ಡೊಮಿನಿಕಾ: 2023-25ನೇ ಸಾಲಿನ 3ನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಟೂರ್ನಿಯ ಆರಂಭದಲ್ಲೇ ಭಾರತ ಶುಭಾರಂಭ ಕಂಡಿದೆ. ವೆಸ್ಟ್ ಇಂಡೀಸ್ (West Indies) ವಿರುದ್ಧ ನಡೆಯುತ್ತಿರುವ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪದ್ಯದಲ್ಲೇ 141 ರನ್‌ಗಳ ಭರ್ಜರಿ ಜಯ ಸಾಧಿಸಿದೆ. 2ನೇ ಪಂದ್ಯದಲ್ಲೂ ಅದ್ಭುತ ಜಯದೊಂದಿಗೆ ತವರಿನಲ್ಲೇ ವೆಸ್ಟ್ ಇಂಡೀಸ್ ತಂಡವನ್ನ ವೈಟ್‌ವಾಶ್ ಮಾಡುವ ಉತ್ಸಾಹದಲ್ಲಿದೆ.
Advertisement
ಗೆಲುವಿನ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಭಾರತಕ್ಕೆ (Team India) ಈಗ ಟೆಸ್ಟ್ ಕ್ರಿಕೆಟ್‌ನಲ್ಲಿ ನಂ.1 ಸ್ಥಾನ ಕಳೆದುಕೊಳ್ಳುವ ಭೀತಿ ಎದುರಾಗಿದ್ದು, ಹಾಲಿ ಟೆಸ್ಟ್ ಚಾಂಪಿಯನ್ಸ್ ಆಸ್ಟ್ರೇಲಿಯಾ ನಂ.1 ಸ್ಥಾನಕ್ಕೇರುವ ಸಾಧ್ಯತೆಗಳಿವೆ. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಆಶಸ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ (Australia) 3 ಪಂದ್ಯಗಳ ಅಂತ್ಯಕ್ಕೆ 2-1 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇನ್ನುಳಿದ 2 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಜಯ ಸಾಧಿಸಿದರೆ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್‌ನಲ್ಲಿ ನಂ.1 ಸ್ಥಾನ ಕಳೆದುಕೊಳ್ಳಲಿದೆ. ಇದನ್ನೂ ಓದಿ: IND vs WI: ಅಪ್ಪ, ಮಗನನ್ನು ಔಟ್ ಮಾಡಿ ದಾಖಲೆ ಬರೆದ ಅಶ್ವಿನ್
Advertisement
Advertisement
ಒಂದು ವೇಳೆ ವಿಂಡೀಸ್ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಭಾರತ ಸೋತರೆ ಅಥವಾ ಮಳೆಯಿಂದ ಪಂದ್ಯ ರದ್ದಾದರೆ, ಭಾರತ 1-0 ಅಂತರದಲ್ಲಿ ಸರಣಿ ಗೆದ್ದುಕೊಳ್ಳಲಿದೆ. ಆಗ ಆಸ್ಟ್ರೇಲಿಯಾ ಆಶಸ್‌ನಲ್ಲಿ 3-1 ಅಂತರದಲ್ಲಿ ಗೆಲುವು ದಾಖಲಿಸಬೇಕಾಗುತ್ತದೆ. ಸರಣಿಯ ಅಂತಿಮ ಎರಡೂ ಪಂದ್ಯಗಳು ಡ್ರಾ ಆದರೂ ಆಸ್ಟ್ರೇಲಿಯಾ 2-1 ಅಂತರದಲ್ಲಿ ಸರಣಿ ಜಯ ದಾಖಲಿಸಲಿದೆ. ಇದನ್ನೂ ಓದಿ: ಒಂದೇ ಮ್ಯಾಚ್‌ನಲ್ಲಿ 12 ವಿಕೆಟ್ ಪಡೆದು ಅಶ್ವಿನ್ ಸಾಧನೆ – ವಿಂಡೀಸ್ ವಿರುದ್ಧ ಭಾರತಕ್ಕೆ ಜಯದ ಮುನ್ನಡೆ
Advertisement
ಉಳಿದ ಎರಡು ಪಂದ್ಯಗಳಲ್ಲಿ ಒಂದು ಪಂದ್ಯ ಸೋತು ಮತ್ತೊಂದು ಪಂದ್ಯ ಗೆದ್ದರೆ ಆಸ್ಟ್ರೇಲಿಯಾ ತಂಡ 3-2 ಅಂತರದಲ್ಲಿ ಪ್ರಸಕ್ತ ಸಾಲಿನ ಆಷಸ್ ಸರಣಿಯನ್ನು ಗೆದ್ದುಕೊಳ್ಳಲಿದೆ. ಈ ಅಂತರದಲ್ಲಿ ಸರಣಿ ಗೆದ್ದು ವಿಶ್ವದ ನಂ.1 ಪಟ್ಟ ಕೂಡ ಪಡೆಯಬೇಕಾದರೆ, ಟೀಂ ಇಂಡಿಯಾ ತನ್ನ ಮುಂದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋಲಬೇಕು. ಇಲ್ಲವಾದರೆ ಟೀಂ ಇಂಡಿಯಾದ ನಂ.1 ಸ್ಥಾನದಲ್ಲಿ ಮುಂದುವರಿಯಲಿದೆ.
2015ರ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಥಿರತೆ ಕಾಯ್ದುಕೊಂಡಿರುವ ಭಾರತ ಹೆಚ್ಚಿನ ಸಮಯ ಅಗ್ರಸ್ಥಾನದಲ್ಲಿ ಉಳಿದಿದೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನ ಮೊದಲ ಎರಡು ಆವೃತ್ತಿಯಲ್ಲಿ ರನ್ನರ್ ಅಪ್ ಪಡೆದುಕೊಂಡಿರುವ ಭಾರತ 3ನೇ ಆವೃತ್ತಿಯಲ್ಲಿ ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟ ಗೆಲ್ಲುವ ವಿಶ್ವಾಸ ಹೊಂದಿದೆ. ಒಂದು ವೇಳೆ ಭಾರತ ಗೆದ್ದರೆ ಟಿ20, ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ ಮೂರು ಆವೃತ್ತಿಗಳಲ್ಲೂ ಚಾಂಪಿಯನ್ ಆಗಿ ಹೊರಹೊಮ್ಮಿದ 2ನೇ ತಂಡವಾಗಲಿದೆ. ಭಾರತ ಎಂ.ಎಸ್ ಧೋನಿ ನಾಯಕತ್ವದಲ್ಲಿ 2007ರಲ್ಲಿ ಟಿ20 ವಿಶ್ವಕಪ್ ಹಾಗೂ 2011ರಲ್ಲಿ ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಜಯ ಸಾಧಿಸಿದೆ.
Web Stories