ಬೆಂಗಳೂರು: ಇಡೀ ರಾಜ್ಯ ಎಸ್.ಎಂ ಕೃಷ್ಣ (SM Krishna) ಅವರ ಅವಧಿಯಲ್ಲಿ ಉತ್ತುಂಗಕ್ಕೇರಿತ್ತು. ಹಾಗಂತ ಆ ಕಾಲದಲ್ಲಿ ರಾಜ್ಯ ಏನೂ ಸಂಪದ್ಭರಿತವಾಗಿರಲಿಲ್ಲ. ತೀವ್ರತರ ಬರಗಾಲದ ಬೇಗೆಯಲ್ಲಿ ಹೈರಾಣಾಗಿತ್ತು. ಈ ಮಧ್ಯೆ ಸಮಸ್ಯೆ ಜೊತೆಗೆ ಕಾವೇರಿ ಹೋರಾಟದ ಕಾವು ಹೆಚ್ಚಾಗಿತ್ತು. ಜೊತೆಗೆ ಸರ್ಕಾರಕ್ಕೆ ಬಂದೆರಗಿದ್ದ ಬಹು ದೊಡ್ಡ ಸಮಸ್ಯೆ ಅಂದ್ರೆ ಡಾ. ರಾಜ್ ಕುಮಾರ್ ಅಪಹರಣ. ಇದೆಲ್ಲದರ ನಡುವೆಯೇ ಕೋಲಾರ ಕಂಬಾಲಪಲ್ಲಿಯಲ್ಲಿ ಜಾತಿ ವ್ಯವಸ್ಥೆಯ ಕ್ರೂರ ಘಟನೆಯೊಂದು ನಡೆದಿತ್ತು.
ಏನಿದು ಕಂಬಾಲಪಲ್ಲಿ ದುರಂತ?
2000ರ ಮಾರ್ಚ್‌ನಲ್ಲಿ ಕೋಲಾರದ ಕಂಬಾಲಪಲ್ಲಿ ದುರಂತ (Kambalapalli Incident) ಸಂಭವಿಸಿತ್ತು. ಇದು ರಾಷ್ಟ್ರಮಟ್ಟದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಸವರ್ಣೀಯರು 7 ಮಂದಿ ದಲಿತರನ್ನ ಮನೆಯಲ್ಲಿ ಕೂಡಿ ಹಾಕಿ ಜೀವಂತವಾಗಿ ಸುಟ್ಟು ಹಾಕಿದ್ದರು. ಇದೊಂದು ಜಾತಿ ವ್ಯವಸ್ಥೆಯ ಕ್ರೂರ ಘಟನೆಯಾಗಿತ್ತು. ಇದನ್ನೂ ಓದಿ: ತಿಮ್ಮಪ್ಪನ ಹುಂಡಿಗೆ ವಾಚ್ ಹಾಕಿ ಬಂದ ಮೇಲೆ ಕೇಂದ್ರಮಂತ್ರಿಯಾಗಿದ್ದ ಎಸ್‌ಎಂಕೆ!
ಅಪರಾಧಿಗಳಿಗೇನೋ ಶಿಕ್ಷೆಯಾಯಿತು. ಆದ್ರೆ ಮುಖ್ಯಮಂತ್ರಿ ಅವತ್ತು ದಲಿತರ ಪರವಾಗಿ ನಿಂತು ಅವರಿಗೆ ರಕ್ಷಣೆ ನೀಡುವುದರ ಜೊತೆಗೆ ಮಾನವೀಯತೆಯ ದೃಷ್ಠಿಯಿಂದ ಸಮಸ್ಯೆ ಬಗೆಹರಿಸಿದ್ರು. ಪ್ರತಿ ದಲಿತ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟು 2 ಎಕರೆ ಜಮೀನು ಮಂಜೂರು ಮಾಡಿದ್ರು. ಆ ಬಳಿಕ ಕಂಬಾಲಪಲ್ಲಿ ದಲಿತರು ಸ್ವತಂತ್ರವಾಗಿ ಬದುಕೋ ಅವಕಾಶ ನಿರ್ಮಾಣವಾಯಿತು. ಇದನ್ನೂ ಓದಿ: ಮದುವೆಗೂ ಮುನ್ನ ಭಾವಿ ಪತ್ನಿ ಸಂದರ್ಶನ ಮಾಡಿದ್ದ ಕೃಷ್ಣ!
