ಪ್ರಭಾಸ್ ನಟನೆಯ ಕಲ್ಕಿ (Kalki) ಸಿನಿಮಾದಲ್ಲಿ ಕಥಾನಾಯಕನ ಜೊತೆ ರೋಬೊ ರೀತಿಯ ಕಲ್ಕಿ ವಾಹನವಿದೆ. ಇದೊಂದು ರೀತಿಯಲ್ಲಿ ವಿಚಿತ್ರ ವಾಹನ. ಕಾರಿನ ರೀತಿಯಲ್ಲಿ ಅದು ಕಂಡರೆ, ಅದಕ್ಕೆ ಮೂರೇ ಮೂರು ಚಕ್ರ. ಆ ಚಕ್ರ ಕೂಡ ಸಾಮಾನ್ಯವಾಗಿಲ್ಲ. ಒಬ್ಬರೇ ಒಬ್ಬರು ಕುಳಿತುಕೊಳ್ಳಬಹುದಾದ ಬುಜ್ಜಿ ವಾಹನವು ವಿಶೇಷ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಈ ವಾಹನಕ್ಕೆ ಬರೋಬ್ಬರಿ ಏಳು ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.
Advertisement
ಇದೊಂದು ಮ್ಯಾನ್‍್ಮೇಡ್ ವಿಶೇಷ ಕಾರು ಆಗಿದ್ದು, ಮಹೇಂದ್ರ ಕಂಪೆನಿಯು ಈ ವಿಶೇಷ ವಾಹನದ ವಿನ್ಯಾಸ ಮಾಡಲಾಗಿದೆ. ಈ ವಾಹನವನ್ನು ಓಡಿಸೋದು ಅಷ್ಟು ಸುಲಭವಲ್ಲ ಎನ್ನಲಾಗುತ್ತಿದೆ. ಆದರೂ, ಪ್ರಭಾಸ್, ನಾಗಚೈತನ್ಯ ಸೇರಿದಂತೆ ಹಲವು ಕಲಾವಿದರು ಈ ಬುಜ್ಜಿ ಸವಾರಿ ಮಾಡಿದ್ದಾರೆ. ಅಲ್ಲದೇ, ಈ ಕಾರನ್ನು ಸಿನಿಮಾದ ಬಳಕೆಗೂ ತೆಗೆದುಕೊಂಡು ಹೋಗಲಾಗುತ್ತಿದೆ.
Advertisement
Advertisement
ಬುಜ್ಜಿ ಚಿಕ್ಕ ಸ್ವರೂಪದ ಕಾರುಗಳನ್ನು ರೆಡಿ ಮಾಡಿಸಿ, ಕಲಾವಿದರ ಮಕ್ಕಳಿಗೆ ಉಡುಗೊರೆಯಾಗಿ ನೀಡುತ್ತಿದ್ದಾರೆ ಪ್ರಭಾಸ್. ರಾಮ್ ಚರಣ್ ಅವರ ಪುತ್ರಿಗೆ ಚಿಕ್ಕದೊಂದು ಕಾರು ಮತ್ತು ಸಂದೇಶದ ಕಾರ್ಡ್ ನೀಡಿದ್ದಾರೆ. ಈ ವಿವರವನ್ನು ರಾಮ್ ಚರಣ್ ಪತ್ನಿ ಉಪಾಸನಾ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಾಕಿ ಪೋಸ್ಟ್ ಮಾಡಿದ್ದಾರೆ.
Advertisement
‘ಕಲ್ಕಿ’ ಸಿನಿಮಾದಲ್ಲಿ ಬುಜ್ಜಿಗೆ ಸಾಕಷ್ಟು ಮಹತ್ವವನ್ನು ನೀಡಲಾಗಿದೆಯಂತೆ. ಬುಜ್ಜಿಗಾಗಿಯೇ ಸಿನಿಮಾ ತಂಡ ಮೊನ್ನೆಯಷ್ಟೇ ವಿಶೇಷ ಕಾರ್ಯಕ್ರವನ್ನೂ ಆಯೋಜನೆ ಮಾಡಿತ್ತು. ಆ ಬುಜ್ಜಿಗೆ ಧ್ವನಿದಾನ ಮಾಡಿದ್ದಾರಂತೆ ನಟಿ ಕೀರ್ತಿ ಸುರೇಶ್ (Keerthi Suresh). ಬುಜ್ಜಿ ಕೂಡ ಪಾತ್ರದಂತೆ ಚಿತ್ರದುದ್ದಕ್ಕೂ ಇರಲಿದೆಯಂತೆ.