ಟೆಲಿಕಾಂ ಪೂರೈಕೆದಾರ ಭಾರತಿ ಏರ್‌ಟೆಲ್ (Bharti Airtel) ಇತ್ತೀಚಿಗೆ ಗೂಗಲ್‌ನ (Google) ಮಾತೃಸಂಸ್ಥೆಯೊಂದಿಗೆ ತನ್ನ ಪಾಲುದಾರಿಕೆಯನ್ನು ಹೊಂದಿದ್ದು, ಭಾರತದ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಲೇಸರ್ ಇಂಟರ್ನೆಟ್ (Laser Internet) ಮೂಲಕ ಹೆಚ್ಚಿನ ಇಂಟರ್ನೆಟ್ ಸೇವೆಯನ್ನು ಒದಗಿಸಲು ಪ್ರಯತ್ನಿಸುತ್ತಿದೆ.
ಈ ಕಂಪನಿಗಳು ವೇಗದ ಇಂಟರ್ನೆಟ್ ಸೇವೆಯನ್ನು ತಲುಪಿಸುವ ಸಲುವಾಗಿ ಬೆಳಕಿನ ಕಿರಣಗಳನ್ನು (ಲೇಸರ್) ಬಳಸುವ ಹೊಸ ತಂತ್ರಜ್ಞಾನವನ್ನು ಬಳಸುತ್ತಿದೆ. ಈ ಎರಡು ಕಂಪನಿಗಳು ಈ ಕುರಿತು ಶೋಧನೆಯನ್ನು ಮಾಡಿ ಭಾರತದ ವಿವಿಧೆಡೆ ಇದನ್ನು ಪರೀಕ್ಷಿಸಿದ್ದು, ಪ್ರಾಯೋಗಿಕ ಪರೀಕ್ಷೆಯು ಯಶಸ್ವಿಯಾಗಿವೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮೊಬೈಲ್ ಫೋನ್ ಕಳೆದು ಹೋದ್ರೆ ಇನ್ನು ಚಿಂತಿಸಬೇಕಿಲ್ಲ – ಶೀಘ್ರವೇ ಕೇಂದ್ರ ತರಲಿದೆ ಟ್ರ್ಯಾಕಿಂಗ್ ಸಿಸ್ಟಮ್
ಇತ್ತೀಚಿನ ಲೇಸರ್ ಆಧಾರಿತ ಇಂಟರ್ನೆಟ್ ತಂತ್ರಜ್ಞಾನವನ್ನು ಆಲ್ಫಾಬೆಟ್‌ನ ಕ್ಯಾಲಿಫೋರ್ನಿಯಾ ಇನ್ನೋವೇಶನ್ ಲ್ಯಾಬ್‌ನಲ್ಲಿ ಅಭಿವೃದ್ಧಿಪಡಿಸಿದ್ದು, ಇದನ್ನು ಎಕ್ಸ್ (X) ಎಂದು ಕರೆಯಲಾಗುತ್ತದೆ. ಈ ಯೋಜನೆಯನ್ನು ‘ತಾರಾ’ (Taara) ಎಂದು ಕರೆಯಲಾಗುತ್ತದೆ. ವೇಗದ ಇಂಟರ್ನೆಟ್ ಸೇವೆಯನ್ನು ಒದಗಿಸುವ ಸಲುವಾಗಿ ಈ ತಂತ್ರಜ್ಞಾನವು ಬೆಳಕಿನ ಕಿರಣಗಳನ್ನು ಬಳಸುತ್ತದೆ. ಫೈಬರ್ ರೀತಿಯಲ್ಲಿ ಕೇಬಲ್‌ಗಳಿಲ್ಲದೇ ಪ್ರಾಜೆಕ್ಟ್ ತಾರಾ ಅತ್ಯಂತ ಕಿರಿದಾದ ಮತ್ತು ಅಗೋಚರ ಕಿರಣದ ರೂಪದಲ್ಲಿ ಗಾಳಿಯ ಮೂಲಕ ಅತಿ ಹೆಚ್ಚು ವೇಗದಲ್ಲಿ ಮಾಹಿತಿಯನ್ನು