದುಕೊಳ್ಳಲು ಆಯಾ ರಾಜ್ಯಗಳು ಹೋಟೆಲ್, ಗೆಸ್ಟ್ ಹೌಸ್‍ಗಳನ್ನು ನೀಡಬೇಕಾಗುತ್ತದೆ. ಶಾಶ್ವತವಾಗಿ ನೆಲೆ ಕಲ್ಪಿಸುವವರೆಗೂ ಅವರು ಈ ಜಾಗದಲ್ಲಿ ತಂಗಬಹುದು.
ಅವಧಿ ಪೂರ್ಣ ಆಗುವವರೆಗೂ ಸಂಸತ್ ಸದಸ್ಯರಿಗೆ ಉಚಿತ ಮನೆಯನ್ನು ನೀಡಲಾಗುತ್ತದೆ. ಒಂದು ವೇಳೆ ರಾಜೀನಾಮೆ ನೀಡಿದರೆ ಅಥವಾ ಉಚ್ಚಾಟನೆ ಮಾಡಿದರೆ ಗರಿಷ್ಟ ಒಂದು ತಿಂಗಳವರೆಗೆ ಆ ಮನೆಯಲ್ಲಿ ಉಳಿದುಕೊಳ್ಳಬಹುದು. ಒಂದು ವೇಳೆ ಸಂಸತ್ ಸದಸ್ಯರು ಅಕಾಲಿಕವಾಗಿ ಮೃತಪಟ್ಟರೆ ಅವರ ಕುಟುಂಬ ಸದಸ್ಯರು 6 ತಿಂಗಳ ಕಾಲ ಆ ಮನೆಯಲ್ಲಿ ಉಳಿದುಕೊಳ್ಳಬಹುದು.
ಇತರೆ:ಸೋಫಾ ಕವರ್, ಕರ್ಟನ್ ಗಳನ್ನು ಮೂರು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಿದರೆ ಅದಕ್ಕೆ ತಗಲುವ ವೆಚ್ಚ, ವರ್ಷಕ್ಕೆ 60 ಸಾವಿರ ರೂ. ಮೌಲ್ಯದ ಪೀಠೋಪಕರಣ ಖರೀದಿ ಮಾಡಬಹುದು.
ದೂರವಾಣಿ:
ಮೂರು ದೂರವಾಣಿ ಸಂಖ್ಯೆಗಳನ್ನು ನೀಡಲಾಗುತ್ತದೆ. ಒಂದು ದೂರವಾಣಿ ಸಂಖ್ಯೆ ಸಂಸದರ ನಿವಾಸ ಅಥವಾ ದೆಹಲಿಯಲ್ಲಿರುವ ಕಚೇರಿಯಲ್ಲಿ ಇನ್‍ಸ್ಟಾಲ್ ಮಾಡಬೇಕು. ಎರಡನೇಯದು ತನ್ನ ಕ್ಷೇತ್ರ ಅಥವಾ ರಾಜ್ಯದಲ್ಲಿರುವ ನಿವಾಸದಲ್ಲಿ ಇರಬೇಕು, ಮೂರನೇ ಸಂಖ್ಯೆಯನ್ನು ಎಲ್ಲಿ ಹಾಕಬೇಕು ಎನ್ನುವುದನ್ನು ಸಂಸದರ ವಿವೇಚನೆಗೆ ಬಿಡಲಾಗಿದೆ.
# 50 ಸಾವಿರ ಸ್ಥಳೀಯ ಕರೆಗಳು ವರ್ಷದಲ್ಲಿ ಉಚಿತವಾಗಿ ಸಿಗಲಿದೆ. ಮೂರು ದೂರವಾಣಿಗಳಿಂದ ವರ್ಷಕ್ಕೆ 1.50 ಲಕ್ಷ ಸ್ಥಳೀಯ ಕರೆಗಳು ಮಾಡಬಹುದಾಗಿದೆ.
#ಪ್ರತಿಯೊಬ್ಬ ಸಂಸದನಿಗೆ ಎಂಟಿಎನ್‍ಎಲ್ ಮೊಬೈಲ್ ಸಂಪರ್ಕ ನೀಡಲಾಗುತ್ತದೆ. ಇದರ ಜೊತೆ ಬಿಎಸ್‍ಎನ್‍ಎಲ್ ಅಥವಾ ಖಾಸಗಿ ಟೆಲಿಕಾಂ ಕಂಪೆನಿಗಳ ಮೊಬೈಲ್ ಸಂಪರ್ಕ ಸಿಗುತ್ತದೆ. ಈ ಮೊಬೈಲ್ ಮತ್ತು ಮೂರು ದೂರವಾಣಿಗಳ ಮೂಲಕ ವರ್ಷಕ್ಕೆ 1.50 ಲಕ್ಷ ಕರೆಗಳನ್ನು ಮಾಡಬಹುದು.
