ಮುಂಬೈ: ಮಹಾರಾಷ್ಟ್ರದ ರಾಜಕೀಯ ಸ್ಥಿತಿ ನಾಟಕೀಯವಾಗಿ ತಿರುವು ಮುರುವುಗಳನ್ನು ಪಡೆದುಕೊಳ್ಳುತ್ತಿರುವುದರ ನಡುವೆಯೇ ಶಿವಸೇನೆಯ ನಾಯಕ ಸಂಜಯ್ ರಾವತ್ ಅವರು ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗುವಾಹಟಿಯಲ್ಲಿ ಎಷ್ಟು ದಿನ ಅಡಗಿಕೊಳ್ಳುತ್ತೀರಿ ಎಂದು ಟಾಂಗ್ ನೀಡಿದ್ದಾರೆ.
ಬಂಡಾಯ ಶಾಸಕರ ಕುರಿತು ಟ್ವೀಟ್ ಮಾಡಿರುವ ಸಂಜಯ್ ರಾವತ್, ಎಷ್ಟು ದಿನ ನೀವು ಗುವಾಹಟಿಯಲ್ಲೇ ಅಡಗುತ್ತೀರಿ? ನೀವು ಚೌಪಾಟಿಗೆ ಮರಳಲೇ ಬೇಕು ಎಂದು ಟಾಂಗ್ ನೀಡಿದ್ದಾರೆ.
Advertisement
कब तक छीपोगे गोहातीमे..
आना हि पडेगा.. चौपाटीमे.. pic.twitter.com/tu4HcBySSO
— Sanjay Raut (@rautsanjay61) June 26, 2022
Advertisement
ಏಕನಾಥ್ ಶಿಂಧೆ ಅವರು ಭಾನುವಾರ ಮಧ್ಯಾಹ್ನ ಶಾಸಕರ ಸಭೆ ಕರೆದಿದ್ದಾರೆ. ಅವರ ಮುಂದಿನ ನಡೆಯ ಬಗ್ಗೆ ಚರ್ಚಿಸಲು ಬಿಜೆಪಿ ಆಡಳಿತವಿರುವ ಅಸ್ಸಾಂನ ಗುವಾಹಟಿಗೆ ತೆರಳಿದ್ದಾರೆ ಎಂದು ವರದಿಯಾಗಿದೆ.
Advertisement
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಎದ್ದಿರುವ ಶಿವಸೇನೆಯ 16 ಶಾಸಕರಿಗೆ ವಿಧಾನಸಭಾ ಕಾರ್ಯಲಯ ನೋಟಿಸ್ ನೀಡಿದೆ. ಸೋಮವಾರ ಸಂಜೆ ಒಳಗೆ ಲಿಖಿತ ಪ್ರತಿಕ್ರಿಯೆ ನೀಡಬೇಕು ಎಂದು ನೋಟಿಸ್‌ನಲ್ಲಿ ಹೇಳಲಾಗಿದ್ದು, ಈ ಹಿನ್ನೆಲೆ ಏಕನಾಥ್ ಶಿಂಧೆ ಶಾಸಕರೊಂದಿಗೆ ಚರ್ಚಿಸಲಿದ್ದರೆ. ಇದನ್ನೂ ಓದಿ: ನಿಮಗೆ ತಾಕತ್ ಇದ್ರೆ ಚುನಾವಣೆಗೆ ಬನ್ನಿ: ರೆಬೆಲ್ ಶಾಸಕರಿಗೆ ಸವಾಲೆಸೆದ ಆದಿತ್ಯ ಠಾಕ್ರೆ
Advertisement
ಮಹಾರಾಷ್ಟ್ರದ ಶಾಸಕಾಂಗ ಕಾರ್ಯದರ್ಶಿ ಬಂಡಾಯ ಶಾಸಕರಿಗೆ ಜೂನ್ 27ರ ಸಂಜೆಯ ಒಳಗಾಗಿ ಲಿಖಿತ ಉತ್ತರವನ್ನು ಕೋರಿ ಸಮನ್ಸ್ ಜಾರಿ ಮಾಡಿದೆ. ಮಹಾರಾಷ್ಟ್ರದ ವಿಧಾನ ಭವನದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಭಾಗವತ್ ಸಮನ್ಸ್ ಜಾರಿಗೊಳಿಸಿದ್ದಾರೆ. ಕೆಂದ್ರ ಸರ್ಕಾರ 15 ಬಂಡಾಯ ಶಾಸಕರಿಗೆ ವೈ ಪ್ಲಸ್ ವರ್ಗದ ಶಸ್ತ್ರಾಸ್ತ್ರ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಭದ್ರತೆ ಒದಗಿಸಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ರೆಬೆಲ್ ಶಾಸಕರಿಗೆ ಕೇಂದ್ರದಿಂದ Y+ ಭದ್ರತೆ
ಈ ನಡುವೆ ಶಿವಸೇನಾ ಹೆಸರಿಗಾಗಿ ಮೂಲ ಶಿವಸೇನೆ ನಾಯಕರು ಹಾಗೂ ಬಂಡಾಯ ಶಾಸಕರ ನಡುವೆ ಫೈಟ್ ಜೋರಾಗಿದ್ದು, ಶಿವಸೇನೆ ಮತ್ತು ಬಾಳಾ ಸಾಹೇಬ್ ಠಾಕ್ರೆ ಹೆಸರು ಬಳಕೆ ಮಾಡದಂತೆ ಸಿಎಂ ಉದ್ಧವ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ. ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದ ಶಿವಸೇನೆ ನಾಯಕರು ಬಂಡಾಯ ಶಾಸಕರಿಗೆ ಪಕ್ಷದ ಹೆಸರು ಮತ್ತು ಅದರ ನಾಯಕರ ಹೆಸರು ಬಳಸಿಕೊಳ್ಳುವ ಅವಕಾಶ ಇಲ್ಲ, ಮತ್ತು ಪಕ್ಷದ್ರೋಹ ಮಾಡಿದ ಏಕನಾಥ್ ಶಿಂಧೆ ವಿರುದ್ಧ ಕ್ರಮಕ್ಕೆ ತಿರ್ಮಾನ ಮಾಡಲಾಗಿತ್ತು. ಬಂಡಾಯ ಶಾಸಕರು ಶಿವಸೇನೆ ಬಾಳಾ ಸಾಹೇಬ್ ಠಾಕ್ರೆ ಹೆಸರು ಬಳಕೆ ಮಾಡದಿರಲು ಸೂಚಿಸುವಂತೆ ಮೂಲ ಶಿವಸೇನೆ ನಾಯಕರು ಚುನಾವಣೆ ಆಯೋಗದ ಮೊರೆ ಕೂಡಾ ಹೋಗಿದ್ದಾರೆ.