ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರ ಬಂತು. ಆದ್ರೆ ಸರ್ಕಾರ ರಚಿಸುವಷ್ಟು ಬಹುಮತ ಮಾತ್ರ ಪಡೆಯಲು ಸಾಧ್ಯವಾಗಲಿಲ್ಲ. ಆದ್ರು ಸರ್ಕಾರ ರಚನೆಗಾಗಿ ರಾಜ್ಯಪಾಲರಿಂದ ಅನುಮತಿ ಪಡೆದುಕೊಂಡು ಮೇ 17ರಂದು ಬಿ.ಎಸ್.ಯಡಿಯೂರಪ್ಪ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದ್ರು. ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಪಡಿಸುವ ಮುನ್ನವೇ ಸೋಲೊಪ್ಪಿಕೊಂಡ ನೂತನ ಸಿಎಂ ವಿದಾಯದ ಭಾಷಣ ಮಾಡಿ ರಾಜಿನಾಮೆ ಸಲ್ಲಿಸಿದ್ರು.
ಈ ಎಲ್ಲ ಬೆಳವಣಿಗೆಗಳ ನಡುವೆ ದೊಡ್ಡ ಪಕ್ಷವಾಗಿದ್ದ ಬಿಜೆಪಿ ಸೋತಿದ್ದು ಎಲ್ಲಿ ಎಂಬುದರ ಬಗ್ಗೆ ಚರ್ಚೆಗಳು ಆರಂಭವಾಗಿದೆ.
Advertisement
* ಬಿಜೆಪಿ ಎಡವಿದ್ದು ಎಲ್ಲಿ…?
> ಮೈತ್ರಿಯ ಸೂಕ್ಷ್ಮತೆಯನ್ನು ಅರಿಯದೇ ಹೋಗಿದ್ದು
> ಜೆಡಿಎಸ್, ದೇವೇಗೌಡರ ನಡೆಯ ಬಗ್ಗೆ ಗೊಂದಲಕ್ಕೀಡಾಗಿದ್ದು
> ರಾಜ್ಯ ಬಿಜೆಪಿ ನಾಯಕರು ಬಿಎಸ್‍ವೈ ಅವರನ್ನ ಒಂಟಿಯಾಗಿಸಿದ್ದು
> ಅನಂತಕುಮಾರ್, ಡಿವಿಎಸ್, ಈಶ್ವರಪ್ಪ, ಅಶೋಕ್ ಕೈಕಟ್ಟಿ ಕುಳಿತಿದ್ದು
> ರಾಮುಲು, ಉಮೇಶ್ ಕತ್ತಿ, ಶೋಭಾ ಕರಂದ್ಲಾಜೆ ಮಾತ್ರ ಕಸರತ್ತು ಮಾಡಿದ್ದು
> ಬಿಜೆಪಿ ರಾಷ್ಟ್ರೀಯ ನಾಯಕರು ಲೇಟ್ ಆಗಿ ಎಂಟ್ರಿ ಕೊಟ್ಟಿದ್ದು
> ಬಹುಮತ ಸಾಬೀತಿಗೆ 7 ದಿನ ಸಮಯವನ್ನ ಕೇಳದೆ ಹೋಗಿದ್ದು
> ಅಗತ್ಯ ದಾರಿಗಳ ಬಗ್ಗೆ ಎಚ್ಚರಿಕೆ ಹೆಜ್ಜೆ ಇಡದೇ ಹೋಗಿದ್ದು
Advertisement
Advertisement
ಇತ್ತ ಯಡಿಯೂರಪ್ಪರ ರಾಜಿನಾಮೆ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ರಚಿಸಿಕೊಂಡು ಸರ್ಕಾರ ರಚನೆಗೆ ಮುಂದಾಗಿವೆ. ಸೋಮವಾರ ಮಧ್ಯಾಹ್ನ 12.30ಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸರ್ಕಾರ ರಚಿಸಲು ವಿಫಲವಾದ ಬಿಜೆಪಿಯ ಮುಂದಿನ ನಡೆ ಏನು ಎಂಬುದು ಈ ಕೆಳಗಿನಂತಿದೆ.
Advertisement
* ಬಿಜೆಪಿ ಮುಂದೇನು…?
> ಬಹುಮತ ಸಾಬೀತು ವೇಳೆ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನ ದೂರ ಇರುವಂತೆ ನೋಡಿಕೊಳ್ಳುವುದು
> ಕಾಂಗ್ರೆಸ್, ಜೆಡಿಎಸ್ ವಿರುದ್ಧ ರಾಜ್ಯದಲ್ಲಿ ರಾಜಕೀಯ ಹೋರಾಟ ನಡೆಸುವುದು.
> ಲಿಂಗಾಯತ ನಾಯಕನನ್ನು ಸಿಎಂ ಆಗಲು ಬಿಡಲಿಲ್ಲ ಅಂತಾ ಬಿಂಬಿಸೋದು.
> ಸಿಎಂ ಸ್ಥಾನ ತಪ್ಪಿದ ಅನುಕಂಪವನ್ನ ವೋಟ್ ಬ್ಯಾಂಕ್ ಆಗಿ ಪರಿವರ್ತಿಸಲು ಪ್ರಯತ್ನ.
> ಲೋಕಸಭಾ ಚುನಾವಣೆಗೆ ತಯಾರಾಗೋದು, ಹೆಚ್ಚು ಸ್ಥಾನ ಗೆಲ್ಲಲು ಪ್ಲಾನ್ ಮಾಡೋದು.
> ಯಾವಾಗ ಬೇಕಾದ್ರೂ ಚುನಾವಣೆ ನಡೆಯಬಹುದು ಅಂತೇಳಿ ಎಲೆಕ್ಷನ್‍ಗೆ ಸಿದ್ಧವಾಗೋದು.
> ಬಿಎಸ್‍ವೈ ನೇತೃತ್ವದಲ್ಲೇ ರಾಜ್ಯದಲ್ಲಿ ಪ್ರವಾಸ ಮಾಡೋದು, ಪಕ್ಷ ಸಂಘಟನೆ ಮಾಡೋದು.