ತೀವ್ರ ಕುತೂಹಲ ಕೆರಳಿಸಿದ್ದ ಬಿಗ್ ಬಾಸ್ ಸೀಸನ್ 12ಕ್ಕೆ ಕೊನೆಗೂ ತೆರೆ ಬಿದ್ದಿದೆ. ಬಿಗ್ ಬಾಸ್ ಇತಿಹಾಸದಲ್ಲಿ ಫಸ್ಟ್ ಟೈಮ್ ಅತೀ ಹೆಚ್ಚು ಮತಗಳನ್ನ ಪಡೆಯುವ ಮೂಲಕ ಗಿಲ್ಲಿ ನಟ ಬಿಗ್ ಬಾಸ್ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಕೋಟ್ಯಂತರ ಅಭಿಮಾನಿಗಳ ಹಾರೈಕೆಯೂ ನಿಜವಾಗಿದೆ.
ಈ ಹಂತದಲ್ಲಿ ಬಿಗ್ ಬಾಸ್ ವಿನ್ನರಿಗೆ ಏನೇನು ಸಿಗುತ್ತೆ ಎಂಬುದನ್ನ ಕಿಚ್ಚ ಸುದೀಪ್ ಅನೌನ್ಸ್ ಮಾಡಿದ್ದಾರೆ. ಇದನ್ನೂ ಓದಿ: BBK Season 12 Winner | ಬಿಗ್ ಬಾಸ್ ಟ್ರೋಫಿಗೆ ಮುತ್ತಿಟ್ಟ ಗಿಲ್ಲಿ
ಗಿಲ್ಲಿಗೆ ಬಂಪರ್
ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಯಂತೆ ಗೆದ್ದ ಗಿಲ್ಲಿ ನಟನಿಗೆ ಟ್ರೋಫಿ ಜೊತೆಗೆ ವಿಶೇಷ ಲಕ್ಷ ಲಕ್ಷ ರೂಪಾಯಿ ಬಹುಮಾನ ಕೂಡ ಸಿಕ್ಕಿದೆ. ಪ್ರಾಯೋಜಕರಿಂದ 50 ಲಕ್ಷ ರೂ. ನಗದು ಬಹುಮಾನ, ಮಾರುತಿ ಸುಜುಕಿ ಪ್ರಾಯೋಜಕರಿಂದ ಒಂದು ಕಾರು ಸಿಕ್ಕಿದೆ. ಅಷ್ಟೇ ಅಲ್ಲದೇ ವಿಶೇಷವಾಗಿ ನಟ, ನಿರೂಪಕ ಕಿಚ್ಚ ಸುದೀಪ್ ವೈಯಕ್ತಿಕವಾಗಿ 10 ಲಕ್ಷ ಬಹುಮಾನ ಕೂಡ ವೇದಿಕೆಯಲ್ಲೇ ಘೋಷಿಸಿದ್ದಾರೆ.
ರನ್ನರ್ ರಕ್ಷಿತಾಗೆ ಸಿಕ್ಕಿದ್ದೇನು?
ಇನ್ನು 1st ರನ್ನರ್ ಅಪ್ ಆಗಿ ಹೊರಹೊಮ್ಮಿದ ಪಟಾಕಿ ಹುಡುಗಿ ರಕ್ಷಿತಾ ಶೆಟ್ಟಿಗೆ ಇಬ್ಬರು ಪ್ರಾಯೋಜಕರಿಂದ ಕ್ರಮವಾಗಿ 20 ಲಕ್ಷ ಹಾಗೂ 5 ಲಕ್ಷ ರೂ. ನಗದು ಬಹುಮಾನ ಕೊಡಲಾಯಿತು. ಇದನ್ನೂ ಓದಿ: BBK Season 12 | ಬಿಗ್ ಮನೆಯ ಫೈಯರ್ ಬ್ರ್ಯಾಂಡ್ ಅಶ್ವಿನಿ ಗೌಡಗೆ 3ನೇ ಸ್ಥಾನ!
ಅಶ್ವಿನಿಗೌಡಗೆ ಸಿಕ್ಕಿದ್ದೇನು?
ಬಿಗ್ ಬಾಸ್‌ನಲ್ಲಿ 3ನೇ ಸ್ಥಾನ ಪಡೆದ ಅಶ್ವಿನಿ ಗೌಡಗೆ ಮೂವರು ಪ್ರಾಯೋಜಕರಿಂದ 7 ಲಕ್ಷ, 2 ಲಕ್ಷ, 5 ಲಕ್ಷದಂತೆ ಒಟ್ಟು 12 ಲಕ್ಷ ರೂ. ನಗದು ಬಹುಮಾನ ಸಿಕ್ಕಿತು.
ಟ್ರೋಫಿ ವಿಶೇಷತೆ ಏನು?
ಬಿಗ್ ಬಾಸ್ ಟ್ರೋಫಿಯನ್ನ ಬಹಳ ವಿಶಿಷ್ಟವಾಗಿ ಸಿದ್ದ ಮಾಡಲಾಗಿದೆ. ‘ಬಿಗ್ ಬಾಸ್’ ಮನೆಯಲ್ಲಿ ಕನ್ನಡದ ಕಂಪು ಹಾಗೂ ಕರ್ನಾಟಕದ ಶ್ರೀಮಂತ ಇತಿಹಾಸ ಇದೆ. ಸೇಮ್ ಟು ಸೇಮ್ ಅದನ್ನೇ ಟ್ರೋಫಿಯಲ್ಲೂ ಅಳವಡಿಸಲಾಗಿದೆ. ‘ಬಿಗ್ ಬಾಸ್’ ಮನೆಯಲ್ಲಿ ಆನೆ, ದರ್ಪಣ ಸುಂದರಿ, ಅರಮನೆ ಇರುವಂತೆ ಟ್ರೋಫಿಯಲ್ಲೂ ಅವನ್ನ ಕೆತ್ತಲಾಗಿದೆ. ಟಾಪ್‌ನಲ್ಲಿ ಬಿಗ್ ಬಾಸ್‌ನ ಕಣ್ಣು ಇಡಲಾಗಿದೆ. ಆ ಕಣ್ಣಿನ ಒಳಗಡೆ ಕನ್ನಡದ ಸಂಖ್ಯೆಗಳನ್ನ ಕ್ಲಾಕ್ ರೀತಿಯಲ್ಲಿ ಕೂರಿಸಲಾಗಿದೆ. ಇದೇ ಮೊದಲ ಬಾರಿಗೆ ಕನ್ನಡದ ಡಿಂಡಿಮ ಬಿಗ್ ಬಾಸ್ ಟ್ರೋಫಿ ಮೇಲೆ ಮೇಳೈಸಿದೆ.

