ಹಿಂದೂ ಧರ್ಮ ಹಾಗೂ ಭಾರತದಲ್ಲಿ ಯಾವುದೇ ಆಚರಣೆಯಾಗಲಿ ಒಂದಲ್ಲ ಒಂದು ರೀತಿಯಲ್ಲಿ ಮಹಾಭಾರತ ಹಾಗೂ ರಾಮಾಯಣಕ್ಕೆ (Ramayana) ಸಂಬಂಧ ಹೊಂದಿರುತ್ತವೆ. ಅದೇ ರೀತಿ ನವರಾತ್ರಿ ಹಾಗೂ ವಿಜಯದಶಮಿ (Vijayadashami) ಸಹ ರಾಮಾಯಣದ ನಂಟನ್ನು ಹೊಂದಿದೆ.
ಅಶ್ವಯುಜ ಶುಕ್ಲಪಾಡ್ಯದಂದು ಆರಂಭಗೊಂಡು ನವರಾತ್ರಿ ಹಬ್ಬದ ಒಂಭತ್ತು ದಿನಗಳು ಕಳೆದ ನಂತರ ಬರುವ ಹತ್ತನೇ ದಿನವೇ ‘ದಶಮಿ’. ಇದನ್ನೇ ವಿಜಯ ದಶಮಿ ಎಂದು ಕರೆಯುತ್ತಾರೆ. ಈ ದಿನ ಸಂತೋಷದ ಸಾಂಸ್ಕೃತಿಕ, ಧಾರ್ಮಿಕ, ವೈಭವದ ಮೆರವಣಿಗೆ ದೇಶದೆಲ್ಲೆಡೆ ನಡೆಯುತ್ತದೆ.
Advertisement
ವಿಜಯದಶಮಿಯ ಹಿನ್ನೆಲೆ ಏನು?
ಎಮ್ಮೆ ರೂಪದ ಮಹಿಷಾಸುರ ದೀರ್ಘ ತಪಸ್ಸು ಮಾಡಿ, ಯಾವುದೇ ಮನುಷ್ಯನಿಂದ, ದೇವರಿಂದ ಅಥವಾ ವಿಶಿಷ್ಟ ಶಕ್ತಿಯಿಂದ ತನ್ನನ್ನು ಸಂಹರಿಸಲು ಸಾಧ್ಯವಾಗಬಾರದು ಎಂದು ಬ್ರಹ್ಮನಿಂದ ವರವನ್ನು ಪಡೆದಿದ್ದನು. ವರ ಸಿಕ್ಕಿದ ಕೂಡಲೇ ಅಹಂಕಾರದಿಂದ ಜನರಿಗೆ ಮತ್ತು ದೇವತೆಗಳಿಗೆ ತೊಂದರೆ ಕೊಡಲು ಆರಂಭಿಸಿದ. ಈತನ ಉಪಟಳವನ್ನು ತಾಳಲಾರದೇ ದೇವತೆಗಳು ಆದಿಶಕ್ತಿಯನ್ನು ಪೂಜಿಸಿ ಮಹಿಷನನ್ನು ವದಿಸುವಂತೆ ಬೇಡಿಕೊಳ್ಳುತ್ತಾರೆ. ಪ್ರಾರ್ಥನೆ ಕೇಳಿದ ದೇವಿ ದುರ್ಗೆಯಾಗಿ ಸಿಂಹವಾಹಿನಿಯಾಗಿ, ಹತ್ತು ಕೈಗಳಲ್ಲಿ ಹತ್ತು ಬಗೆಯ ಆಯುಧಗಳನ್ನು ಹಿಡಿದು ಧರೆಗಿಳಿದಳು. ರಾಕ್ಷಸನಾದ ಮಹಿಷಾಸುರನನ್ನು ದಶಮಿಯ ದಿನ ಸಂಹಾರ ಮಾಡಿದಳು. ಅಂದಿನಿಂದ ದಶಮಿಯಂದು ಮಹಿಷಾಸುರನ್ನು ಕೊಂದು ವಿಜಯ ಸಿಕ್ಕಿದ್ದಕ್ಕೆ `ವಿಜಯದಶಮಿ’ ಹಬ್ಬವನ್ನು ಎಲ್ಲೆಡೆ ಆಚರಿಸಲಾಗುತ್ತಿದೆ.
Advertisement
Advertisement
ರಾಮಾಯಣಕ್ಕೆ ಏನು ಸಂಬಂಧ?
ರಾವಣನನ್ನು ಸಂಹಾರ ಮಾಡುವ ಮೊದಲು ನಾರದರು ರಾಮನಿಗೆ ಶರನ್ನವರಾತ್ರಿ ವ್ರತವನ್ನು ಮಾಡಲು ಹೇಳಿದ್ದರು. ಈ ವ್ರತವನ್ನು ಪೂರ್ಣಗೊಳಿಸಿದ ನಂತರ ರಾಮನು ಲಂಕೆಯ ಮೇಲೆ ಆಕ್ರಮಣ ಮಾಡಿ ಯುದ್ಧದಲ್ಲಿ ರಾವಣನನ್ನು ವಧಿಸಿದನು.
Advertisement
‘ದಶಹರ’ದಂದು ದಶಕಂಠನಾಗಿದ್ದ ರಾವಣನನ್ನು ಶ್ರೀರಾಮನು ಸಂಹರಿಸಿದ ಬಳಿಕ ವಿಜಯೋತ್ಸವ ನಡೆಯಿತು ಎನ್ನುವ ಪ್ರತೀತಿ ಇದೆ. ಹೀಗಾಗಿ ಉತ್ತರಭಾರತ ಕಡೆ ದಸರಾ ಸಮಯದಲ್ಲಿ 10 ದಿನಗಳ ಕಾಲ ರಾಮಾಯಣದ ವಿವಿಧ ಘಟನೆಗಳನ್ನು ವಿವರಿಸುವ ರಾಮಲೀಲಾ ಕಥನ ನಡೆಯುತ್ತದೆ. ದಶಮಿಯಂದು ರಾವಣನ ಆಕೃತಿಯನ್ನು ಸುಡಲಾಗುತ್ತದೆ. ದೆಹಲಿಯಲ್ಲಿ ರಾಷ್ಟ್ರೀಯ ಮಹತ್ವ ಇರುವ ಹಬ್ಬ ಎಂಬಂತೆ ಆಚರಿಸಲಾಗುತ್ತದೆ. ರಾಮಲೀಲಾ ಮೈದಾನದಲ್ಲಿ ಈ ಹಬ್ಬ ವಿಜೃಂಭಣೆಯಿಂದ ನಡೆಯುತ್ತದೆ.