ಉಡುಪಿ: ರಾಜ್ಯ ಸರ್ಕಾರ ಈ ಪ್ರಕರಣವನ್ನು ಪ್ರ‍್ಯಾಂಕ್ ಎನ್ನುತ್ತಿದೆ. ಹುಡುಗಿಯರ ವಾಶ್‌ರೂಮ್‌ನಲ್ಲಿ ವೀಡಿಯೋ ಚಿತ್ರೀಕರಣ ಮಾಡಿರುವುದು ಯಾವ ರೀತಿಯ ಪ್ರ್ಯಾಂಕ್? ಇದೊಂದು ಗಂಭೀರವಾದ ವಿಚಾರ ಎಂದು ಸಾಮಾಜಿಕ ಕಾರ್ಯಕರ್ತೆ ರಶ್ಮಿ ಸಾಮಂತ್ (Rashmi Samant) ಹೇಳಿದ್ದಾರೆ.
ಜಿಲ್ಲೆಯ (Udupi) ಖಾಸಗಿ ಕಾಲೇಜೊಂದರಲ್ಲಿ (College) ಮಹಿಳಾ ಶೌಚಾಲಯದಲ್ಲಿ (Toilet) ವೀಡಿಯೋ (Video) ಚಿತ್ರೀಕರಣ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಯರ ಪರವಾಗಿ ನಿಂತಿರುವ ರಶ್ಮಿ ಸಾಮಂತ್ ಪಬ್ಲಿಕ್ ಟಿವಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ.
Advertisement
ಈಗ ಈ ಸುದ್ದಿ ಎಲ್ಲರಿಗೂ ತಲುಪಿದೆ. ಪತ್ರಿಕೆ, ಟಿವಿ ಚ್ಯಾನಲ್ ಎಲ್ಲದರಲ್ಲೂ ಈಗಾಗಲೇ ಸುದ್ದಿಯನ್ನು ರಿಲೀಸ್ ಮಾಡಿದ್ದಾರೆ. ಆದರೂ ಇದರ ಬಗ್ಗೆ ಯಾರೂ ಮಾತನಾಡುತ್ತಿರಲಿಲ್ಲ. ಇದೊಂದು ಗಂಭಿರವಾದ ಪ್ರಕರಣ. ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳ ಶೌಚಾಲಯದಲ್ಲಿ ಇಂತಹ ಕೃತ್ಯ ಮಾಡಿದ್ದಾರೆ ಎಂಬುದು ಗಂಭೀರ ವಿಚಾರ. ಇದರ ಬಗ್ಗೆ ಮಾತನಾಡಬೇಕು ಹಾಗೂ ಜನರಿಗೆ ಅರಿವು ನೀಡಬೇಕು ಎಂದು ಹೇಳಿದರು.
Advertisement
Advertisement
ಈ ರೀತಿ ಯಾವುದೂ ಆಗುತ್ತಿರಲಿಲ್ಲ. ಜನರಿಗೆ ಅರಿವಾಗಲಿ ಎಂಬ ಕಾರಣಕ್ಕೆ ಒಂದು ಟ್ವೀಟ್ ಮಾಡಿದ್ದೇನೆ. ಯಾರು ಕೂಡಾ ಇದರ ಬಗ್ಗೆ ಮಾತನಾಡುತ್ತಿಲ್ಲ ಎಂದು ಬರೆದಿದ್ದೇನೆ. ನಾನು ಟ್ವೀಟ್ ಮಾಡಿದ್ದು ಇದೊಂದೇ ಉದ್ದೇಶದಿಂದ. ಆದರೆ ಇದಾದ ಕೂಡಲೇ ಪೊಲೀಸರು ಬಂದರು. ಇದರ ಹಿಂದೆ ಯಾರು ಇದ್ದಾರೆ ಎಂಬ ತನಿಖೆ ಮಾಡುವ ಬದಲು ನನ್ನ ಹಿಂದೆ ಬಿದ್ದರು ಎಂದು ತಿಳಿಸಿದರು.
Advertisement
ರಾಜ್ಯ ಪೊಲೀಸರು ಏನು ಮಾಡುತ್ತಿದ್ದಾರೆ? ಅವರ ಉದ್ದೇಶ ಏನು? ಹೆಣ್ಣು ಮಕ್ಕಳಿಗೆ ಒಂದು ನ್ಯಾಯ ಆಗಲೇ ಬೇಕು. ನಾನು ಕೂಡಾ ಒಂದು ಹೆಣ್ಣು. ನಾನು ಕೂಡಾ ಕಾಲೇಜಿನಲ್ಲಿ ಕಲಿತವಳು. ನಾನು ಕೂಡಾ ಆ ಹೆಣ್ಣುಮಕ್ಕಳ ವಯಸ್ಸಿನವಳು. ನಾನು ಸ್ಟೂಡೆಂಟ್ ಯೂನಿಯನ್‌ನ ಲೀಡರ್ ಕೂಡಾ ಆಗಿದ್ದೆ. ನನಗೂ ಗೊತ್ತಿದೆ ಈ ತರ ಕಾಲೇಜು ಕ್ಯಾಂಪಸ್ ಅಲ್ಲಿ ಆದರೆ ಏನೆಲ್ಲಾ ಆಗುತ್ತೆ ಎಂದು ಸಿಡಿದರು.
