ಗಾಂಧಿನಗರ: ಗುಜರಾತ್ (Gujrat) ವಿಧಾನಸಭೆ ಚುನಾವಣೆಗೆ (Assembly Elections) ದಿನಾಂಕ ಘೋಷಣೆಯಾಗಿದೆ. ಅಭ್ಯರ್ಥಿಗಳ ಪಟ್ಟಿಯೂ ಪ್ರಕಟಗೊಂಡಿದ್ದು, ನಾಮಪತ್ರ ಸಲ್ಲಿಕೆ ಕಾರ್ಯ ಆರಂಭಗೊಂಡಿದೆ. ಈ ಬೆನ್ನೆಲೆ ಪ್ರಚಾರ ಕಾರ್ಯಕ್ಕೆ ಇಳಿದಿರುವ ರಾಜ್ಯ ಬಿಜೆಪಿ (BJP) ವಿನೂತನ ಪ್ರಚಾರ ಮಾರ್ಗ ಬಳಸಲು ಆರಂಭಿಸಿದೆ.
ಇತ್ತೀಚಿನ ಚುನಾವಣೆಗಳಲ್ಲಿ ಸೋಶಿಯಲ್ ಮೀಡಿಯಾಗಳನ್ನು ಬಳಸಿಕೊಳ್ಳುವುದು ಸಹಜ, ಆದರೆ ಇದರಲ್ಲಿ ಮತ್ತೊಂದು ಹಂತ ಮುಂದೆ ಹೋಗಿರುವ ಬಿಜೆಪಿ ನಾಯಕರು ವಾಟ್ಸಾಪ್ (Whats App) ಉಸ್ತುವಾರಿಗಳ ನೇಮಕ ಮಾಡುವ ಮೂಲಕ ತಮ್ಮ ಮತದಾರರ ಮೇಲೆ ನಿಗಾ ವಹಿಸಲು ಮುಂದಾಗಿದೆ. ಇದನ್ನೂ ಓದಿ: ಗುಜರಾತ್ ವಿಧಾನಸಭೆ ಚುನಾವಣೆ – 15 ದಿನಗಳಲ್ಲಿ 40 ರ‍್ಯಾಲಿ ನಡೆಸಲಿದ್ದಾರೆ ಮೋದಿ
Advertisement
Advertisement
ಬಿಜೆಪಿಯು ಪ್ರತಿ ಬೂತ್ ಮಟ್ಟದಲ್ಲಿ ಮತದಾರರನ್ನು ನಿಭಾಯಿಸಲು ವಾಟ್ಸಾಪ್ ಗ್ರೂಪ್‍ಗಳನ್ನು ರಚಿಸಿದೆ, ಪ್ರತಿ ಗ್ರೂಪ್‍ಗೆ ಇಬ್ಬರು ಉಸ್ತುವಾರಿಗಳನ್ನು ನೇಮಿಸಿದೆ. ಈ ಉಸ್ತುವಾರಿಗಳು ಬೂತ್‍ನಲ್ಲಿನ ಮತದಾರರನ್ನು ಗ್ರೂಪ್‍ನಲ್ಲಿ ಸೇರಿಸಿ ಪಕ್ಷದ ಪರವಾದ ಮಾಹಿತಿಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಬರೀ ವಾಟ್ಸಾಪ್ ಮಾತ್ರವಲ್ಲದೇ ಫೇಸ್‍ಬುಕ್ (Facebood), ಇನ್‍ಸ್ಟಾಗ್ರಾಮ್(Instagram), ಟ್ವಿಟರ್‌ಳನ್ನು (Twitter) ಬಳಸಿಕೊಂಡು ನಿರ್ದಿಷ್ಟ ವರ್ಗಗಳನ್ನು ತಲುಪುವ ಗುರಿ ಹೊಂದಲಾಗಿದೆ. ಇದಕ್ಕಾಗಿ ವಿಶೇಷ ತಂಡವನ್ನೇ ಸ್ಥಾಪಿಸಿದ್ದು ರಾಜ್ಯಾದ್ಯಂತ 30,000 ಮಂದಿ ಸಕ್ರಿಯವಾಗಿ ಬಿಜೆಪಿ ಪರ ಕಾರ್ಯನಿರ್ವಹಿಸುತ್ತಿದ್ದಾರೆ. ಈ 30,000 ಜನರು ಬಿಜೆಪಿಯ ಐಟಿ ಸೆಲ್ ನೊಂದಿಗೆ ನೇರ ಸಂಪರ್ಕ ಹೊಂದಿರಲಿದ್ದು, ಅಲ್ಲಿಂದ ಬರುವ ಕಂಟೆಂಟ್‍ಗಳನ್ನು ಬೂತ್ ಮಟ್ಟದ ಜನರವರೆಗೂ ತಲುಪಿಸುವ ಕಾರ್ಯ ನಡೆಸುತ್ತಿದ್ದಾರೆ.
