ನವದೆಹಲಿ: ಭಾರತವು 5G ಮೊಬೈಲ್ ನೆಟ್‌ವರ್ಕ್ ಪ್ರಾರಂಭಕ್ಕೆ ಉತ್ಸುಕವಾಗಿದೆ. 5G ನೆಟ್‌ವರ್ಕ್ ಹೇಗೆ ಕೆಲಸ ಮಾಡುತ್ತದೆ, 4Gಗಿಂತ ಹೇಗೆ ಭಿನ್ನ, ತಾಂತ್ರಿಕ ಹಾಗೂ ವ್ಯವಹಾರ ಕ್ಷೇತ್ರದ ಇದರ ಪರಿಣಾಮ ಹೇಗಿರುತ್ತದೆ ಎಂಬ ಬಗ್ಗೆ ಗ್ರಾಹಕರಲ್ಲಿ ಹಲವಾರು ಪ್ರಶ್ನೆಗಳು ಉದ್ಭವಿಸುತ್ತವೆ. ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
5G ಮತ್ತು 4G ವೇಗದ ವ್ಯತ್ಯಾಸ:
5G ಹೆಚ್ಚು ವೇಗದಿಂದ ಕೂಡಿದೆ. ಡೌನ್‌ಲೋಡ್‌ಗಳು ಪ್ರತಿ ಸೆಕೆಂಡಿಗೆ 10 GB (ಗಿಗಾಬೈಟ್) ಅಥವಾ ಅದಕ್ಕಿಂತ ಹೆಚ್ಚಿನದ್ದಾಗಿದೆ. TRAI ಪ್ರಕಾರ ಭಾರತದಲ್ಲಿ 4G ಬಳಕೆದಾರರಿಗೆ ಪ್ರಸ್ತುತ ಸರಾಸರಿ ಡೌನ್‌ಲೋಡ್ ವೇಗಕ್ಕಿಂತ 5G 30 ಪಟ್ಟು ವೇಗವಾಗಿದೆ. ಇದು ಸುಮಾರು 21 Mbps (ಸೆಕೆಂಡಿಗೆ ಮೆಗಾಬೈಟ್) ಸರಾಸರಿ ವೇಗ ಹೊಂದಿದೆ.
Advertisement
Advertisement
5G ಇಂಟರ್ನೆಟ್ ಅನ್ನು ಬಳಸಿಕೊಂಡು 5 GB ಚಲನಚಿತ್ರವನ್ನು 35 ಸೆಕೆಂಡುಗಳಲ್ಲಿ (4Gಯಲ್ಲಿ 40 ನಿಮಿಷ ಆಗುತ್ತದೆ) ಡೌನ್‌ಲೋಡ್ ಮಾಡಬಹುದು. 3G ಯಲ್ಲಿ 2 ಗಂಟೆ ಬೇಕಾಗುತ್ತದೆ. 2G ಯಲ್ಲಿ 2.8 ದಿನಗಳ ಸಮಯ ಹಿಡಿಯುತ್ತದೆ.
Advertisement
5Gಯಿಂದ ಏನನ್ನು ನಿರೀಕ್ಷಿಸಬಹುದು?
ಉತ್ತಮ ವೇಗದಲ್ಲಿ 4K ಗುಣಮಟ್ಟದ ಲೈವ್ ವೀಡಿಯೊ ಪ್ರಸಾರ, ಉತ್ತಮ ಮತ್ತು ಗುಣಮಟ್ಟದ ವೀಡಿಯೊ ಕರೆಗಳು, ಮಲ್ಟಿಮೀಡಿಯಾ ಸಂವಹನ, ವೀಡಿಯೋ ಗೇಮ್ ಆಡುವಾಗ ನೆಟ್‌ವರ್ಕ್‌ನಲ್ಲಿ ಹೆಚ್ಚಿನ ಸಮಸ್ಯೆ ಕಾಣಿಸುವುದಿಲ್ಲ. ಇದನ್ನೂ ಓದಿ: 5ಜಿ ಹರಾಜು – ಮೊದಲ ದಿನವೇ 1.45 ಲಕ್ಷ ಕೋಟಿ ಮೀರಿದ ಬಿಡ್ ಮೊತ್ತ
Advertisement
ಉದ್ಯಮದ ಮೇಲೆ 5G ಪರಿಣಾಮ ಏನು?