ವಿದ್ಯುತ್: 50 ಸಾವಿರ ಯೂನಿಟ್ ವಿದ್ಯುತ್ ವಾರ್ಷಿಕವಾಗಿ ಬಳಸಬಹುದು.
ವೈದ್ಯಕೀಯ: ಪ್ರಸ್ತುತ ನಾಗರಿಕ ಸೇವೆಯಲ್ಲಿರುವ ಕ್ಲಾಸ್ -1 ಅಧಿಕಾರಿಗಳಿಗೆ ಸಿಗುವ ಎಲ್ಲ ವೈದ್ಯಕೀಯ ಭತ್ಯೆಗಳು ಸಂಸದರಿಗೆ ಸಿಗುತ್ತದೆ.
ಆದಾಯ ತೆರಿಗೆ: ಪ್ರಸ್ತುತ ಸರ್ಕಾರ ನೀಡುವ ಸಂಬಳ, ದಿನ ಭತ್ಯೆ, ಕ್ಷೇತ್ರ ಭತ್ಯೆಗಳಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.
ಇತರೆ ಲಾಭ: ಸಂಬಳ ಮತ್ತು ಭತ್ಯೆ ಹೊರತು ಪಡಿಸಿ ಸದಸ್ಯನಿಗೆ ಕಂಪ್ಯೂರ್ ಖರೀದಿಗೆ ಹಣ ಸಿಗುತ್ತದೆ. ಗರಿಷ್ಟ 1.50 ಲಕ್ಷ ರೂ. ಒಳಗಿನ ಡೆಸ್ಕ್ ಟಾಪ್, ಲ್ಯಾಪ್‍ಟಾಪ್, ಪ್ರಿಂಟರ್, ಸ್ಕ್ಯಾನರ್ ಖರೀದಿ ಮಾಡಬಹುದು.
ಯೋಗಿ ಶಿಫಾರಸ್ಸಿನಲ್ಲಿ ಏನಿತ್ತು?
ಪ್ರಸ್ತುತ ಉತ್ತರಪ್ರದೇಶದ ಸಿಎಂ ಆಗಿರುವ, ಬಿಜೆಪಿ ಸಂಸದರಾಗಿದ್ದ ಯೋಗಿ ಆದಿತ್ಯನಾಥ ನೇತೃತ್ವದ ಸಂಸದರ ವೇತನ ಮತ್ತು ಭತ್ಯೆಗಳ ಜಂಟಿ ಸಮಿತಿ ಈಗ ತಿಂಗಳಿಗೆ 50 ಸಾವಿರ ರೂ. ಇರುವ ಮೂಲ ವೇತನವನ್ನು 1 ಲಕ್ಷಕ್ಕೆ ರೂ.ಗಳಿಗೆ ಏರಿಸಬೇಕೆಂದು 2016ರಲ್ಲಿ ಶಿಫಾರಸು ಮಾಡಿತ್ತು.
ಸಂಸದರ ಕ್ಷೇತ್ರ ಭತ್ಯೆಯು 45 ಸಾವಿರ ರೂ.ನಿಂದ 90 ಸಾವಿರ ರೂ.ಗೆ. ಸಹಾಯಕರು ಮತ್ತು ಕಚೇರಿ ಭತ್ಯೆಯು 45 ಸಾವಿರ ರೂ.ನಿಂದ 90 ಸಾವಿರ ರೂ.ಗಳಿಗೆ ಹೆಚ್ಚಳ ಮಾಡುಬೇಕು. ಮಾಜಿ ಸಂಸದರ ಮಾಸಿಕ ಪಿಂಚಣಿ 20 ಸಾವಿರ ರೂ. ನಿಂದ 35 ಸಾವಿರ ರೂ.ಗಳಿಗೆ ಏರಿಸುವಂತೆ ಸಮಿತಿ ಶಿಫಾರಸು ಮಾಡಿತ್ತು.