ಆಂಬೊಡೆ ಎಂದರೆ ಎಲ್ಲರಿಗೂ ತುಂಬಾ ಇಷ್ಟ. ಇದನ್ನು ಹೆಚ್ಚು ಹಬ್ಬದ ಸಮಯದಲ್ಲಿ ಮಾಡುತ್ತಾರೆ. ಆದರೆ ಕೆಲವರಿಗೆ ಅಂಬೋಡೆ ಹೇಗೆ ಮಾಡುವುದು ಎಂಬು ತಿಳಿದಿರುವುದಿಲ್ಲ. ಅದಕ್ಕೆ ಇಂದು ನಾವು ಸಿಂಪಲ್ ಆಗಿ ಹೇಗೆ ರುಚಿಕರ ಆಂಬೊಡೆ ಮಾಡಬಹುದು ಎಂದು ಹೇಳಿಕೊಡುತ್ತಿದ್ದೇವೆ.
Advertisement
ಬೇಕಾಗಿರುವ ಪದಾರ್ಥಗಳು:
* ಬೇಳೆ – 1 ಕಪ್
* ಕಟ್ ಮಾಡಿದ ಸಬ್ಬಸಿಗೆ ಸೊಪ್ಪು – 1/2 ಕಪ್
* ಕಟ್ ಮಾಡಿದ ಕೊತ್ತಂಬರಿ ಸೊಪ್ಪು – 1/4 ಕಪ್
* ಕಟ್ ಮಾಡಿದ ಈರುಳ್ಳಿ – 1 ಕಪ್
* ಹಸಿರು ಮೆಣಸಿನಕಾಯಿ – 6 ರಿಂದ 7
* ಅಕ್ಕಿ ಹಿಟ್ಟು – 3 ಟೇಬಲ್ಸ್ಪೂನ್
* ಅಗತ್ಯವಿರುವಷ್ಟು ಉಪ್ಪು
* ಅರಿಶಿನ ಪುಡಿ – 1/2 ಟೀಚಮಚ
* ಇಂಗು – ಸ್ವಲ್ಪ
* ಹುರಿಯಲು ಎಣ್ಣೆ
Advertisement
Advertisement
ಮಾಡುವ ವಿಧಾನ:
* ಆಂಬೊಡೆ ಪಾಕವಿಧಾನವನ್ನು ಪ್ರಾರಂಭಿಸಲು, ಬೇಳೆಯನ್ನು ನೀರಿನಲ್ಲಿ ಸುಮಾರು 4 ಗಂಟೆಗಳ ಕಾಲ ಅಥವಾ ರಾತ್ರಿ ನೆನೆಸಿಡಿ.
* ಬೇಳೆಯನ್ನು ಚೆನ್ನಾಗಿ ತೊಳೆಯಿರಿ, ನೆನೆಸಿದ ಬೇಳೆಯನ್ನು ನೀರಿಲ್ಲದೆ ಪೇಸ್ಟ್ ಆಗಿ ರುಬ್ಬಿಕೊಳ್ಳಿ.
* ಒಂದು ಬಟ್ಟಲಿನಲ್ಲಿ, ರುಬ್ಬಿದ ಬೇಳೆ, ಈರುಳ್ಳಿ, ಹಸಿರು ಮೆಣಸಿನಕಾಯಿ, ಅರಿಶಿನ, ಉಪ್ಪು, ಹಿಂಗು, ಸಬ್ಬಸಿಗೆ ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪುಗಳನ್ನು ಸೇರಿಸಿ. ಅವುಗಳನ್ನು ಒಟ್ಟಿಗೆ ಚೆನ್ನಾಗಿ ಮಿಕ್ಸ್ ಮಾಡಿ.
Advertisement
* ಹಿಟ್ಟಿನ್ನು ವಡೆ ರೀತಿ ಮಾಡಿಕೊಳ್ಳಿ.
* ಬಾಣಲೆಗೆ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಅದಕ್ಕೆ ವಡೆ ರೀತಿ ಇದ್ದ ಮಿಶ್ರಣವನ್ನು ಎಣ್ಣೆಗೆ ಹಾಕಿ ಎರಡೂ ಬದಿಗಳು ಗೋಲ್ಡನ್ ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ. ಅದು ಬೆಂದ ಮೇಲೆ ತೆಗೆಯಿರಿ.
– ಇದನ್ನು ಟೊಮೆಟೊ ಬೆಳ್ಳುಳ್ಳಿ ಚಟ್ನಿ, ಟೊಮೆಟೊ ಚಟ್ನಿ ಅಥವಾ ನಿಮ್ಮ ಇಷ್ಟದ ಯಾವುದೇ ರೀತಿ ಚಟ್ನಿ ಜೊತೆ ಆಂಬೊಡೆ ಬಡಿಸಿಕೊಂಡು ಸವಿಯಿರಿ.