ರವಾನಿಸಲು ಲೇಸರ್ ಅನ್ನು ಬಳಸುತ್ತದೆ ಎಂದು ಆಲ್ಫಾಬೆಟ್‌ನ ವೆಬ್‌ಸೈಟ್ ತಿಳಿಸಿದೆ. ಈ ತಂತ್ರಜ್ಞಾನವು 20 ಜಿಬಿಪಿಎಸ್ (GBPS) ವೇಗದಲ್ಲಿ ಡೇಟಾವನ್ನು ರವಾನಿಸುತ್ತದೆ ಎಂದು ಖಚಿತಪಡಿಸಿದೆ. ಇದನ್ನೂ ಓದಿ: ಕುಳಿತಲ್ಲೇ ನೋಡಿ ನಿಮ್ಮ ನಗರ – ಗೂಗಲ್ ಸ್ಟ್ರೀಟ್ ವ್ಯೂ ಈಗ ಇಡೀ ಭಾರತದಲ್ಲಿ ಲಭ್ಯ
ಏನಿದು ತಾರಾ ಪ್ರಾಜೆಕ್ಟ್?
ತಾರಾ ಎಂಬುದು ಆಲ್ಫಾಬೆಟ್‌ನ ಇನ್ನೋವೇಶನ್ ಲ್ಯಾಬ್‌ನ ಒಂದು ಭಾಗವಾಗಿದೆ. ಇದನ್ನು ‘ಮೂನ್ ಶಾಟ್ ಫ್ಯಾಕ್ಟರಿ’ ಎಂದು ಇನ್ನೊಂದು ಹೆಸರಿನಲ್ಲಿ ಕರೆಯಲಾಗುತ್ತದೆ. ಎಕ್ಸ್ ಎಂಬುದು ಆಲ್ಫಾಬೆಟ್‌ನ ಸಂಶೋಧನಾ ವಿಭಾಗವಾಗಿದೆ. 2011ರಲ್ಲಿ ಆಲ್ಫಾಬೆಟ್ ಅಂಗಸಂಸ್ಥೆ ಗೂಗಲ್ ಎಕ್ಸ್ ಕ್ಯಾಲಿಫೋರ್ನಿಯಾದಲ್ಲಿ ತನ್ನ ಕೆಲಸ ಆರಂಭಿಸಿತು. 2013ರಲ್ಲಿ ಗೂಗಲ್ ಈ ಯೋಜನೆಯನ್ನು ಆರಂಭಿಸಿದ್ದು, ಈ ಪ್ರಾಜೆಕ್ಟ್ ಅನ್ನು ಲೂನ್ ಎಂದು ಕರೆಯಲಾಯಿತು. ಎತ್ತರದ ಬಲೂನ್‌ಗಳಲ್ಲಿ ಲೇಸರ್ ಆಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡು ಕಡಿಮೆ ಮತ್ತು ಪ್ರತ್ಯೇಕವಾದ ಸಮುದಾಯಗಳಿಗೆ 3G ಇಂಟರ್ನೆಟ್ ಸೇವೆಯನ್ನು ಒದಗಿಸುವುದು ಇದರ ಉದ್ಧೇಶವಾಗಿತ್ತು. ಆದರೆ ವೆಚ್ಚ ಹೆಚ್ಚಾಗಿದ್ದರಿಂದ ಮತ್ತು ಸಂಕೀರ್ಣತೆಗಳ ಕಾರಣಗಳಿಂದ ಈ ಯೋಜನೆಯನ್ನು 2021ರಲ್ಲಿ ರದ್ದುಗೊಳಿಸಲಾಯಿತು. ಆದರೆ ಯೋಜನೆಗಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನವು ತಾರಾ ಪ್ರಾಜೆಕ್ಟ್ ಉದಯವಾಗಲು ಕಾರಣವಾಯಿತು. ಇದನ್ನೂ ಓದಿ: ಜೈಲಿನಿಂದ ಬಿಡುಗಡೆಯಾಗಿ ಮತ್ತೆ ಕಳ್ಳತನ ಎಸಗಿದ್ರೂ ಕಳ್ಳರು ಸಿಕ್ಕಿಬಿಳ್ತಾರೆ
ಇದರ ಕೆಲಸ ಹೇಗೆ?
