– ಹಿಂದೂ, ಮುಸ್ಲಿಂ, ಕ್ರೈಸ್ತರಾಗಲಿ ಎಲ್ಲರಿಗೂ ಕಾನೂನು ಅನ್ವಯ
ರಾಮನಗರ: ಬಿಜೆಪಿಯನ್ನು ಬಿಡಿ, ನಿಮ್ಮ ಮನೆಯಲ್ಲಿ ಎಷ್ಟು ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಸಚಿವ ಅಶ್ವಥ್ ನಾರಾಯಣ್ ಟಾಂಗ್ ಕೊಟ್ಟರು.
ಬಿಜೆಪಿ ಪಕ್ಷದ ಯಾರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ ಎಂದಿದ್ದ ಹೆಚ್‍ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದ ಹಲವು ನಾಯಕರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದಿದ್ದಾರೆ. ಅವರ ಮನೆಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರಾ? ಎಂದು ಪ್ರಶ್ನೆಯನ್ನು ಕೇಳಿದರು. ಇದನ್ನೂ ಓದಿ: ಸಣ್ಣ ಸುಳಿವು ಸಿಗದಂತೆ ಹತ್ಯೆ ಮಾಡಿದ್ದ ಹಂತಕ ಕೊನೆಗೂ ಖಾಕಿ ಬಲೆಗೆ!
Advertisement
Advertisement
ಕಾಲೇಜುಗಳಲ್ಲಿ ಶಾಂತಿ ಕಾಪಾಡಲು ಸ್ಪಷ್ಟ ನಿಲುವು ತೆಗೆದುಕೊಂಡಿದ್ದೇವೆ. 1995ರಲ್ಲಿ ಕಾನೂನು ತಂದಿರುವವರು ಯಾರು? ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿದೆ. ಇಲ್ಲಿ ಏನು ನಿಲುವು ತೆಗೆದುಕೊಂಡಿದ್ದಾರೆ. ಯಾವ ಶಾಲೆಯಾದರೂ ಧಾರ್ಮಿಕ ಸಮವಸ್ತ್ರಕ್ಕೆ ಅವಕಾಶವಿಲ್ಲ. ಸರ್ಕಾರಿ ಆಗಲಿ, ಖಾಸಗಿ ಆಗಲಿ ಅವಕಾಶ ಇಲ್ಲ. ಹಿಂದೂ, ಮುಸ್ಲಿಂ, ಕ್ರೈಸ್ತರಾಗಲಿ ಎಲ್ಲರಿಗೂ ಈ ಕಾನೂನು ಅನ್ವಯವಾಗುತ್ತೆ. ಎಲ್ಲದರಲ್ಲಿಯೂ ರಾಜಕೀಯ ಮಾಡೋದನ್ನ ಬಿಟ್ಟು ಸ್ಪಷ್ಟ ನಿಲುವು ತೆಗೆದುಕೊಳ್ಳಲಿ. ಇವತ್ತು ನ್ಯಾಯಾಲಯ ಸಹ ಸ್ಪಷ್ಟ ನಿಲುವು ಕೊಟ್ಟಿದೆ ಎಂದು ತಿರುಗೇಟು ಕೊಟ್ಟರು.
Advertisement
Advertisement
ಡಿ.ಕೆ.ಶಿವಕುಮಾರ್ ಅವರ ಆರೋಪಕ್ಕೆ ಉತ್ತರಿಸಿದ ಅವರು, ಸುಮ್ಮನ್ನೆ ಗಾಳಿಯಲ್ಲಿ ಗುಂಡು ಎಂಬುದು ಬೇಡ. ರಾಜಕೀಯವಾಗಿ ಮಾತನಾಡೋದು ಬೇಡ. ಸಾಕ್ಷಿ ಇದ್ದರೆ ಅದನ್ನ ಸಾಬೀತು ಮಾಡಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಮರ್ಸಿಡಿಸ್ ಬೆಂಜ್ ಗಿಫ್ಟ್ ಕೊಟ್ಟ ಬಾಸ್ – ಕಾರ್ ನೋಡಿ ಸಿಬ್ಬಂದಿ ಖುಷ್
ಯುವತಿಗೆ ಕೆಲ ಸಂಘಟನೆ 5 ಲಕ್ಷ ರೂ. ಬಹುಮಾನ ಕೊಟ್ಟ ವಿಚಾರವಾಗಿ ಮಾತನಾಡಿದ ಅವರು, ಆ ಸಂದರ್ಭದಲ್ಲಿ ಯುವತಿ ಮಾತನಾಡಿದ್ದಾಳೆ. ಆದರೆ ಅದನ್ನೇ ದೊಡ್ಡ ಸಾಧನೆ ಎಂದು ಬಿಂಬಿಸುವುದು ಬೇಡಿ. ಈ ರೀತಿಯ ವಿಚಾರಕ್ಕೆ ಪ್ರಚೋದನೆ ಬೇಡ ಎಂದು ಮನವಿ ಮಾಡಿದರು.