ಬೀಜಿಂಗ್: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಎರಡು ಮರಗಳ ಮಧ್ಯೆ ಸಿಲುಕಿಕೊಂಡಿರುವ ಘಟನೆ ಚೀನಾದ ಸುಯಿಹುವಾ ಸಿಟಿ ಬಳಿಯ ಹೀಲೋಂಗ್ಜಿತಾಂಗ್ ಪ್ರಾಂತ್ಯದ ಹೆದ್ದಾರಿಯಲ್ಲಿ ನಡೆದಿದೆ.
ಚಾಲಕ ಕಾರನ್ನು ಅತಿವೇಗವಾಗಿ ಚಲಾಯಿಸುತ್ತಿದ್ದು, ರಾತ್ರಿ ಬೆಳಕು ಕಡಿಮೆ ಇದ್ದ ಕಾರಣ ಕಾರು ನಿಯಂತ್ರಣ ತಪ್ಪಿದೆ. ನಿಯಂತ್ರಣ ತಪ್ಪಿದ ಕಾರು ಹೆದ್ದಾರಿಯ ಪಕ್ಕದ ಎರಡು ಮರಗಳ ನಡುವೆ ಸಿಲುಕಿಕೊಂಡಿದೆ.
Advertisement
ಕಾರಿನಲ್ಲಿದ್ದ ಐವರು ಕಾರಿನಿಂದ ಹೊರ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Advertisement
ಅಪಘಾತವಾದ ಬಳಿಕ ಬೆಳಗ್ಗೆ ದಾರಿಹೋಕರನ್ನು ಈ ಕಾರು ಆಕರ್ಷಿಸಿದ್ದು, ನಂತರ ಸ್ಥಳೀಯ ಪೊಲೀಸರು ಭೇಟಿ ನೀಡಿ ಕಾರನ್ನು ತೆರವುಗೊಳಿಸಿದ್ದಾರೆ. ಕಾರಿನ ಬಾಗಿಲುಗಳು ಕಟ್ ಆಗಿದ್ದು, ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
Advertisement
Advertisement