ನನಗೂ ಗೊತ್ತಿದೆ ಹೆಣ್ಣು ಮಕ್ಕಳಿಗೆ ಎಷ್ಟು ಕಷ್ಟ ಇರುತ್ತದೆ ಎಂದು. ಮಹಿಳೆಯರು ಮುಂದೆ ಬಂದು ಹೇಳಿಕೆ ನೀಡುವುದಿಲ್ಲ. ಅವರ ಮದುವೆಗೆ, ಅವರ ಜೀವನಕ್ಕೆ ಎಷ್ಟು ಕಷ್ಟ ಆಗುತ್ತದೆ ಎಂಬ ಭಯ ಅವರಿಗೆ ಇರುತ್ತದೆ. ಮನೆಯವರು ಹೇಳುತ್ತಾರೆ, ಸಮಾಜದಲ್ಲಿ ಒಂದು ತರ ಮಾತನಾಡುತ್ತಾರೆ, ಕೆಲಸ ಸಿಗುವುದಿಲ್ಲ, ಹುಡುಗಿಯ ಲೈಫ್ ಹಾಳಾಗುತ್ತದೆ. ಇಂತಹ ಸೂಕ್ಷ್ಮ ವಿಚಾರಗಳು ಇದ್ದಾಗ ಅದನ್ನು ಅಷ್ಟೇ ಸೂಕ್ಷ್ಮವಾಗಿ ಡೀಲ್ ಮಾಡಬೇಕು ಎಂದರು. ಇದನ್ನೂ ಓದಿ: ವಿಡಿಯೋ ಚಿತ್ರೀಕರಣ ಏಳೆಂಟು ತಿಂಗಳಿಂದ ನಡೆಯುತ್ತಿದೆ, ಯುವಕರು ಭಾಗಿ: ಸುರೇಶ್ ನಾಯಕ್
ರಾಜ್ಯ ಸರ್ಕಾರ ಇದೊಂದು ಪ್ರ್ಯಾಂಕ್ ಎಂದು ಹೇಳುತ್ತಿದೆ. ಏನ್ರೀ ಪ್ರ್ಯಾಂಕ್ ಇದು? ವಾಶ್‌ರೂಮ್‌ನಲ್ಲಿ ಹುಡುಗಿಯರ ಶೂಟಿಂಗ್ ಮಾಡೋದು ಪ್ರ್ಯಾಂಕಾ? ಇದರನ್ನು ಗಂಭೀರವಾಗಿ ಪರಿಗಣಿಸಬೇಕು. ಇದೊಂದು ಗಂಭೀರ ವಿಚಾರ. ಸಮಾಜದಲ್ಲಿ ಹೀಗಾದಾಗ ನಾವು ಕಾಳಜಿ ತೆಗೆದುಕೊಳ್ಳಬೇಕು ಎಂದರು.
