ಕುಂಭಮೇಳವು ಪ್ರತಿ ಮೂರು ವರ್ಷಗಳಿಗೊಮ್ಮೆ ನಾಲ್ಕು ವಿಭಿನ್ನ ಸ್ಥಳಗಳಲ್ಲಿ ನಡೆಯುತ್ತದೆ. ಪ್ರತಿ 12 ವರ್ಷಗಳಿಗೊಮ್ಮೆ ಪ್ರಯಾಗರಾಜ್‌ನಲ್ಲಿ ಮಹಾಕುಂಭವನ್ನು ಆಯೋಜಿಸಲಾಗುತ್ತದೆ. ಆದರೆ ಈ ಬಾರಿಯ ಮಹಾಕುಂಭ ಮೇಳ ಬಹಳ ವಿಶೇಷವಾಗಿದ್ದು, 144 ವರ್ಷಗಳ ಬಳಿಕ ಈ ಕುಂಭಮೇಳ ನಡೆಯುತ್ತಿದೆ.
ಕುಂಭಮೇಳ ಇದು ಪ್ರತಿ 3 ವರ್ಷಗಳಿಗೊಮ್ಮೆ ನಡೆಯುವ ಒಂದು ರೀತಿಯ ಜಾತ್ರೆ. ಇದನ್ನು ಕುಂಭ ಎಂದು ಕರೆಯಲಾಗುತ್ತದೆ. ಹರಿದ್ವಾರ ಮತ್ತು ಪ್ರಯಾಗ್ರಾಜ್‌ನಲ್ಲಿ ಪ್ರತಿ 6 ವರ್ಷಗಳಿಗೊಮ್ಮೆ ನಡೆಯುವ ಕುಂಭವನ್ನು ಅರ್ಧ ಕುಂಭ ಎಂದು ಕರೆಯಲಾಗುತ್ತದೆ. ಪ್ರಯಾಗರಾಜ್‌ಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಕುಂಭವನ್ನು ಪೂರ್ಣ ಕುಂಭಮೇಳ ಎಂದು ಕರೆಯಲಾಗುತ್ತದೆ. 144 ವರ್ಷಗಳಿಗೊಮ್ಮೆ ನಡೆಯುವ ಕುಂಭವನ್ನು ಮಹಾಕುಂಭಮೇಳ ಎಂದು ಕರೆಯಲಾಗುತ್ತದೆ.
Advertisement
ಈ ಬಾರಿ ಪ್ರಯಾಗರಾಜ್‌ದಲ್ಲಿ ಜನವರಿ 13 ರಿಂದ ಫೆಬ್ರವರಿ 26 ರವರೆಗೆ ಮಹಾಕುಂಭಮೇಳ ನಡೆಯಲಿದೆ. ಸದ್ಯ ಮಹಾಕುಂಭ ಮೇಳಕ್ಕೆ ದೇಶವೇ ಭರದಿಂದ ಸಂಭ್ರಮದಿಂದ ಸಜ್ಜಾಗುತ್ತಿದೆ. 12 ವರ್ಷಗಳ ನಂತರ ಬರುವ ಮಹಾಕುಂಭ ಮೇಳ ಇದಾಗಿದ್ದು, ನಡೆಯಲಿರುವ ಮಹಾ ಕುಂಭಮೇಳಕ್ಕೆ 40-45 ಕೋಟಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಮಹಾಕುಂಭ ಮೇಳ ಕೇವಲ ಉತ್ಸವ ಮಾತ್ರವಲ್ಲ ಸಾವಿರಾರು ವರ್ಷಗಳ ಐತಿಹ್ಯ, ಪುರಾತನ ಇತಿಹಾಸ ಹೊಂದಿರುವ ಉತ್ಸಾಹಭರಿತ ಸಾಂಸ್ಕೃತಿಕ ಕಾರ್ಯಕ್ರಮವಾಗಿದೆ. ಈ ಉತ್ಸವವು ಪ್ರಾಚೀನ ಹಿಂದೂ ಪುರಾಣ ಮತ್ತು ಭಾರತದ ಶ್ರೀಮಂತ ಧಾರ್ಮಿಕ ಪರಂಪರೆಯ ಸಾಕ್ಷಿಯಾಗಿದೆ.
