ಸಾಮಾನ್ಯರು ಅಸಾಮಾನ್ಯ ಕನಸುಗಳನ್ನು ಕಾಣುವುದು ಸಹಜ. ಆದರೆ, ಸೂಪರ್ ಸ್ಟಾರ್ ನಟರೊಬ್ಬರು ನಾಲ್ಕು ಕನಸುಗಳನ್ನು ಕಂಡು, ಒಂದೇ ಒಂದು ಕನಸನ್ನು ಈಡೇರಿಸಿಕೊಂಡರು ಅನ್ನುವುದು ಅಚ್ಚರಿ. ಈ ವಿಷಯವನ್ನು ಸ್ವತಃ ಸ್ಟಾರ್ ನಟರ ಸಹೋದರರೇ ಹೇಳಿಕೊಂಡಿದ್ದು, ಆ ಕನಸು ಈಡೇರಿದ ಕುರಿತು ಲಕ್ಕಿ ಮ್ಯಾನ್ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡಿದ್ದಾರೆ.
ಅಗಲಿದ ಚೇತನ ಪುನೀತ್ ರಾಜ್ ಕುಮಾರ್ ಅವರು ಏನೆಲ್ಲ ಸಾಧನೆ ಮಾಡಿದ್ದರೂ, ಅವರೂ ನಾಲ್ಕು ಕನಸುಗಳನ್ನು ಕಂಡಿದ್ದರಂತೆ. ಆ ನಾಲ್ಕರಲ್ಲಿ ಒಂದೇ ಒಂದು ಕನಸು ಈಡೇರಿದೆ ಎಂದು ರಾಘವೇಂದ್ರ ರಾಜ್ ಕುಮಾರ್ ಈ ವಿಷಯವನ್ನು ಹಂಚಿಕೊಂಡರು. ನಾಲ್ಕು ಕನಸುಗಳಲ್ಲಿ ಪ್ರಭುದೇವ ಅವರ ಜೊತೆ ಡಾನ್ಸ್ ಮಾಡಬೇಕು ಎನ್ನುವುದು ಅಪ್ಪ ಆಸೆ ಆಗಿತ್ತಂತೆ. ಅದನ್ನು ಲಕ್ಕಿ ಮ್ಯಾನ್ ಸಿನಿಮಾದ ಮೂಲಕ ಅಪ್ಪು ಈಡೇರಿಸಿಕೊಂಡಿದ್ದಾರೆ. ಇದನ್ನೂ ಓದಿ:ಎರಡನೇ ಮದುವೆ ವದಂತಿಯ ಬಗ್ಗೆ ಮೇಘನಾ ರಾಜ್ ಸ್ಪಷ್ಟನೆ
ಹಾಗಾದರೆ, ಅಪ್ಪು ಕಂಡ ಇತರ ಕನಸುಗಳು ಅಂದರೆ, ತಾವು ಸ್ಟಾರ್ ನಟ ಆದ ನಂತರ ತಂದೆಯೊಂದಿಗೆ ನಟಿಸುವ ಆಸೆ ಹೊಂದಿದ್ದರಂತೆ. ಮಣಿರತ್ನಂ ಅವರು ನಿರ್ದೇಶನದಲ್ಲಿ ಕೆಲಸ ಮಾಡಲು ಬಯಸಿದ್ದರಂತೆ ಮತ್ತು ಅಪ್ಪು ಚಿತ್ರಕ್ಕೆ ಎ.ಆರ್.ರೆಹಮಾನ್ ಅವರು ಸಂಗೀತ ನಿರ್ದೇಶನ ಮಾಡಬೇಕು ಎಂದು ಅವರು ಕನಸು ಕಂಡಿದ್ದರು. ಅಲ್ಲದೇ ಪ್ರಭುದೇವ ಅವರ ಜೊತೆ ಡಾನ್ಸ್ ಮಾಡುವಂತಹ ಅವಕಾಶಕ್ಕೆ ಕಾದಿದ್ದರು. ಅದೊಂದು ಇದೀಗ ಈಡೇರಿದೆ.