108 ದಿನ ತಂತಿ ಮೇಲಿನ ನಡಿಗೆ:
ತಮ್ಮ ಸ್ವಂತ ಶ್ರಮದಿಂದಲೇ ಎಸ್‌ಎಂ ಕೃಷ್ಣ ಅವರು ಸಿಎಂ ಆದ್ರು. ಆದ್ರೆ ಅವರು ಅವರು ಸಿಎಂ ಖುರ್ಚಿ ಏರಿದಾಗ ಅವರ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಸಾಲು ಸಾಲು ಸಂಕಷ್ಟಗಳು ಎದುರಾಗಿದ್ವು.. ಸಿಎಂ ಆದ ಮರು ವರ್ಷದಲ್ಲೇ ಡಾ.ರಾಜ್‌ಕುಮರ್ ಅಪಹರಣ ರಾಜ್ಯಾದ್ಯಂತ ಕಿಚ್ಚು ಹೆಚ್ಚಿಸಿತ್ತು. ತಮಿಳಿಗರು-ಕನ್ನಡಿಗರ ನಡುವೆ ಜೋರು ಗಲಾಟೆಗಳು ಆಗೋ ಲಕ್ಷಣಗಳಿದ್ದವು. ಇತ್ತ ತಮಿಳರ ಆಸ್ತಿ ಪಾಸ್ತಿ ಕಾಪಾಡೋದರ ಜೊತೆಗೆ ಕನ್ನಡಿಗರ ಆಸ್ತಿ ಪಾಸ್ತಿಯೂ ಕಾಪಾಡೋ ಜವಾಬ್ದಾರಿ ಎಸ್‌ಎಂ ಕೃಷ್ಣ ಅವರದ್ದಾಗಿತ್ತು. ತಮ್ಮ ಪಾಡಿಗೆ ತಾವು ಟೆನ್ನಿಸ್ ಆಡ್ತಿದ್ದಾಗ ಪಾರ್ವತಮ್ಮ ಅವರು ನೇರಾ ಕೃಷ್ಣ ಅವರಿಗೆ ಕಾಲ್ ಮಾಡಿ ಪತಿ ರಾಜ್‌ಕುಮಾರ್ ಕಿಡ್ನ್ಯಾಪ್ ಆಗಿರೋ ಬಗ್ಗೆ ವಿಚಾರ ತಿಳಿಸಿದ್ರು. ಆ ಕ್ಷಣ ದಿಕ್ಕು ತೋಚದಂತಾಗಿತ್ತು, 108 ದಿನಗಳ ಕಾಲ ಕೃಷ್ಣ ಅವರದ್ದು ತಂತಿಯ ಮೇಲಿನ ನಡಿಗೆ ಆಗಿತ್ತು. ಇದನ್ನೂ ಓದಿ: ಜಮ್ಮು-ಕಾಶ್ಮೀರದ ದಾಲ್ ಸರೋವರದಲ್ಲಿ ಮೊದಲ ಜಲ ಸಾರಿಗೆ ಆರಂಭಿಸಿದ ಉಬರ್ – ಬುಕ್ಕಿಂಗ್ ಹೇಗೆ?
ಇತ್ತ ದಿನ ಕಳೆಯುತ್ತಿತ್ತು. ವೀರಪ್ಪನ್ ರಾಜ್ ಕುಮಾರ್ ಬಿಡುಗಡೆ ಮಾಡೋಕೆ 50 ಕೋಟಿ ಡಿಮ್ಯಾಂಡ್ ಇಟ್ಟಿದ್ದ.. ಜೊತೆಗೆ ಜೈಲಲ್ಲಿದ್ದ ಆತನ ಸಹಚರರನ್ನು ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದ. ಇತ್ತ ರಾಜ್‌ಕುಮಾರ್ ಇಲ್ಲದ ಸಂದರ್ಭ ನೋಡಿಕೊಂಡು ದುರ್ಬಳಕೆ ಮಾಡಿಕೊಳ್ಳೋಕೆ ದುಷ್ಟ ಶಕ್ತಿಗಳು ಕಾದಿದ್ವು. ಅವುಗಳೆಲ್ಲವನ್ನೂ ಹತ್ತಿಕ್ಕಿ ನೇರಾ ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಆಗಿದ್ದ ಕರುಣಾನಿಧಿ ಅವರನ್ನ ಭೇಟಿ ಮಾಡಿ ಅಲ್ಲಿನ ಪತ್ರಕರ್ತ ನಕೀರನ್ ಸಹಾಯ ಪಡೆದು ಏನೇನೋ ಸರ್ಕಸ್ ಮಾಡಬೇಕಾಗಿ ಬಂತು. ಅಷ್ಟೂ ದಿನಗಳ ಕಾಲ ಹಗಲೂ ರಾತ್ರಿ ಎಸ್‌ಎಂ ಕೃಷ್ಣ ಒತ್ತಡ ಅನುಭವಿಸಿದ್ರು. ಜನರನ್ನೆಲ್ಲಾ ವಿಶ್ವಾಸಕ್ಕೆ ತೆಗೆದುಕೊಳ್ಳೋದರ ಜೊತೆಗೆ ವೀರಪ್ಪನ್ ರಾಜ್ ಕುಮಾರ್ ಮೇಲೆ ಯಾವುದೇ ದುಷ್ಕೃತ್ಯ ಹೇರದಂತೆ ನೋಡಿಕೊಳ್ಳೋದು ಅವತ್ತಿನ ಸವಾಲಾಗಿತ್ತು. ಕೊನೆಗೂ ರಾಜ್ ಕುಮಾರ್ ಅವರನ್ನು ಬಿಡಿಸಿಕೊಳ್ಳುವಲ್ಲಿ ಕೃಷ್ಣ ಯಶಸ್ವಿಯೂ ಆಗಿದ್ರು.