Advertisement
Advertisement
ಧಾರ್ಮಿಕ ನಂಬಿಕೆ:
ಪ್ರತಿ 144 ವರ್ಷಗಳಿಗೊಮ್ಮೆ ಪ್ರಯಾಗರಾಜ್‌ನಲ್ಲಿ ಮಹಾಕುಂಭವನ್ನು ಆಯೋಜಿಸಲಾಗುತ್ತದೆ. 144 ಹೇಗೆ? 12 ರಿಂದ 12 ನ್ನು ಗುಣಿಸಿದಾಗ 144 ಆಗುತ್ತದೆ. ವಾಸ್ತವವಾಗಿ, ಕುಂಭ ಕೂಡ ಹನ್ನೆರಡು. ಅದರಲ್ಲಿ ನಾಲ್ಕು ಭೂಮಿಯಲ್ಲಿವೆ, ಉಳಿದ ಎಂಟು ಸ್ವರ್ಗದಲ್ಲಿವೆ ಎನ್ನುವ ನಂಬಿಕೆಯಿದೆ. ಆದ್ದರಿಂದ ಪ್ರತಿ 144 ವರ್ಷಗಳಿಗೊಮ್ಮೆ ಮಹಾಕುಂಭವನ್ನು ಪ್ರಯಾಗರಾಜ್‌ನಲ್ಲಿ ಆಯೋಜಿಸಲಾಗುತ್ತದೆ. ಮಹಾ ಕುಂಭದ ಮಹತ್ವವನ್ನು ಇತರ ಕುಂಭಗಳಿಗಿಂತ ಹೆಚ್ಚು ಎಂದು ಪರಿಗಣಿಸಲಾಗುತ್ತದೆ.
Advertisement
ಗ್ರಹಗಳ ಒಗ್ಗೂಡುವಿಕೆಯ ಮೂಲಕ ಕುಂಭಮೇಳದ ಸ್ಥಳವನ್ನು ನಿರ್ಧರಿಸಲಾಗುತ್ತದೆ. ಗುರು, ಸೂರ್ಯ ಮತ್ತು ಚಂದ್ರರ ಸ್ಥಾನವನ್ನು ಗಣನೆಗೆ ತೆಗೆದುಕೊಂಡು ಅದು ಇರುವ ರಾಶಿಚಕ್ರ ಚಿಹ್ನೆಯನ್ನು ಪರಿಶೀಲಿಸಲಾಗುತ್ತದೆ. ಗುರುವು ಸೂರ್ಯನ ಸುತ್ತ ಒಂದು ಸುತ್ತು ಬರಲು ಸುಮಾರು 12 ವರ್ಷಗಳನ್ನು ತೆಗೆದುಕೊಳ್ಳುವುದರಿಂದ, ಕುಂಭಮೇಳವನ್ನು 12 ವರ್ಷಗಳ ಅವಧಿಯಲ್ಲಿ ನಾಲ್ಕು ಬಾರಿ ಆಚರಿಸಲಾಗುತ್ತದೆ.
ಇತಿಹಾಸ:
ಹಿಂದೂ ಪುರಾಣಗಳ ಪ್ರಕಾರ ಕುಂಭಮೇಳದಲ್ಲಿ ದೇವರುಗಳು ಭೂಮಿಗೆ ಇಳಿದು ಭಕ್ತರನ್ನು ಆಶೀರ್ವದಿಸುತ್ತಾರೆ ಎಂದು ನಂಬಲಾಗಿದೆ. 8ನೇ ಶತಮಾನದ ಹಿಂದೂ ತತ್ವಜ್ಞಾನಿ ಆದಿ ಶಂಕರಾಚಾರ್ಯರು ಆಧ್ಯಾತ್ಮಿಕ ನಾಯಕರು ಮತ್ತು ತಪಸ್ವಿಗಳ ನಿಯಮಿತ ಸಭೆಗಳನ್ನು ಉತ್ತೇಜಿಸಿದರು. ಇದುವೇ ಕುಂಭಮೇಳ ನಡೆಸಲು ಪ್ರೇರಣೆ ನೀಡಿತು ಎನ್ನಲಾಗಿದೆ.