5G ರೋಲ್‌ಔಟ್ ರಿಮೋಟ್ ಡೇಟಾ ಮಾನಿಟರಿಂಗ್ ಮತ್ತು ಟೆಲಿಮೆಡಿಸಿನ್‌ನಲ್ಲಿ ಹೆಚ್ಚಿನ ಅಭಿವೃದ್ಧಿ ತರುವ ನಿರೀಕ್ಷೆಯಿದೆ. ನಿರ್ದಿಷ್ಟವಾಗಿ, ರಿಮೋಟ್ ಸರ್ಜರಿಗಳು ಮತ್ತು ರಿಮೋಟ್ ಸೆನ್ಸಿಂಗ್ ಸ್ಟೇಷನ್‌ಗಳ ಮೇಲ್ವಿಚಾರಣೆಯನ್ನು ಸಕ್ರಿಯಗೊಳಿಸುವಾಗ ಸಹಾಯಕವಾಗಿರುತ್ತದೆ.
5G ನೆಟ್‌ವರ್ಕ್ ದಟ್ಟಣೆಯನ್ನು ಕಡಿಮೆ ಮಾಡುತ್ತದೆಯೇ?
5Gಯಿಂದ ಗ್ರಾಹಕರಿಗೆ ದೊಡ್ಡ ಪ್ರಯೋಜನವೆಂದರೆ ಉತ್ತಮ ನೆಟ್‌ವರ್ಕ್ ನಿರ್ವಹಣೆ. ಹೆಚ್ಚಿನ ವೇಗದ ನೆಟ್‌ವರ್ಕ್ ಸ್ವಭಾವತಃ ಹೆಚ್ಚು ಪರಿಣಾಮಕಾರಿಯಾಗಿದೆ. ಮೂರು ವಿಭಿನ್ನ ಬ್ಯಾಂಡ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ. 100MHz ಲೋವ್ ಬ್ಯಾಂಡ್, 2.3GHz ಮಿಡ್-ಬ್ಯಾಂಡ್ ಮತ್ತು ಹೈ ಬ್ಯಾಂಡ್. ಮಿಡ್-ಬ್ಯಾಂಡ್ ಆವರ್ತನಗಳು ಕವರೇಜ್ ಮತ್ತು ವೇಗದ ಅತ್ಯುತ್ತಮ ಸಮತೋಲನವನ್ನು ನೀಡುತ್ತವೆ. ಇದು ಬಳಕೆದಾರರಿಗೆ ಹೆಚ್ಚಿನ ಸ್ಪೆಕ್ಟ್ರಮ್ ಅನ್ನು ಮುಕ್ತಗೊಳಿಸುತ್ತದೆ. ಹೆಚ್ಚಿನ ಜನಸಂದಣಿ ಮತ್ತು ಕ್ರೀಡಾಂಗಣಗಳಲ್ಲಿಯೂ ಸಹ ಬಳಕೆದಾರರು ಉತ್ತಮ ನೆಟ್‌ವರ್ಕ್ ಸಂಪರ್ಕವನ್ನು ಹೊಂದಿದ್ದಾರೆ ಎಂಬುದನ್ನು ಇದು ಖಚಿತಪಡಿಸುತ್ತದೆ. ಇದನ್ನೂ ಓದಿ: 5ಜಿ ಹರಾಜು – ಸ್ಪೀಡ್ ಎಷ್ಟಿರುತ್ತೆ ಗೊತ್ತಾ?
5G ಪ್ರಾರಂಭವಾದ ನಂತರ ಹೆಚ್ಚಿನ ಬಳಕೆದಾರರಿಗೆ ಸಿಗುವ ಪ್ರಯೋಜನಗಳೆಂದರೆ, ವೇಗ ಮತ್ತು ಉತ್ತಮ ನೆಟ್‌ವರ್ಕ್ ಸಂಪರ್ಕ. ಇದು ಮುಂದಿನ ಪೀಳಿಗೆಯ ನೆಟ್‌ವರ್ಕ್ ಕಂಪ್ಯೂಟಿಂಗ್‌ನ ಭವಿಷ್ಯದ ಬೆನ್ನೆಲುಬಾಗಿ ರೂಪುಗೊಳ್ಳುತ್ತಿದೆ. ಮುಂದಿನ ಕೆಲವು ವರ್ಷಗಳಲ್ಲಿ ನಿಜವಾದ ಅನುಕೂಲತೆಯ ಪರಿಣಾಮ ಗೋಚರಿಸುತ್ತದೆ.