– ಬಿಜೆಪಿ ಸಂಸದರಿಗೆ ಕಾರ್ಯಾಗಾರ
– 8 ತಿಂಗಳ ಚಟುಟವಟಿಕೆ ಟ್ರ್ಯಾಕ್ ಮಾಡಿ ಕಳಪೆ ಸಾಧನೆ ಮಾಡಿದವರಿಗೆ ಕ್ಲಾಸ್
ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ (Social Media) ನಿಮ್ಮ ಎಂಗೇಜ್‌ಮೆಂಟ್ ಎಷ್ಟಿದೆ ಎಂದು ಸಂಸದರ ಬಳಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ವರದಿ ಕೇಳಿದ್ದಾರೆ.
ಸಂಸತ್ತಿನ ಗ್ರಂಥಾಲಯ ಕಟ್ಟಡದಲ್ಲಿ ನಡೆದ ಬಿಜೆಪಿ ಸಂಸದರಿಗೆ (BJP MP’s) ಕಾರ್ಯಾಗಾರ ಆಯೋಜನೆಗೊಂಡಿತ್ತು. ಈ ಕಾರ್ಯಾಗಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯವಾಗಿರುವುದು ಹೇಗೆ? ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಲುಪಿಸುವುದು ಹೇಗೆ ಸೇರಿದಂತೆ ಪ್ರಮುಖ ರಾಷ್ಟ್ರೀಯ ವಿಷಯಗಳನ್ನು ಚರ್ಚಿಸಲಾಯಿತು ಎಂದು ವರದಿ ತಿಳಿಸಿವೆ.
ಸಂಸದರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಚುನಾವಣೆಗಳನ್ನು ಗೆಲ್ಲಲು ಅಭಿವೃದ್ಧಿ ಸಾಕಾಗುವುದಿಲ್ಲ. ಮತದಾರರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಅವರೊಂದಿಗೆ ತೊಡಗಿಸಿಕೊಳ್ಳಲು ಇನ್‌ಸ್ಟಾಗ್ರಾಮ್‌ನಂತಹ ವೇದಿಕೆಗಳನ್ನು ಸಕ್ರಿಯವಾಗಿ ಬಳಸುವುದು ಬಹಳ ಮುಖ್ಯ ಎಂದು ಸಲಹೆ ನೀಡಿದರು.
Attended the ‘Sansad Karyashala’ in Delhi. MP colleagues from all over India and other senior leaders exchanged valuable perspectives on diverse issues. pic.twitter.com/f89qA10uYP
— Narendra Modi (@narendramodi) September 7, 2025
ಸಭೆಯಲ್ಲಿದ್ದ ಎಲ್ಲಾ ಸಂಸದರಿಗೆ ಅವರ ಸಾಮಾಜಿಕ ಮಾಧ್ಯಮ ಚಟುವಟಿಕೆಯ ವರದಿಗಳನ್ನು ನೀಡಲಾಯಿತು. ಈ ವೇಳೆ ಸಾಮಾಜಿಕ ಮಾಧ್ಯಮದಲ್ಲಿ ನಿಷ್ಕ್ರಿಯರಾಗಿರುವ ಸಂಸದರಿಗೆ ಕ್ಲಾಸ್ ಮಾಡಲಾಯಿತು. ಇದನ್ನೂ ಓದಿ: ಕೆಂಪು ಸಮುದ್ರದಲ್ಲಿ ಟಾಟಾ ಫೈಬರ್ ಕೇಬಲ್ ತುಂಡು – ಭಾರತ ಸೇರಿ ಹಲವು ದೇಶಗಳಲ್ಲಿ ಇಂಟರ್‌ನೆಟ್ ವ್ಯತ್ಯಯ
ಉದಾಹರಣೆಗೆ, ಒಂದು ತಿಂಗಳಲ್ಲಿ ಫೇಸ್‌ಬುಕ್‌ನಲ್ಲಿ ಯಾವುದೇ ಪೋಸ್ಟ್‌ಗಳನ್ನು ಮಾಡದ ಸಂಸದರನ್ನು ‘ನಿಷ್ಕ್ರಿಯ’ ಮತ್ತು ಕೆಂಪು ಎಂದು ಟ್ಯಾಗ್ ನೀಡಲಾಗಿತ್ತು. ಒಂದು ತಿಂಗಳಲ್ಲಿ 0-60 ಪೋಸ್ಟ್‌ಗಳನ್ನು ಹೊಂದಿರುವವರನ್ನು ‘ಕಡಿಮೆ ಸಕ್ರಿಯ’ ಮತ್ತು ಹಳದಿ ಎಂದು ಟ್ಯಾಗ್ ಮಾಡಲಾಗಿತ್ತು. 60 ಕ್ಕೂ ಹೆಚ್ಚು ಪೋಸ್ಟ್ ಮಾಡಿದವರನ್ನು ‘ಸಕ್ರಿಯ’ ಮತ್ತು ಹಸಿರು ಎಂದು ಟ್ಯಾಗ್ ಮಾಡಲಾಗಿತ್ತು.
ಕಾರ್ಯಾಗಾರದ ಸಮಯದಲ್ಲಿ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕ ಸಂಪರ್ಕಕ್ಕಾಗಿ ಸಾಮಾಜಿಕ ಮಾಧ್ಯಮವನ್ನು ಹೇಗೆ ಬಳಸಬಹುದು ಎಂಬುದರ ಕುರಿತು ಪ್ರಸ್ತುತಿ ನೀಡಿದರು.