ರಾಮನಗರ: ಕಣ್ಣೀರು ಹಾಕಿ ಮತ ತೆಗೆದುಕೊಳ್ಳುವುದು ನನ್ನ ಜಾಯಮಾನ ಅಲ್ಲ. ಚನ್ನ ಪಟ್ಟಣದಲ್ಲಿ ಇಡೀ ಒಕ್ಕಲಿಗರನ್ನು ನನ್ನ ವಿರುದ್ಧ ಎತ್ತಿ ಕಟ್ಟಲಾಗಿತ್ತು. ಅದಕ್ಕೆ ನಮ್ಮವರೆಲ್ಲಾ ಕುಮಾರಸ್ವಾಮಿ ಸಿಎಂ ಆಗಲಿ ಅಂತಾ ಜೆಡಿಎಸ್‍ಗೆ ವೋಟ್ ಹಾಕಿದ್ರು. ಇತ್ತ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಪೂಜೆ ಪುನಸ್ಕಾರ ಮಾಡಿದ್ರು. ಈಗ ಎಲ್ಲವೂ ಸೇರಿ ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ ಎಂದು ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ್ ಖರ್ಗೆ, ಪರಮೇಶ್ವರ್, ಸಿದ್ದರಾಮಯ್ಯ ಗೆ ಸಮ್ಮಿಶ್ರ ಸರ್ಕಾರ ಮಾಡಲು ಸಹಮತವಿರಲಿಲ್ಲ. ಕುಮಾರಸ್ವಾಮಿ ಡಿಕೆ ಶಿವಕುಮಾರ್ ಒಟ್ಟಿಗೆ ಸೇರಿಕೊಂಡು ಸರ್ಕಾರ ರಚನೆ ಮಾಡಿದ್ದಾರೆ. ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ಇವಾಗ ಒಟ್ಟಿಗೆ ಸೇರಿಲ್ಲ, ಮುಂಚೆಯಿಂದಲೂ ಒಟ್ಟಾಗಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಡಿಕೆ ಶಿವಕುಮಾರ್ ಹೂಂಕರಿಸುತ್ತಿದ್ದರು. ಆದ್ರೆ ಈಗ ಅವರ ಪರಿಸ್ಥಿತಿ ಹೇಗಿದೆ ನೋಡಿ ಎಂದು ಹೇಳಿದ್ರು.
Advertisement
ಇಂದು ಜೆಡಿಎಸ್ ಮತ್ತು ಕಾಂಗ್ರೆಸ್ ಅಣ್ಣತಮ್ಮಂದಿರು ಒಂದಾದ್ರು, ಆದ್ರೆ ಕಾರ್ಯಕರ್ತರು ಒಂದಾಗಬೇಕಲ್ಲ. ಸಿಎಂ ಹೇಳಿದ ಪ್ರಕಾರ ಈ ಸರ್ಕಾರ ಸಾಂದರ್ಭಿಕ ಶಿಶು ಅಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿ ಮಾಡಲು ದೇವೆಗೌಡರ ದಂಡದಿಂದ ಹುಟ್ಟುಹಾಕಿದ ಪ್ರಣಾಳ ಶಿಶು. ಇದು ಜೆಡಿಎಸ್ ಅವರ ತಾತ್ಕಾಲಿಕ ಗೆಲುವು ಅಷ್ಟೇ. ಕಾಂಗ್ರೆಸ್ ನವರು ಮನೆ ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. 120 ಸೀಟ್ ಗೆದ್ದರೆ ಅಧಿಕಾರ ಮಾಡುವುದು ಕಷ್ಟ. ಇನ್ನೂ ಈ ಸರ್ಕಾರ ಬಹಳ ದಿನ ಉಳಿಯಲ್ಲ. ರಾಮನಗರದಿಂದ ಸ್ಪರ್ಧೆ ಮಾಡುವುದಿಲ್ಲ. ಚನ್ನಪಟ್ಟಣ ಬಿಟ್ಟು ಹೋಗಲ್ಲ ಎಂದು ಸ್ಪಷ್ಟಪಡಿಸಿದರು.