ಯಶ್ ಪಾಲ್ ಸುವರ್ಣ ಅವರು ನಮ್ಮ ಎಂಎಲ್‌ಎ. ಅದರ ಹಿಂದೆ ಕೂಡ ಒಂದು ಶಕ್ತಿ ಇರಬಹುದು. ಶಾಸಕರಿಗೆ ಒಂದು ನೆಟ್‌ವರ್ಕ್ ಇದೆ. ಹಲವಾರು ಮಾಹಿತಿ ಬರುತ್ತದೆ. ಅವರು ಜವಾಬ್ದಾರಿಯುತವಾಗಿ ಹೇಳಿಕೆ ಕೊಟ್ಟಿದ್ದಾರೆ. ಪ್ರಕರಣವನ್ನು ಬಹಳ ಜಾಗರೂಕವಾಗಿ ತನಿಖೆ ಮಾಡಬೇಕು. ನಮ್ಮ ಎಂಎಲ್‌ಎ ಕೂಡ ಹೀಗೆ ಹೇಳುತ್ತಿದ್ದಾರೆ ಎಂದರೆ ಸೂಕ್ಷ್ಮ ತನಿಖೆ ಮಾಡಬೇಕು. ಇಂತಹ ಷಡ್ಯಂತ್ರ ಇರುವ ಸಾಧ್ಯತೆ ಇದೆ. ಎಂಎಲ್‌ಎ ಅವರು ಹೀಗೆ ಸುಮ್ಮನೆ ಸುಮ್ಮನೆ ಏನೇನೋ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಪೊಲೀಸರು ನನ್ನ ಪೋಷಕರನ್ನು ವಿಚಾರಣೆ ಮಾಡಿದಾಗ ಅವರು ಭಯಪಟ್ಟಿಲ್ಲ. ಏಕೆಂದರೆ ನಾನು ಇಂತಹ ಹಲವಾರು ಪರಿಸ್ಥಿತಿಗಳನ್ನು ಎದುರಿಸಿದ್ದೇನೆ. ಇದೆಲ್ಲಾ ನನ್ನ ಮನೆಯವರಿಗೂ ತಿಳಿದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ನಾನು ಇಂತಹ ವಿಚಾರಗಳ ಬಗ್ಗೆ ಧ್ವನಿ ಎತ್ತಿದ್ದೇನೆ. ಆ ಸಂದರ್ಭದಲ್ಲೂ ಇದೇ ರೀತಿ ಆಗಿದೆ. ನನ್ನದು ವಿದ್ಯಾವಂತ ಕುಟುಂಬ. ಹೀಗಾಗಿ ನಾವು ಭಯಪಟ್ಟಿಲ್ಲ. ಅದೇ ಒಂದು ಪಾಪದ ಕುಟುಂಬವಾಗಿದ್ದರೆ ಅವರು ಏನೆಲ್ಲಾ ಮಾಡಬಹುದಾಗಿತ್ತು? ನಮ್ಮ ಜೊತೆ ಈ ರೀತಿಯೆಲ್ಲಾ ಮಾಡಿದ್ದಾರೆ, ಇನ್ನು ಬೇರೆಯವರೊಂದಿಗೆ ಏನು ಮಾಡಬಹುದು? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಉಡುಪಿ ವಿಡಿಯೋ ಚಿತ್ರೀಕರಣ ಕೇಸ್ – ವಿದ್ಯಾರ್ಥಿನಿಯರು, ಕಾಲೇಜ್ ವಿರುದ್ಧ ಎಫ್‌ಐಆರ್ ದಾಖಲು
ರಾಜ್ಯ ಸರ್ಕಾರ, ಪೊಲೀಸರು ಈ ಸಮಸ್ಯೆ ಬಗ್ಗೆ ಮಾತನಾಡುವವರ ಹಿಂದೆ ಹೋಗಬಾರದು. ಸಮಸ್ಯೆ ಆಗಿರುವುದನ್ನು ತನಿಖೆ ಮಾಡಬೇಕು. ಮಾತನಾಡುವವರ ಹಿಂದೆ ಹೋಗುವುದು ಸರಿ ಅಲ್ಲ. ಪ್ರಕರಣದ ಹಿಂದೆ ಇರುವ ಕಾಣದ ಕೈಗಳನ್ನು ಬಂಧಿಸಬೇಕು ಎಂದು ಮನವಿ ಮಾಡಿದರು.
ಸಂತ್ರಸ್ತ ವಿದ್ಯಾರ್ಥಿಗಳು ಮುಂದೆ ಬಂದು ದೂರು ಕೊಡಬೇಕು ಎನ್ನುವುದು ಸರಿಯಲ್ಲ. ಅವರೊಂದಿಗೆ ಎಷ್ಟು ದೊಡ್ಡ ಅನ್ಯಾಯ ಆಗಿದೆ. ಸರ್ಕಾರ ತನ್ನ ಜವಾಬ್ದಾರಿಯನ್ನು ನಿರ್ವಹಣೆ ಮಾಡಬೇಕು. ಅವರು ಮುಂದೆ ಬರಬೇಕು, ಅವರು ಮುಂದೆ ಬಂದು ದೂರು ಕೊಡಬೇಕು ಯಾಕೆ? ಅವರು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಕು ಯಾಕೆ? ಸಂತ್ರಸ್ತೆಯರು ದೂರು ಕೊಡಬೇಕು ಎಂಬುದು ಸರಿಯಲ್ಲ. ವಿಚಾರ ತಿಳಿದು ತನಿಖೆ ಮಾಡಬೇಕು. ಈಗಾಗಲೇ ದೌರ್ಜನ್ಯ ಅನುಭವಿಸಿದವರನ್ನು ಕರೆದು ಅವರಿಗೆ ಮಾನಸಿಕ ಒತ್ತಡ ಹಾಕಬಾರದು ಎಂದು ರಶ್ಮಿ ಮನವಿ ಮಾಡಿದರು.
Web Stories