ಅಮೆರಿಕದಲ್ಲಿ (America) ಕ್ಯಾನ್ಸರ್ (Cancer) ಚಿಕಿತ್ಸೆಗೆ ಬಳಕೆಯಾಗುವ ಔಷಧಗಳ ಕೊರತೆ ಉಂಟಾಗಿದೆ. ಭಾರತದಿಂದ (India) ಅಮೆರಿಕಕ್ಕೆ ಸರಬರಾಜಾಗುತ್ತಿದ್ದ ಕೀಮೋಥೆರಪಿ ಔಷಧಿಗಳ ಗುಣಮಟ್ಟದ ಬಗ್ಗೆ ಅಲ್ಲಿನ ಔಷಧ ಹಾಗೂ ಆಹಾರ ನಿಗಮ ಕಳವಳ ವ್ಯಕ್ತಪಡಿಸಿದ ಬೆನ್ನಲ್ಲೇ ಸರಬರಾಜನ್ನು ನಿಲ್ಲಿಸಿದ್ದರೆ ಔಷಧ ಕೊರತೆಗೆ ಪ್ರಮುಖ ಕಾರಣ.
ಅಮೆರಿಕಕ್ಕೆ ಗುಜರಾತ್‌ನ ಅಹಮದಾಬಾದ್‌ನ ಇಂಟಾಸ್ ಫಾರ್ಮಾಸ್ಯುಟಿಕಲ್ಸ್ ಒಡೆತನದ ಘಟಕದಿಂದ 50% ಔಷಧಗಳನ್ನು ಸರಬರಾಜು ಮಾಡಲಾಗುತ್ತಿತ್ತು. ಈ ಘಟಕವನ್ನು ಅಮೆರಿಕದ ಔಷಧ ಹಾಗೂ ಆಹಾರ ನಿಗಮ 2020ರ ನವೆಂಬರ್ ನಲ್ಲಿ ತಪಾಸಣೆ ನಡೆಸಿ ಗುಣಮಟ್ಟ ಹಾಗೂ ಸುರಕ್ಷತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಇದಾದ ಬಳಿಕ ಔಷಧ ಉತ್ಪಾದನೆಯನ್ನು ನಿಲ್ಲಿಸಲಾಗಿತ್ತು. ಇದನ್ನೂ ಓದಿ: ಭೂಮಿ ನಿರ್ನಾಮ ಹಂತ ತಲುಪಿದ್ರೆ ಮುಂದೇನು?
Advertisement
ಇದು ಅಮೆರಿಕದಲ್ಲಿ ಹಂತ ಹಂತವಾಗಿ ಔಷಧಗಳ ಕೊರತೆ ಹಾಗೂ ಅವುಗಳ ಬೆಲೆ ಏರಿಕೆಗೆ ಕಾರಣವಾಯಿತು. ಈಗ 14 ಕ್ಯಾನ್ಸರ್ ಔಷಧಿಗಳ ಕೊರತೆಯಿದೆ. ಪ್ರಮುಖವಾಗಿ ಬಳಸಲಾಗುವ ಕೀಮೋಥೆರಪಿ ಔಷಧಿಯ ಕೊರತೆ ಹೆಚ್ಚಾಗಿದೆ. ಇದು ರೋಗಿಗಳಿಗೆ ಮಾರಕವಾಗಿ ಪರಿಣಮಿಸಲಿದೆ ಎಂದು ಸಂಸ್ಥೆಯೊಂದರ ಸಮೀಕ್ಷಾ ವರದಿ ಸಹ ಎಚ್ಚರಿಸಿದೆ.
