ಶ್ರೀನಗರ: ಜಮ್ಮು ಕಾಶ್ಮೀರ ಪೊಲೀಸ್ ಹಾಗೂ ಸಿಆರ್‌ಪಿಎಫ್ ಯೋಧರ ಮೇಲೆ ಕಲ್ಲು ತೂರಾಟ ನಡೆಸಿದ್ದವರನ್ನು ಬಂಧಿಸಲು ಪೊಲೀಸರು ರೂಪಿಸಿದ ಪ್ಲಾನ್ ಯಶಸ್ವಿಯಾಗಿದ್ದು, ಶ್ರೀನಗರದಲ್ಲಿ ನಾಲ್ವರನ್ನು ಬಂಧಿಸಲಾಗಿದೆ.
ಸಿಆರ್‌ಪಿಎಫ್ ಯೋಧರ ಪಡೆ ಮೇಲೆ ಶುಕ್ರವಾರ 100 ಮಂದಿಯ ಗುಂಪು ಕಲ್ಲು ಏಕಾಏಕಿ ಕಲ್ಲು ತೂರಾಟ ನಡೆಸಿದೆ. ಈ ವೇಳೆ ಕಲ್ಲು ತೂರಾಟಗಾರರನ್ನು ಬಂಧಿಸಲು ವಿಶೇಷ ಪ್ಲಾನ್ ರೂಪಿಸಿದ ಯೋಧರು ಅವರಂತೆ ವೇಷಧರಿಸಿ ಗುಂಪಿನಲ್ಲಿ ಸೇರಿದ್ದಾರೆ. ಬಳಿಕ ಪೊಲೀಸರೊಂದಿಗೆ ಯೋಧರ ಪಡೆ ದಾಳಿ ನಡೆಸಿದ್ದು, ಈ ವೇಳೆ ಕಲ್ಲು ತೂರಾಟ ನಡೆಸುತ್ತಿದ್ದ ನಾಲ್ವರು ಯುವಕರನ್ನು ಬಂಧಿಸಿದ್ದಾರೆ.
Advertisement
https://twitter.com/MajorPoonia/status/1038322568594423809
Advertisement
ಯೋಧರ ಪ್ಲಾನ್ ಅರಿಯಲು ವಿಫಲವಾದ ಕಲ್ಲು ತೂರಾಟಗಾರರು ಯುವಕರನ್ನು ವಶಕ್ಕೆ ಪಡೆಯುತ್ತಿದಂತೆ ಕಕ್ಕಾಬಿಕ್ಕಿಯಾಗಿದ್ದಾರೆ. ಅಲ್ಲದೇ ಸ್ಥಳದಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯದೆ ಸ್ಥಳದಿಂದ ಮಂದಿ ಓಟಕಿತ್ತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
Advertisement
ಸದ್ಯ ಬಂಧಿಸಿಲಾಗಿರುವ ಆರೋಪಿಗಳಿಂದ ಆಟಿಕೆ ಬಂದೂಕು ವಶಕ್ಕೆ ಪಡೆಯಲಾಗಿದೆ. ಈ ಹಿಂದೆ 2010ರಲ್ಲೇ ಪೊಲೀಸರು ಈ ಮಾದರಿಯ ಪ್ಲಾನ್ ಬಳಸಿ ಅಳವಡಿಸಿಕೊಂಡಿದ್ದರು. ಆದರೆ ಕಳೆದ 2 ವರ್ಷಗಳ ಹಿಂದೆ ಇಂತಹ ಅಪಾಯಕಾರಿ ತಂತ್ರವನ್ನು ಕೈಬಿಡಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
Advertisement
https://twitter.com/ippatel/status/1038132069233123328