ಬೆಂಗಳೂರು: ಹುಬ್ಬಳ್ಳಿ-ಧಾರವಾಡ ಕೇಂದ್ರ ಮತಕ್ಷೇತ್ರ ಹೊರತುಪಡೆಸಿ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಆದರೆ, ಈ ಫಲಿತಾಂಶವು ಅತಂತ್ರ ವಾತಾವರಣ ಉಂಟು ಮಾಡಿದೆ. ಈ ಸಂಬಂಧ ಅನೇಕ ಕಾರಣಗಳು ಕೇಳಿಬರುತ್ತಿದ್ದು, ಅದರಲ್ಲಿ ನೋಟಾ ಕೂಡಾ ಒಂದು ಎಂದು ಹೇಳಬಹುದು.
ತಮ್ಮ ಕ್ಷೇತ್ರದಲ್ಲಿ ಸೂಕ್ತ ಅಭ್ಯರ್ಥಿ ಯಾರು ಇಲ್ಲವೆಂದು ಮತದಾರರು ನೋಟಾ ಆಯ್ಕೆ ಮಾಡಿರಬಹುದು. ಇಲ್ಲವೇ, ತಮ್ಮ ಅಭ್ಯರ್ಥಿಗೆ ಟಿಕೇಟ್ ಸಿಗದಿರುವುದಕ್ಕೆ ಅಥವಾ ಅಭ್ಯರ್ಥಿಗಳನ್ನು ಬದಲಾಯಿಸಿದಕ್ಕೆ ಅಭಿಮಾನಿಗಳು ನೋಟಾ ಮೊರೆ ಹೋಗಿದ್ದಾರೆ. ಈ ಬಾರಿ ಒಟ್ಟು 3,08,743 ನೋಟಾ ಮತಗಳು ಚಲಾವಣೆಯಾಗಿದೆ. ಇದರ ಪರಿಣಾಮ ಕೆಲವು ಕ್ಷೇತ್ರಗಳ ಫಲಿತಾಂಶದಲ್ಲಿ ವ್ಯತ್ಯಾಸ ಕಂಡುಬಂದಿದೆ.
ಶೇ 0.9ರಷ್ಟು ಜನರು ನೋಟಾ ಮೊರೆ ಹೋಗಿದ್ದು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಪಕ್ಷೇತರ ಅಭ್ಯರ್ಥಿಗಳ ನಂತರದ ಸ್ಥಾನವನ್ನು ಇದು ತುಂಬುತ್ತದೆ. ವಿಜಯೇಂದ್ರಗೆ ಕೈ ತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿಯಿಂದ ನೋಟಾ ಅಭಿಯಾನ ಆರಂಭವಾಗಿದೆ ಎನ್ನುವ ಮೆಸೇಜ್‍ಗಳು ಹರಿದಾಡಿತ್ತು. ಆದರೆ ಇಲ್ಲಿ ಬಿಜೆಪಿ ಅಭ್ಯರ್ಥಿ 37,819 ಮತಗಳನ್ನು ಪಡೆದರೆ, 1,497 ನೋಟಾ ಮತಗಳು ಬಿದ್ದಿದೆ. ಸಿಎಂ ಪುತ್ರ ಯತೀಂದ್ರ ಅವರು ಇಲ್ಲಿ 96,435 ಮತಗಳನ್ನು ಪಡೆಯುವ ಮೂಲಕ ಜಯಗಳಿಸಿದರು.