ಬೆಂಗಳೂರು: ಮಂಗಳೂರಿನಲ್ಲಿ (Mangaluru) ನಡೆದ ಕುಕ್ಕರ್ ಸ್ಫೋಟ (Cooker Blast) ಪ್ರಕರಣದ ಆರೋಪಿ ಶಾರೀಕ್‌ನನ್ನು (Shariq) ಟೆರರಿಸ್ಟ್ (Terrorist) ಎಂದು ಯಾವ ತನಿಖೆಯನ್ನೂ ನಡೆಸದೇ ಹೇಗೆ ಘೋಷಣೆ ಮಾಡಿದ್ದೀರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಪ್ರಶ್ನಿಸಿದ್ದಾರೆ.
ಪ್ರೆಸ್ ಕ್ಲಬ್‌ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಂಗಳೂರಿನಲ್ಲಿ ನಡೆದ ಸ್ಫೋಟ ಮುಂಬೈ ದಾಳಿ ಅಥವಾ ಪುಲ್ವಾಮಾ, ಕಾಶ್ಮೀರದಲ್ಲಿ ಆದಂತೆ ಆಗಲಿಲ್ಲ. ಅದೇನೋ ಕುಕ್ಕರ್ ಟೆರರಿಸ್ಟ್ ಎಂದುಕೊಂಡು ವೋಟರ್ ಐಡಿ ಹಗರಣವನ್ನು ಮುಚ್ಚಿ ಹಾಕಿದರು. ತನಿಖೆ ನಡೆಸದೇ ಇದು ಉಗ್ರ ಕೃತ್ಯ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಅಷ್ಟು ಸ್ಪೀಡ್ ಆಗಿ ಹೇಗೆ ಟ್ವೀಟ್ ಮಾಡಿದ್ರು ಎಂದು ಪ್ರಶ್ನಿಸಿದ್ದಾರೆ.
Advertisement
Advertisement
ಬೆಂಗಳೂರಿನ ವೋಟರ್ ಐಡಿ ಹಗರಣದ ವಿಷಯನ್ನು ಬಿಜೆಪಿ ಡೈವರ್ಟ್ ಮಾಡಿದೆ. ಶಿವಮೊಗ್ಗಕ್ಕೆ, ಮಂಗಳೂರು, ಮಲೆನಾಡು ಭಾಗಕ್ಕೆ ಯಾಕೆ ತನಿಖೆ ಹೋಗಲ್ಲ. ಎಲ್ಲಾ ಬೆಂಗಳೂರಿನಲ್ಲೇ ತನಿಖೆ ಆಗುತ್ತಿದೆ. ಜನರು ದಡ್ಡರಾ? ಜನರ ಭಾವನೆಗಳ ಮೇಲೆ ಸರ್ಕಾರ ಆಟ ಆಡುತ್ತಿದೆ ಎಂದು ಸಿಟ್ಟು ಹೊರ ಹಾಕಿದರು. ಇದನ್ನೂ ಓದಿ: ಬೆಳಗಾವಿಯಲ್ಲಿ ಮರಾಠಿ ಭಾಷಿಕ ಪುಂಡರ ಪುಂಡಾಟ- ಸರ್ಕಾರಿ ವಾಹನದ ಮೇಲೆ ಕಲ್ಲು ತೂರಾಟ
Advertisement
Advertisement
ಬಿಜೆಪಿ ಸರ್ಕಾರದ ಕೊನೆ ದಿನಗಳು ಬಂದಿದೆ. ಇನ್ನೇನು 100 ದಿನ ಇದೆ. ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆ ಮಾಡುತ್ತೀರಿ. ಶಿವಮೊಗ್ಗ, ಮಂಗಳೂರು, ಉಡುಪಿ ಕಡೆ ಯಾಕೆ ಯಾರೂ ಬಂಡವಾಳ ಹೂಡಿಕೆ ಮಾಡುತ್ತಿಲ್ಲ. ಶಿವಮೊಗ್ಗದಲ್ಲಿ ಕಮಲದ ರೂಪದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಆಗುತ್ತಿದೆ. ಯಾಕೆ ಆ ಭಾಗದಲ್ಲಿ ಹೂಡಿಕೆ ಆಗುತ್ತಿಲ್ಲ. ಯಾರು ಎಲ್ಲಿ ಹೂಡಿಕೆ ಮಾಡಿದ್ದಾರೆ? ಪಟ್ಟಿಯನ್ನು ಬಿಡುಗಡೆ ಮಾಡಲಿ ಎಂದು ಡಿಕೆಶಿ ಸರ್ಕಾರಕ್ಕೆ ಸವಾಲು ಎಸೆದರು. ಇದನ್ನೂ ಓದಿ: ಬಿಜೆಪಿಗೆ 66-70 ಸ್ಥಾನ ಸಿಗುತ್ತೆ, ನಾವು ಗೆಲ್ತೀವಿ – ಡಿಕೆಶಿಯಿಂದ ಕಾಂಗ್ರೆಸ್ ಸಮೀಕ್ಷೆ ರಿಸಲ್ಟ್ ಔಟ್