ಮಹಾಕುಂಭ ಮೇಳದ ಇತಿಹಾಸವು ಸಮುದ್ರ ಮಂಥನ ಹಿಂದೂ ಪುರಾಣವನ್ನು ಉಲ್ಲೇಖಿಸುತ್ತದೆ. ಸಮುದ್ರ ಮಂಥನದ ಸಮಯದಲ್ಲಿ ಭಗವಾನ್ ವಿಷ್ಣು ಮೋಹಿನಿಯ ವೇಷದಲ್ಲಿ ಅಮೃತದ ಪಾತ್ರೆಯನ್ನು ಹೊತ್ತೊಯ್ದಾಗ, ದೇವತೆಗಳು ಮತ್ತು ದಾನವರ ನಡುವಿನ ಹೋರಾಟದಲ್ಲಿ ಅಮೃತದ ನಾಲ್ಕು ಹನಿಯು ಪ್ರಯಾಗರಾಜ್, ಹರಿದ್ವಾರ, ನಾಸಿಕ್ ಮತ್ತು ಉಜ್ಜಯಿನಿಯಲ್ಲಿ ಬಿದ್ದಿತು ಹೀಗೆ ಈ ನಾಲ್ಕು ಸ್ಥಳಗಳು ಪವಿತ್ರ ತೀರ್ಥಸ್ಥಳಗಳಾದವು. ಈ ತೀರ್ಥಸ್ಥಳಗಳ ಮೂಲಕ ಹರಿಯುವ ನದಿಗಳಲ್ಲಿ ಸ್ನಾನ ಮಾಡುವುದರಿಂದ ಮೋಕ್ಷ ಸಿಗುತ್ತದೆ ಎಂದು ನಂಬಲಾಗಿದೆ.
ಗುಪ್ತರ ಆಡಳಿತ ಸಮಯದಲ್ಲಿ ಪವಿತ್ರ ನದಿಗಳ ಉದ್ದಕ್ಕೂ ದೇವಾಲಯಗಳು ಮತ್ತು ಸ್ನಾನ ಘಟ್ಟಗಳನ್ನು ನಿರ್ಮಿಸಿದಾಗ ಕುಂಭಮೇಳವು ಹೆಚ್ಚಿನ ಜನಸಮೂಹವನ್ನು ಆಕರ್ಷಿಸಲು ಪ್ರಾರಂಭಿಸಿತು. 12 ನೇ ಶತಮಾನದಿಂದ ಕುಂಭಮೇಳವು ರಾಜಮನೆತನದ ಪ್ರೋತ್ಸಾಹದೊಂದಿಗೆ ಒಂದು ಕಾರ್ಯಕ್ರಮವಾಗಿ ಪರಿಣಮಿಸಿದೆ. ಮೊಘಲ್ ಚಕ್ರವರ್ತಿಗಳು, ವಿಶೇಷವಾಗಿ ಚಕ್ರವರ್ತಿ ಅಕ್ಬರ್ ಆಳ್ವಿಕೆಯಲ್ಲಿ, ಕುಂಭಮೇಳಕ್ಕೆ ಹೆಚ್ಚಿನ ಗೌರವ ನೀಡಲಾಯಿತು.
ಸ್ವಾತಂತ್ರ್ಯಾನಂತರ ಜನವರಿ 1954 ರಲ್ಲಿ ಭಾರತೀಯ ಅಧಿಕಾರಿಗಳು ಮೊದಲ ಕುಂಭಮೇಳವನ್ನು ಆಯೋಜಿಸಿದ್ದರು. 1966 ರಲ್ಲಿ, ಐದನೇ ಪ್ರಮುಖ ಸ್ನಾನ ದಿನವಾದ ಮಾಘ ಪೂರ್ಣಿಮೆಯಂದು 7 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದರು ಎಂದು ವರದಿಯಾಗಿದೆ.
1975 ರಿಂದ ದೇಶಾದ್ಯಂತ ತುರ್ತು ಪರಿಸ್ಥಿತಿ ಹೇರಲಾಗಿದ್ದರೂ, 1977 ರಲ್ಲಿ 12 ಕುಂಭಮೇಳಗಳು ಪೂರ್ಣಗೊಂಡಿದ್ದವು. 2019 ರಲ್ಲಿ, ಪ್ರಯಾಗ್‌ರಾಜ್‌ನಲ್ಲಿ ನಡೆದ ಅರ್ಧ ಕುಂಭದಲ್ಲಿ ಹಲವಾರು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲಾಯಿತು, ಅದರಲ್ಲಿ ಶಾಹಿ ಸ್ನಾನದಲ್ಲಿ ಕಿನ್ನಾರ್ ಅಖಾಡವನ್ನು ಸೇರಿಸಲಾಯಿತು.