ಕೃಷ್ಣ ಅವರ ಅವಧಿಯಲ್ಲಿ ರಾಜ್ಯ ತೀವ್ರತರ ಬರಗಾಲಕ್ಕೆ ಸಿಲುಕಿತ್ತು. ಮೋಡ ಬಿತ್ತನೆ ಮೂಲಕ ರಾಜ್ಯದಲ್ಲಿ ಮಳೆ ಸುರಿಸಲು ನೋಡಿದ್ರು. ಆದ್ರೆ ಆ ಪ್ಲ್ಯಾನ್ ಸಕ್ಸಸ್ ಆಗಲಿಲ್ಲ.. ಮಕ್ಕಳಿಗೇನೋ ಶಾಲೆಯಲ್ಲಿ ಬಿಸಿಯೂಟ ನೀಡೋ ಮೂಲಕ ಹಸಿವು ನೀಗಿಸಿದ್ರು. ಆದ್ರೆ ರೈತರ ಪಾಡು ಅಧೋಗತಿ ಆಗಿತ್ತು. ಅದೇ ವೇಳೆ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಾ ಹೋದ್ವು. ಹೀಗೆ ರಾಜ್ಯದಲ್ಲಿ ನೀರಿಲ್ಲ. ಬರಗಾಲದ ಸಮಯದಲ್ಲೇ ತಮಿಳುನಾಡು ಕಾವೇರಿ ನೀರಿಗಾಗಿ ನ್ಯಾಯಾಲಯದ ಮೊರೆ ಹೋಗಿತ್ತು. ಆದ್ರೆ ನ್ಯಾಯಾಲಯ ತಮಿಳುನಾಡಿನ ಪರ ಆದೇಶ ಕೊಟ್ಟಿತ್ತು. ಆಗ ಸಂದಿಗ್ಧ ಸ್ಥಿತಿಗೆ ಸಿಲುಕಿದ್ದ ಕೃಷ್ಣ ಅವರು ರೈತರ ಹಿತ ಕಾಪಾಡೋದಾ ಅಥವಾ ನ್ಯಾಯಾಲಯ ಹೇಳಿದಂತೆ ನೀರು ಬಿಡುವುದಾ ಎಂದು ಗೊತ್ತಾಗದೇ ರೈತರನ್ನೇ ಕೇಳೋಣ ಅಂತ ಆ 72ರ ವಯಸ್ಸಲ್ಲೂ ಪಾದಯಾತ್ರೆ ಹಮ್ಮಿಕೊಂಡಿದ್ರು. ಆದ್ರೆ ಅವರ ಅದೃಷ್ಟವೋ ಏನೋ ಇನ್ನೇನು ಪಾದಯಾತ್ರೆ ಮಂಡ್ಯ ನಗರಕ್ಕೆ ತಲುಪುತ್ತಿದ್ದಂತೆ ರಾಜ್ಯದಲ್ಲಿ ವ್ಯಾಪಕ ಮಳೆಯಾಗಿ ತಮಿಳುನಾಡಿಗೆ ಸಾಕಷ್ಟು ನೀರು ಹರಿದುಹೋಗಿತ್ತು. ಇದನ್ನೂ ಓದಿ: ಸಂಭಲ್ ಬಳಿಕ ಮತ್ತೊಂದು ಮಸೀದಿ ವಿವಾದ – ಭಾರತದಲ್ಲಿ ಮಸೀದಿ ಮಂದಿರ ಕಗ್ಗಂಟು ಎಲ್ಲೆಲ್ಲಿ ಏನು?