ಇಂದು ಅಗಲಿರುವ ಹಿರಿಯ ನಟ ರಾಜೇಶ್ ಅವರ ನಿಜವಾದ ಹೆಸರು ಮುನಿ ಚೌಡಪ್ಪ. ಅವರನ್ನು ವಿದ್ಯಾಸಾಗರ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತಿತ್ತು. ಇವರ ನಟನೆಯ ಮೊದಲ ಸಿನಿಮಾದ ಟೈಟಲ್ ಕಾರ್ಡ್ ನಲ್ಲೂ ವಿದ್ಯಾಸಾಗರ್ ಎಂದೇ ಇದೆ. ಈ ಸಿನಿಮಾದ ನಂತರ ಅವರ ಹೆಸರು ರಾಜೇಶ್ ಅಂತಾಯಿತು. ಹೀಗೆ ಹೆಸರು ಬದಲಾಯಿಸಿದವರು ಕನ್ನಡದ ಖ್ಯಾತ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ. ಇದನ್ನೂ ಓದಿ : ರಾಜೇಶ್ ಅವರ ಕೊನೆಯ ಸಿನಿಮಾದ ಎಕ್ಸ್‌ಕ್ಲೂಸಿವ್ ಫೋಟೋಸ್, ಮಾಹಿತಿ
ರಾಜೇಶ್ ಅವರು ಸಿನಿಮಾ ರಂಗಕ್ಕೆ ಬಂದಿದ್ದು ಆಕಸ್ಮಿಕ ಏನೂ ಅಲ್ಲ. ವಿದ್ಯಾಸಾಗರ್ ಹೆಸರಿನಲ್ಲಿ ಆಗಲೇ ಅವರು ರಂಗಭೂಮಿಯಲ್ಲಿ ಪ್ರಸಿದ್ಧಿ ಪಡೆದಿದ್ದರು. ಈ ಜನಪ್ರಿಯತೆಯೇ ಅವರನ್ನು ಸಿನಿಮಾ ರಂಗಕ್ಕೆ ಕರೆದು ತಂದಿತ್ತು. 1964ರಲ್ಲಿ ತೆರೆಕಂಡ ವೀರ ಸಂಕಲ್ಪ ಇವರ ಮೊದಲ ಸಿನಿಮಾ. ಅಂದಿನ ಪ್ರಸಿದ್ಧ ನಿರ್ದೇಶಕರಾದ ಹುಣಸೂರು ಕೃಷ್ಣಮೂರ್ತಿಯವರು ವಿದ್ಯಾಸಾಗರ್ ಎಂಬ ಹೆಸರಿದ್ದ ರಾಜೇಶ್ ಅವರನ್ನು ‘ವೀರ ಸಂಕಲ್ಪ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು. ಇದನ್ನೂ ಓದಿ : ರವೀಂದ್ರ ಕಲಾಕ್ಷೇತ್ರದಲ್ಲಿ ನಟ ರಾಜೇಶ್ ಅಂತಿಮ ದರ್ಶನಕ್ಕೆ ವ್ಯವಸ್ಥೆ
Advertisement
ರಾಜೇಶ್ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟ ಸಿನಿಮಾ ಸಿ.ವಿ.ಶಿವಶಂಕರ್ ನಿರ್ದೇಶಿಸಿದ ‘ನಮ್ಮ ಊರು’ ಚಿತ್ರ. ಈ ಚಿತ್ರದಿಂದ ಅವರ ವೃತ್ತಿ ಬದುಕಿಗೆ ಮತ್ತೊಂದು ತಿರುವು ಸಿಕ್ಕಿದೆ. ಅಲ್ಲಿಂದ ಅವರು ಈವರೆಗೂ ನಮ್ಮ ಊರು , ಗಂಗೆ ಗೌರಿ , ಸತೀ ಸುಕನ್ಯ , ಬೆಳುವಲದ ಮಡಿಲಲ್ಲಿ , ಕಪ್ಪು ಬಿಳುಪು , ಬೃಂದಾವನ , ಬೋರೆ ಗೌಡ ಬೆಂಗಳೂರಿಗೆ ಬಂದ , ಮರೆಯದ ದೀಪಾವಳ , ಪ್ರತಿಧ್ವನಿ , ಕಾವೇರಿ , ದೇವರ ಗುಡಿ , ಬದುಕು ಬಂಗಾರವಾಯ್ತು , ಸೊಸೆ ತಂದ ಸೌಭಾಗ್ಯ ಸೇರಿದಂತೆ 175ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕರಾಗಿ, ಪೋಷಕ ಪಾತ್ರಧಾರಿಯಾಗಿ ಬಣ್ಣ ಹಚ್ಚಿದ್ದಾರೆ.