ತಾರಾ ತಂಡವು ಟ್ರಾಫಿಕ್ ಲೈಟ್‌ನಂತಹ ಯಂತ್ರವನ್ನು ರೂಪುಗೊಳಿಸಿದ್ದು, ಡೇಟಾ ಸಾಗಿಸುವ ಲೇಸರ್ ಕಿರಣಗಳನ್ನು ಹೊರಸೂಸುತ್ತದೆ. ಇದು ಕೇಬಲ್‌ಗಳಿಲ್ಲದ ಇಂಟರ್ನೆಟ್ ಫೈಬರ್ ಆಪ್ಟಿಕ್ಸ್ ಆಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಸಂವಹನ ಮೂಲಸೌಕರ್ಯವನ್ನು ನಿರ್ಮಿಸುತ್ತದೆ. ಈ ದೀಪಗಳು ದೂರದ ಸ್ಥಳಗಳಲ್ಲಿ ಅತ್ಯಂತ ವೇಗವಾಗಿ ಡೇಟಾವನ್ನು ಸಾಗಿಸುವ ಲೇಸರ್ ಅನ್ನು ಹೊಂದಿರುತ್ತವೆ. ಇಂಟರ್ನೆಟ್ ಸೌಕರ್ಯಗಳಿಲ್ಲದ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಯನ್ನು ಒದಗಿಸಲು ಮೊಬೈಲ್ ವೈಫೈ ರೂಟರ್‌ಗಳನ್ನು ಸಾಗಿಸಲು ಬಲೂನ್‌ಗಳನ್ನು ಬಳಸಲು ಯೋಜಿಸಿತ್ತು. ಆದರೆ ಈ ಯೋಜನೆ ವಿಫಲವಾಯಿತು. ಬಳಿಕ ತಾರಾ ಯೋಜನೆ ಜಾರಿಗೆ ಬಂದಿದ್ದು, ಇದು ಬಾಹ್ಯಾಕಾಶದಲ್ಲಿ ಮತ್ತು ಭೂಮಿಯ ಮೇಲೆ ಇರಿಸಲಾಗಿರುವ ಲೇಸರ್ ಟರ್ಮಿನಲ್‌ಗಳ ಸಹಾಯದಿಂದ ಕೆಲಸ ನಿರ್ವಹಿಸುತ್ತದೆ. ಇದನ್ನೂ ಓದಿ: Twitter ನಲ್ಲಿ ಪೋಸ್ಟ್ ಓದುವ ಮಿತಿ ಹೆಚ್ಚಳ – ಮಹತ್ವದ ಬದಲಾವಣೆ ಘೋಷಿಸಿದ ಮಸ್ಕ್
ಲೇಸರ್ ಟರ್ಮಿನಲ್‌ಗಳು ಆಪ್ಟಿಕಲ್‌ಗಳು ಟ್ರಾನ್ಸ್‌ಮೀಟರ್‌ಗಳು ಮತ್ತು ರಿಸೀವರ್‌ಗಳಾಗಿ ಕೆಲಸ ನಿರ್ವಹಿಸುತ್ತವೆ. ಅಲ್ಲದೇ ಇದು ಪರಸ್ಪರ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುತ್ತವೆ. ಇದರ ಒಂದು ತುದಿಯಲ್ಲಿ ಟರ್ಮಿನಲ್ ಇದ್ದು, ದೂರದ ನೆಟ್‌ವರ್ಕ್‌ಗೆ ಸಂಪರ್ಕವನ್ನು ಹೊಂದುತ್ತದೆ. ಇನ್ನೊಂದು ತುದಿಯಲ್ಲಿ ಆಪರೇಟರ್‌ನ ನೆಟ್‌ವರ್ಕ್ ಮೂಲಸೌಕರ್ಯಕ್ಕೆ ಅಪ್‌ಲಿಂಕ್ ಆಗಿ ಕಾರ್ಯನಿರ್ವಹಿಸುತ್ತದೆ. ಸೆಲ್ಯುಲಾರ್ ಕವರೇಜ್ ಇಲ್ಲದ ಅಥವಾ ತುಂಬಾ ದುರ್ಬಲ ನೆಟ್‌ವರ್ಕ್ ಹೊಂದಿರುವ ಪ್ರದೇಶಗಳಲ್ಲಿ ಇಂಟರ್ನೆಟ್ ಪ್ರವೇಶವನ್ನು ಒದಗಿಸಲು ಈ ತಂತ್ರಜ್ಞಾನವು ಸಹಕಾರಿಯಾಗಿದೆ. ಇಂಟರ್ನೆಟ್ ವೇಗವನ್ನು ಹೆಚ್ಚಿಸಲು ಈ ಲೇಸರ್ ಟರ್ಮಿನಲ್‌ಗಳು ಸಹಾಯ ಮಾಡುತ್ತವೆ. ಇದನ್ನೂ ಓದಿ: ಟ್ವಿಟ್ಟರ್‌ಗೆ ಸೆಡ್ಡು ಹೊಡೆಯಲು Meta ಮಾಸ್ಟರ್ ಪ್ಲ್ಯಾನ್
ಪ್ರತಿಯೊಂದು ತಾರಾ ಟರ್ಮಿನಲ್‌ಗಳು 20 GBವರೆಗಿನ ಬ್ಯಾಂಡ್‌ವಿಡ್ತ್‌ನೊಂದಿಗೆ ಡೇಟಾವನ್ನು ರವಾನಿಸಲು ಮತ್ತು ಸ್ವೀಕರಿಸಲು ಸಮರ್ಥವಾಗಿದೆ. ಇದರ ಜೊತೆಗೆ ಈ ತಂತ್ರಜ್ಞಾನವು ರೇಡಿಯೋ ತರಂಗಗಳನ್ನು ಬಳಸುವಾಗ ಹೆಚ್ಚು ಸ್ಥಿರ ಮತ್ತು ವೇಗದ ಸಂಪರ್ಕವನ್ನು ಒದಗಿಸುತ್ತದೆ. ಇದರಲ್ಲಿರುವ ಸಮಸ್ಯೆಯೇನೆಂದರೆ ಲೇಸರ್ ಸಿಗ್ನಲ್ ಹವಾಮಾನ ಪರಿಸ್ಥಿತಿಗಳಿಗೆ ಬಹಳ ಸೂಕ್ಷ್ಮವಾಗಿರುತ್ತವೆ. ಮೋಡ, ಮಂಜು ಮತ್ತು ಹೊಗೆಯಂತಹ ಅಡೆತಡೆಗಳು ಉಂಟಾದರೆ ಇದು ದುರ್ಬಲಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ವರದಿಗಳು ಹೇಳಿವೆ. ಇದನ್ನೂ ಓದಿ: ಜಸ್ಟ್ 999 ರೂ.ಗೆ ಜಿಯೋ ಭಾರತ್ 4ಜಿ ಫೋನ್ ಬಿಡುಗಡೆ – ಗುಣ ವೈಶಿಷ್ಟ್ಯಗಳೇನು?
Web Stories