Advertisement
Advertisement
‘ಡಬಲ್ ಎಂಜಿನ್ ಸರ್ಕಾರ್,’ ‘ಭರೋಸಾ ನಿ ಬಿಜೆಪಿ ಸರ್ಕಾರ್’, ‘ಅಮೇ ಬನವ್ಯು ಗುಜರಾತ್’ ಹೆಸರಿನಲ್ಲಿ ಗುಂಪುಗಳನ್ನು ರಚಿಸಲಾಗುತ್ತಿದೆ. ಬಿಜೆಪಿ ಐಟಿ ಸೇಲ್ ನೀಡುವ ಕಟೆಂಟ್ ನೊಂದಿಗೆ ಸ್ಥಳೀಯ ಕ್ಷೇತ್ರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಇಲ್ಲಿ ಪೋಸ್ಟ್ ಮಾಡುತ್ತಿದ್ದು, ಇದು ಪ್ರತಿಸ್ಪರ್ಧಿಯ ವಿರುದ್ಧ ಋಣಾತ್ಮಕ ಅಂಶಗಳನ್ನು ಮತದಾರರಿಗೆ ತಲುಪಸಲಾಗುತ್ತಿದೆ. ಇದನ್ನೂ ಓದಿ: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ – ಗೆಲುವು ಯಾರಿಗೆ?
ವಾಟ್ಸಾಪ್ ಸ್ಟೇಟಸ್ ಮತ್ತು ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಮ್ ರೀಲ್‍ಗಳಗಳನ್ನು ಸಿದ್ದಪಡಿಸಿದ ಗ್ರೂಪ್‍ನಲ್ಲಿ ಶೇರ್ ಮಾಡುತ್ತಿದ್ದು, ಇವುಗಳನ್ನು ಬಳಸಲು ಪ್ರೇರೆಪಿಸಲಾಗುತ್ತಿದೆ. ಈ ಮೂಲಕ ತಳ ಹಂತದವರೆಗೂ ಮತದಾರರನ್ನು ತಲುಪಲು ಪ್ರಯತ್ನಿಸಲಾಗುತ್ತಿದೆ. ಸೋಶಿಯಲ್ ಮೀಡಿಯಾಗಳನ್ನು ಬಳಸುತ್ತಿದ್ದು ಬೃಹತ್ ಚುನಾವಣಾ ರ್‍ಯಾಲಿಗಳ ಜೊತೆಗೆ ಪ್ರತಿಯೊಬ್ಬ ವ್ಯಕ್ತಿಯನ್ನು ತಲುಪುವ ಕಾರ್ಯದಲ್ಲಿ ಬಿಜೆಪಿ ಇದೆ.
ಚುನಾವಣೆಯಲ್ಲಿ ತನ್ನ ಧ್ವನಿಯನ್ನು ಕಂಡುಕೊಳ್ಳಲು ಬಿಜೆಪಿ ಬಾಡಿಗೆ ಪ್ರಚಾರದ ಮೊರೆ ಹೋಗಿದೆ. ಸೋಶಿಯಲ್ ಮೀಡಿಯಾದಲ್ಲಿ ಬಿಜೆಪಿ ಪರ ಪೋಸ್ಟ್‌ಗಳನ್ನು ಹಾಕಲು ಮತ್ತು ಪ್ರತಿಸ್ಪರ್ಧಿ ಪಕ್ಷಗಳನ್ನು ನಿಯಂತ್ರಿಸಲು ಜನರನ್ನು ನೇಮಕ ಮಾಡಿಕೊಂಡಿದೆ. ಮುಖ್ಯ ವಾಹಿನಿಯಲ್ಲಿ ಪಕ್ಷಕ್ಕೂ ಮತ್ತು ಈ ವ್ಯಕ್ತಿಗಳಿಗೂ ಯಾವುದೇ ಸಂಬಂಧ ಇರುವುದಿಲ್ಲ. ಆದರೂ ಇವರು ಬಿಜೆಪಿ ಪರ ಕೆಲಸ ಮಾಡಲಿದ್ದು, ಅದಕ್ಕಾಗಿ ಅವರು ಹಣ ಪಡೆಯಲಿದ್ದಾರೆ.