Advertisement
Advertisement
ಮುಂದುವರೆದ ರಾಷ್ಟ್ರ ಎನಿಸಿಕೊಂಡಿರುವ ಅಮೆರಿಕ ಈ ಕೊರತೆಯನ್ನು ಸರಿದೂಗಿಸಲು ಪರದಾಡುತ್ತಿದೆ. ಇದರ ನಡುವೆ ಆರೋಗ್ಯ ತಜ್ಞರ ಎಚ್ಚರಿಕೆ ಮೇರೆಗೆ ಬೇರೆ ದೇಶಗಳಿಂದ ಔಷಧಿಗಳನ್ನು ಆಮದು ಮಾಡಿಕೊಳ್ಳಲು ಮುಂದಾಗಿದೆ. ಈಗಾಗಲೇ ಚೀನಾದ ಕಂಪನಿಯೊಂದಕ್ಕೆ ಎಫ್‌ಡಿಎ ಅನುಮತಿ ನೀಡಿದ್ದು ಸಿಪ್ಲಾಟಿನ್ ಔಷಧದ ಆಮದಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
Advertisement
ಈ ರೀತಿಯ ಔಷಧಗಳ ಕೊರತೆ ಅಮೆರಿಕದ ಔಷಧಿಗಳ ಉತ್ಪಾದನೆ ಮತ್ತು ಪೂರೈಕೆ ಸರಪಳಿ ನಿರ್ವಹಣೆಯಲ್ಲಿನ ನ್ಯೂನ್ಯತೆಯನ್ನು ತೋರಿಸುತ್ತದೆ. ಅಲ್ಲದೇ ಕಾರ್ಖಾನೆಗಳ ಉತ್ಪಾದನೆಯನ್ನು ನವೀಕರಿಸಲು ಕಂಪನಿಗಳಿಗೆ ಪ್ರೋತ್ಸಾಹದ ಕೊರತೆ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಅಮೆರಿಕದಲ್ಲಿ ಪ್ರಸ್ತುತ 19 ಲಕ್ಷ ಜನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. 2022 ರಲ್ಲಿ 609,360 ಜನ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ. ಈಗ ಔಷಧದ ಕೊರತೆಯಿಂದ ಕ್ಯಾನ್ಸರ್‌ನಿಂದ ಸಾವಿಗೀಡಾಗುವವರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಕೂಡ ಇದೆ.
ಭಾರತ ಕೈಗೊಂಡ ಕ್ರಮಗಳೇನು?
ಇಂಟಾಸ್‌ನಲ್ಲಿ ಅಮೆರಿಕ ಔಷಧಿ ಹಾಗೂ ಆಹಾರ ಸಮಿತಿ ತಪಾಸಣೆ ನಡೆಸಿದ ನಂತರ ಹೆಚ್ಚಿನ ಭಾರತೀಯ ಔಷಧಿ ಕಂಪನಿಗಳನ್ನು ಭಾರತದ ಔಷಧ ನಿಯಂತ್ರಣ ಇಲಾಖೆ ಪರಿಶೀಲಿಸಿದೆ. ಅಲ್ಲದೇ ಕೆಮ್ಮಿನ ಸಿರಪ್‌ನಿಂದಾಗಿ 66 ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ ಗ್ಯಾಂಬಿಯಾ ಘಟನೆಯ ನಂತರ ಭಾರತದಲ್ಲಿನ ಇತರ ಔಷಧೀಯ ಕಂಪನಿಗಳು ಮತ್ತು ಉತ್ಪಾದನಾ ಸೌಲಭ್ಯಗಳು ಜಾಗತಿಕ ಪರಿಶೀಲನೆ ಅಡಿಯಲ್ಲಿವೆ. ಗ್ಯಾಂಬಿಯಾ ಘಟನೆಯ ಬಗ್ಗೆ ವಿಶ್ವ ಸಂಸ್ಥೆ ಕೂಡ ಕಳವಳ ವ್ಯಕ್ತಪಡಿಸಿತ್ತು.
ಬಳಿಕ ಇರಾಕ್‌ನಲ್ಲಿ ಮಾರಾಟವಾಗಿರುವ ಭಾರತದಲ್ಲಿ ತಯಾರಿಸಲಾದ ಕಾಮನ್ ಕೋಲ್ಡ್ ಕೆಮ್ಮಿನ ಸಿರಪ್‌ನಲ್ಲಿ ವಿಷಕಾರಿ ಅಂಶ ಪತ್ತೆಯಾಗಿತ್ತು. ಇದು ಬಳಕೆಗೆ ಯೋಗ್ಯವಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಕೆ ನೀಡಿತ್ತು. ಇದರಿಂದ ಭಾರತದ ಔಷಧ ನಿಯಂತ್ರಣ ಇಲಾಖೆ ನಕಲಿ ಔಷಧಗಳನ್ನು ತಯಾರಿಸುತ್ತಿದ್ದ 18 ಫಾರ್ಮಾ ಕಂಪನಿಗಳ ಪರವಾನಗಿಯನ್ನು ರದ್ದುಗೊಳಿಸಿತ್ತು. ಇದನ್ನೂ ಓದಿ: ಗಗನಯಾತ್ರಿಗಳ ಆರೋಗ್ಯದ ಮೇಲೆ ಬಾಹ್ಯಾಕಾಶ ಪ್ರಯಾಣದ ಪರಿಣಾಮಗಳೇನು? – ಪರಿಹಾರವೇನು?
Web Stories